ಆನೆ ಇಳಿದು ಕಮಲ ಹಿಡಿದ ಶಾಸಕ ಮಹೇಶ್

 

ವಿಜಯ ಸಂಘರ್ಷ



ಬೆಂಗಳೂರು: ಕೊಳ್ಳೆಗಾಲ ಮತಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಎಸ್‌ಪಿ ಶಾಸಕ ಮಾಜಿ ಸಚಿವ ಎನ್.ಮಹೇಶ್ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು.

ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್,ಸಿಎಂ ಬಸವರಾಜ ಬೊಮ್ಮಾಯಿ,ನಿಕಟಪೂರ್ವ ಸಿಎಂ  ಬಿ.ಎಸ್.ಯಡಿಯೂರಪ್ಪ ಪಕ್ಷವನ್ನು ಪ್ರತಿನಿಧಿಸುವ ಕೇಸರಿ ಶಾಲು ಹೊದಿಸಿ ಎನ್‌.ಮಹೇಶ್ ಅವರನ್ನು ಬಿಜೆಪಿಗೆ ಬರಮಾಡಿಕೊಂಡರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ,ಎನ್.ಮಹೇಶ್ ಚಳುವಳಿಯ ಹಿನ್ನೆಲೆಯಿಂದ ರಾಜಕೀಯಕ್ಕೆ ಬಂದವರಾಗಿದ್ದಾರೆ. ಅವರ ಸಂಘಟನಾ ಶಕ್ತಿ ಬಹು ದೊಡ್ಡದಿದ್ದು,ಮಹೇಶ್ ಶಾಸಕರಾಗುವ ಮೊದಲು ದಲಿತರ ಹೃದಯ ಗೆದ್ದು ಕೊಳ್ಳೆಗಾಲದ ಎಲ್ಲ ಜನಾಂಗ ಅವರನ್ನು ವಿಧಾನಸಭೆಗೆ ಚುನಾಯಿಸಿದ್ದಾರೆ. ಇದೀಗ ಬಿಜೆಪಿ ಪಕ್ಷದ ಸಿದ್ಧಾಂತ ಮನವರಿಕೆಯಾದ ಮೇಲೆ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಈ ಹಿಂದೆ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಸ್ವಯಂಪ್ರೇರಣೆಯಿಂದ ಬೆಂಬಲಿಸಿ ಸಹಕಾರ ಕೊಟ್ಟಿದ್ದರು.
ಇಂದು ಅವರು ಪಕ್ಷಕ್ಕೆ ಅಧಿಕೃತವಾಗಿ ಬರುತ್ತಿದ್ದಾರೆ.ಮಹೇಶ್ ಅವರ ಸೇವೆಯನ್ನು ಪಕ್ಷ , ಬಳಸಿಕೊಳ್ಳಲಿದೆ. ಬಿ.ವೈ.ವಿಜಯೇಂದ್ರ ಕೊಳ್ಳೆಗಾಲ ಭಾಗದಲ್ಲಿ ಸುತ್ತಾಡಿದ್ದಾರೆ. ವಿಜಯೇಂದ್ರ ಅವರ ಶ್ರಮಕ್ಕೆ ಮಹೇಶ್ ಶಕ್ತಿ ಸೇರಿ ಬಿಜೆಪಿಗೆ ಮತ್ತಷ್ಟು ಬಲ ಬಂದಂತಾ ಗಿದೆ. ಆ ಭಾಗದಲ್ಲಿ ಸಾಮರಸ್ಯದ ಅನ್ಯೋನ್ಯತೆ ಸ್ಥಾಪನೆಯಾಗಲಿದೆ.
ಈಗ ಹೊಸ ಸರ್ಕಾರ ಬರುವ ಜೊತೆಗೆ ಈ ಸಂದೇಶವೂ ಸೇರಿಕೊಂಡಿದೆ ಎಂದರು.

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಮಹೇಶ್ ಸೇರ್ಪಡೆ ಯಿಂದ ಪಕ್ಷಕ್ಕೆ ಆನೆ ಬಲ ಬಂದಂತಾ ಗಿದೆ.ಇಡೀ ರಾಜ್ಯ ಸುತ್ತಿ ಪಕ್ಷ ಕಟ್ಟುತ್ತೇವೆ.
ನಾಡಿನ ಉದ್ದಗಲಕ್ಕೂ ಪರಿಶಿಷ್ಟರು ಇದ್ದಾರೆ.ಮಹೇಶ್ ಸೇರ್ಪಡೆಯಿಂದ ಎಲ್ಲರೂ ಪಕ್ಷಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ.ಪರಿಶಿಷ್ಟರನ್ನು ಬಿಜೆಪಿಗೆ ಸೇರಿಸುವ ಕೆಲಸ ಆಗಬೇಕು.ಪಕ್ಷ ದಲಿತರ ಹಿಂದೆ ಇದೆ ಎನ್ನುವ ಸಂದೇಶ ಹೋಗಬೇಕು.ಈ ವೇದಿಕೆಯಲ್ಲಿ ಎಲ್ಲಾ ಗಣ್ಯರೇ ಇದ್ದಾರೆ.ಮಹೇಶ್ ಎಲ್ಲರ ಪ್ರೀತಿ‌ಗಳಿಸಿದ್ದಾರೆ.ದಲಿತ ನಾಯಕ ಸೇರಿದ್ದಾನೆಂಬುದು ಬೊಮ್ಮಾಯಿಗೆ ಗೊತ್ತಿದೆ. ಅವರು ಇದನ್ನ‌ ಗಮನ ದಲ್ಲಿಟ್ಟುಕೊಳ್ಳುತ್ತಾರೆ ಎನ್ನುವ ಮೂಲಕ
ಪರೋಕ್ಷವಾಗಿ ಮಹೇಶ್ ಗೆ ಸಚಿವ ಸ್ಥಾನದ ಬಗ್ಗೆ ಬಿಎಸ್‌ವೈ ಸುಳಿವು ನೀಡಿದರು.

ನೂತನ ಸಚಿವ ಸಂಪುಟವನ್ನು ಗುಣಗಾನ ಮಾಡಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಮಾನತೆಯಿಂದ ಕೂಡಿದೆ.ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂಪುಟ ರಚನೆಯಾಗಿದೆ.ಮುಂದಿನ ದಿನಗಳಲ್ಲಿ ರಾಜ್ಯ ಪ್ರವಾಸ ಮಾಡುತ್ತೇವೆ.
ಈ ಮೂಲಕ ಬಹಳಷ್ಟು ನಾಯಕರನ್ನ ಪಕ್ಷಕ್ಕೆ ಸೇರಿಲಿಕೊಳ್ಳಲಿದ್ದೇವೆ.ಮುಂದಿನ ಚುನಾವಣೆಯಲ್ಲಿ 135- 140 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ,ನಮ್ಮ ಪಕ್ಷಕ್ಕೆ ಮಹೇಶ್ ಸೇರ್ಪಡೆಯಾಗಿದ್ದಾರೆ. ರಾಜ್ಯದಲ್ಲಿ ಪರಿವರ್ತನೆಯ ಗಾಳಿ‌ ಬೀಸುತ್ತಿದೆ.ಬೇರೆಬೇರೆ ಪkshaಯಿಂದ ಬರುತ್ತಿದ್ದಾರೆ.ಮೋದಿ,ಬಿಎಸ್ ವೈ ಅಭಿವೃದ್ಧಿ ಪಥ ಇಲ್ಲಿಗೆ ತಂದಿದೆ. ದೆಹಲಿಯಲ್ಲಿ ಮಹೇಶ್ ಭೇಟಿ ಮಾಡಿ ನನ್ನ ಜೊತೆ ಪಕ್ಷದ ಬಗ್ಗೆ ಮಾತನಾಡಿ ದ್ದರು.ತತ್ವ,ಸಿದ್ಧಾಂತಗಳನ್ನು ಒಪ್ಪಿದ್ದರು. ಅವರ ಸೇರ್ಪಡೆ ಪಕ್ಷಕ್ಕೆ ಬಲ ತುಂಬಲಿದೆ ಎಂದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

1 ಕಾಮೆಂಟ್‌ಗಳು

ನವೀನ ಹಳೆಯದು