ಕೆ ಆರ್ ಪೇಟೆಯಲ್ಲಿ ಸುಸಜ್ಜಿತ ಹೈಟೆಕ್ ಪಾರ್ಕ್ ಉದ್ಘಾಟನೆ

 

ವಿಜಯ ಸಂಘರ್ಷ



ಕೆ ಆರ್ ಪೇಟೆ: ಗ್ರಾಮಭಾರತಿ ವಿದ್ಯಾ ಸಂಸ್ಥೆಯ ಪಕ್ಕದ ಆವರಣದಲ್ಲಿ ಗುಣಮಟ್ಟದ ಸುಸಜ್ಜಿತ ಹೈಟೆಕ್ ಪಾರ್ಕ್ ನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ ಸಿ ನಾರಾಯಣಗೌಡ  ಉದ್ಘಾಟಿಸಿದರು.

ಪಟ್ಟಣದ  ಹೇಮಾವತಿ ಬಡಾವಣೆಯ ಗ್ರಾಮ ಭಾರತಿ  ವಿದ್ಯಾ ಸಂಸ್ಥೆಯ  ಆವರಣದಲ್ಲಿ ವ್ಯಾಯಾಮ ಮಾಡಲು ಅಗತ್ಯ ಉಪಕರಣಗಳು  ಹೊಂದಿರುವ  ಹೈಟೆಕ್ ಪಾರ್ಕ್ ಆಗಿರುತ್ತದೆ.



ಉದ್ಘಾಟಿಸಿ ಮಾತನಾಡಿದ ಸಚಿವರು ನಾವೆಲ್ಲರೂ ಉತ್ತಮ ಆರೋಗ್ಯವನ್ನು ಕಾಪಾಡುವ ಸಲುವಾಗಿ ಯೋಗ, ವ್ಯಾಯಾಮ,ಧ್ಯಾನ,ಉತ್ತಮ ಹವ್ಯಾಸದ ಕಡೆ ಮೊರೆ ಹೋಗುತ್ತೇವೆ. ಪ್ರತಿನಿತ್ಯ ಸರಳ ವ್ಯಾಯಾಮ, ಕಾಲ್ನಡಿಗೆ, ಆಟಗಳನ್ನು ಆಡುವುದರ ಮೂಲಕ ಆರೋಗ್ಯ ಕಡೆ ಹೆಚ್ಚಿನ ಗಮನ ನೀಡುವುದರಿಂದ ಕ್ರಿಯಾ ಶೀಲರಾಗುತ್ತೇವೆ.ರೋಗ ರುಜಿನಗಳು ನಮ್ಮ ಸಮೀಪ ಸುಳಿಯುವುದಿಲ್ಲ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕೃಷಿ, ಹೈನುಗಾರಿಕೆಗೆ  ಹೆಚ್ಚಿನ ಹೆಚ್ಚಿನ ಪ್ರಮಾಣದಲ್ಲಿ ಜನರು ತೊಡಗುವುದ ರಿಂದ ರೈತರು ಉತ್ತಮ ಆರೋಗ್ಯವನ್ನು ಹೊಂದಿರುತ್ತಾರೆ.ಇಡೀ ಪ್ರಪಂಚಕ್ಕೆ ಕಂಟಕವಾಗಿರುವ ಕೊರೋನಾ ಕಾರಣವಾದ ಕಾರಣ ಎಲ್ಲರೂ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಬೇಕು, ಮಾಸ್ಕ್ ಧರಿಸಬೇಕು,ಸಾಮಾಜಿಕ ಅಂತರ ಕಾಪಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಆಗಬೇಕು.  ಆದ್ದರಿಂದ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಸಹಕರಿಸ ಬೇಕೆಂದರು.

ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಕೆ ಶ್ರೀನಿವಾಸ್, ಪುರಸಭಾ ಅಧ್ಯಕ್ಷ ಮಹಾದೇವಿ ನಂಜುಂಡ, ಬಿಜೆಪಿ ಓಬಿಸಿ ಅಧ್ಯಕ್ಷ ಸಾರಂಗಿ ನಾಗಣ್ಣ, ಪುರಸಭಾ ಸದಸ್ಯರಾದ ಬಸ್ ಸಂತೋಷ್ ಕುಮಾರ್,ಪ್ರಮೋದಕುಮಾರ್, ಬಿಜೆಪಿ ಮುಖಂಡರಾದ ಚೋಕನಹಳ್ಳಿ ಪ್ರಕಾಶ್,ಶೀಳನೆರೆ ಭರತ್, ಪ್ರಮೀಳಾ ವರದರಾಜೇಗೌಡ, ಮಿತ್ರ ಗಿರೀಶ್,  ಚಂದ್ರಶೇಖರ್, ಚಂದ್ರಕಲಾ ರಮೇಶ್, ಅಶ್ವಥಲಕ್ಷ್ಮಿ ಸಾದುಗೋನಹಳ್ಳಿ ಮಂಜೇಗೌಡ, ಪ್ರವೀಣ್, ಕಡಲೆಕಾಯಿ ಕೃಷ್ಣಪ್ಪ,  ಕಿಕ್ಕೇರಿ ಕುಮಾರ್, ಬಸವರಾಜು, ಗೋಪಾಲಕೃಷ್ಣ ಮತ್ತಿತರರಿದ್ದರು.

ವರದಿ:ಸಿ.ಆರ್ ಜಗದೀಶ್,ಕೆ. ಆರ್. ಪೇಟೆ.  ಮಂಡ್ಯ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು