ನಿಮ್ಮೊಂದಿಗೆ ನನ್ನದೊಂದು ಮಾತು.

 



ಹತ್ತಾರು ಪತ್ರಿಕೆಗಳ ವರದಿಗಾರಿಕೆ ಪಯಣ ಮುಗಿದಿದೆ.... ಉತ್ತಮ ಸಂಸ್ಥೆಗಳಲ್ಲಿ, ಅದ್ಭುತ ಸಹೋದ್ಯೋಗಿಗಳ ಜೊತೆ ಕೆಲಸ ಮಾಡಿದ ಖುಷಿಯೂ ಇದೆ. 

ಆದರೆ ಯಾಕೋ ಹೊಸ ಪಯಣ ಪ್ರಾರಂಭಿಸಬೇಕು ಅನ್ಸಿತ್ತು. ಸಾಕಷ್ಟು ಜನ  ಬಿಟ್ಟು ಯಾಕೆ ಹೋಗ್ತಿದೀಯಾ ಅಂತಾ ಕೇಳ್ತಿದ್ರು... ಅದ್ರೆ ಹೊಸ ಪ್ರಯೋಗಗಳಿಗೆ ಆಗಾಗ್ಗೆ ಒಗ್ಗಿಕೊಳ್ಳುವ ನಮ್ಮನ್ನ ನಾವು ಒಡ್ಡಿಕೊಳ್ಳುವ ಪ್ರಯತ್ನ ಮಾಡಬೇಕು ಅಲ್ವೇ. ಪ್ರಯತ್ನ ಫಲ ನೀಡಬಹುದು ನೀಡದೇ ಇರಬಹುದು... ಆದ್ರೆ ಪ್ರಯತ್ನ ಪಟ್ಟಿದ್ದೀನಿ ಅನ್ನೋ ಸಾರ್ಥಕತೆ ಸಿಗಬೇಕು ಅಷ್ಟೇ... ಹಾಗಾಗಿ ನನ್ನ ಕಂಫರ್ಟ್ ಝೋನ್ ಮೀರಿ ಒಂದು ಹೊಸ ಪ್ರಯತ್ನಕ್ಕೆ ಸಣ್ಣ ಹೆಜ್ಜೆ ಇಟ್ಟಿದ್ದೀನಿ... ಆ ಹೆಜ್ಜೆ ಹೆಗ್ಗುರುತು ಅಗಬಹುದು ಅಥವಾ ಗುರುತು ಸಿಗದಂತೆಯೇ ಹೋಗಬಹುದು... "ಬದುಕು ಕಟ್ಟಿಕೊಳ್ಳಲಾಗದ ಸ್ಥಿತಿಯಲ್ಲಿ ಬರಹ ಕೊಟ್ಟ "ಸಂಯುಕ್ತ ಕರ್ನಾಟಕ" "ವಿಜಯವಾಣಿ " "ವಿಶ್ವವಾಣಿ " ದಿನಪತ್ರಿಕೆಗಳಿಗೆ ಬರುವ ಮುಂಚೆ ರಾಷ್ತ್ರಶಿಲ್ಪಿ ವಾರಪತ್ರಿಕೆ ಯನ್ನು ನನ್ನ ಬರಹದ ಬದುಕಿನಲ್ಲಿ ಮರೆಯುವ ಹಾಗಿಲ್ಲ. 

 ನಾನು ಶಿವಮೊಗ್ಗದಲ್ಲಿ ಜಿಲ್ಲಾ ಮಟ್ಟದ ಒಂದು ಪತ್ರಿಕೆಯಲ್ಲಿ ನ್ಯೂಸ್ ಡೆಸ್ಕ್ ಗೆ ಸೇರಿದಾಗ ಏನೋ ಒಂದು ಕಸಿವಿಸಿ... ನಾನು ಮತ್ತೆ ವರದಿಗಾರಿಕೆಗೆ  ಹೋಗೋದು ಒಳ್ಳೆಯದೇನೋ ಎನ್ನುವ ಭಾವನೆ ತುಂಬಾ ಬಾರಿ ಕಾಡಿದ್ದಿದೆ... ಅದರೆ ಯುದ್ಧಕ್ಕೆ ಇಳಿದಾಗಿದೆ ಸುಲಭದಲ್ಲಿ ಶಸ್ತ್ರತ್ಯಾಗ ಮಾಡಬಾರದು ಎನ್ನುವ ಭಾವನೆ ಅದಕ್ಕಿಂತಲೂ ಹೆಚ್ಚು ಸದ್ದು ಮಾಡ ತೊಡಗಿತ್ತು.... ಹಾಗಾಗಿಯೇ ಇನ್ನೆಷ್ಟು ಪ್ರಯಾಣಿಸಲು ಸಾಧ್ಯವಾಗಿತ್ತೇನೋ ಗೊತ್ತಿಲ್ಲ... ಇನ್ನೊಂದು ಹೊಸ ಯುದ್ಧ ಪ್ರಾರಂಭವಾಗಿದೆ.ಹೋರಾಟ ಮಾಡುತ್ತೇನೋ ಗೊತ್ತಿಲ್ಲ. ಎಲ್ಲಾದಕ್ಕೂ ಕಾಲವೇ ಉತ್ತರ ನೀಡಬೇಕು.  ಡಿಜಿಟಲ್ ಯುಗದಲ್ಲಿ ವಿನೂತನ ಹೆಜ್ಜೆ ಇಟ್ಟು " ವಿಜಯ ಸಂಘರ್ಷ " ಎಂಬ ನೂತನ ವೆಬ್ (ಕೇಂದ್ರ ಸರ್ಕಾರದ ಅಧೀನಕ್ಕೊಳಪಟ್ಟ ನೋಂದಣಿ) ಡಿಜಿಟಲ್ ಮಾಧ್ಯಮದ ಮೂಲಕ ಪಾದಾರ್ಪಣೆ ಮಾಡಿರುವೆ. ಆರಂಭಿಸಿ ಸ್ವಲ್ಪ ಸಮಯವೇ ಆಗಿದೆ. ಟ್ರಯಲ್ ಸುದ್ದಿ ಮೂಲಕ ಹರಿಯಬಿಟ್ಟೆ. ಆಗ ಅನ್ಸಿದ್ದು ಇಂದು ಡಿಜಿಟಲ್ ಮಾಧ್ಯಮಕ್ಕೆ ಓದುಗರಿದ್ದಾರೆಂದು. ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಓದುಗರನ್ನು ಪಡೆದಿರುವ ತೃಪ್ತಿ ಇದ್ದು ಊಹಿಸಲು ಸಾಧ್ಯವಿಲ್ಲದ ಹಾಗೇ ಪ್ರತಿನಿತ್ಯ ನೋಡುಗರೊಂದಿಗೆ ಓದುಗರನ್ನು ಪಡೆದಿರುವ ತೃಪ್ತಿ ತಂದಿದೆ. ಈ ಹೆಜ್ಜೆ ಜಾರದಂತೆ ಕೈ ಹಿಡಿದು ನಡೆಸುವ ಜವಾಬ್ದಾರಿ ನಿಮ್ಮದು. ನಿಮ್ಮದೇ ಆದ "ವಿಜಯ ಸಂಘರ್ಷ " 


' ಬದಲಾವಣೆ ಜಗದ ನಿಯಮ, ಸಮಯ ಬದಲಾದಂತೆ ಸಂದರ್ಭ ಬದಲಾಗುತ್ತೆ, ಸಂದರ್ಭಕ್ಕೆ ತಕ್ಕಂತೆ ವ್ಯಕ್ತಿಯೂ ಬದಲಾಗುತ್ತಾನೆ'



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು