ಹಿಂದಿ ದಿವಸ್ ಆಚರಣೆ ಕರಾಳ ದಿನವನ್ನಾಗಿ ಆಚರಿಸಿದ ಕರ್ನಾಟಕ ರಣಧೀರ ವೇದಿಕೆ

 

ವಿಜಯ ಸಂಘರ್ಷ



ಕೊರಟಗೆರೆ: ಹಿಂದಿ ದಿವಸ್ ಆಚರಣೆ ಯನ್ನು ಕರಾಳ ದಿನವನ್ನವನ್ನಾಗಿ ಕರ್ನಾಟಕ ರಣಧೀರ ವೇದಿಕೆಯ ತಾಲ್ಲೂಕು ಘಟಕವು ತೀವ್ರವಾಗಿ ಖಂಡಿಸಿ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.

ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎನ್.ದೇವರಾಜ್  ನೇತೃತ್ವ ವಹಿಸಿದ್ದ ಪ್ರತಿಭಟನೆಯಲ್ಲಿ  ಮಾತನಾಡಿದ ತಾಲ್ಲೂಕು ಅಧ್ಯಕ್ಷ ಎಂ.ಎನ್. ಮಂಜುಸ್ವಾಮಿ ಹಿಂದಿ ದಿವಸ್ ಹೆಸರಿನಲ್ಲಿ  2500 ವರ್ಷಗಳ ಇತಿಹಾಸ ವಿರುವ ಕನ್ನಡ ಭಾಷೆ, ನಾಡು-ನುಡಿ ಮತ್ತು ಅಸ್ಮಿತೆಗೆ ದಕ್ಕೆ ಉಂಟಾಗುತ್ತದೆ. ಕನ್ನಡ ಭಾಷೆಯು ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ಭಾಷೆಯಾಗಿದೆ.ಇಂತಹ ಭಾಷೆಗೆ ಧಕ್ಕೆ ಬಂದರೆ ಕನ್ನಡಿಗರು ಸಿಡಿದೇಳುವುದು ನಿಶ್ಚಿತ. ನಾಡು-ನುಡಿಗೆ ಧಕ್ಕೆಯಾಗುವ ಸಂದರ್ಭ ಬಂದಾಗ ಸಿಡಿದೇಳುವ ಸ್ವಭಾವ  ಕನ್ನಡಿಗರದ್ದು ಎಂದು ಕಿಡಿ ಕಾರಿದರು.

ಹಿಂದಿ ಏರಿಕೆ ಮಾಡುವುದರೊಂದಿಗೆ ಹಿಂದಿ ದಿವಸ್ ಆಚರಣೆಗೆ ಮುಂದಾಗಿ ರುವ  ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳು ಹಿಂದಿ ಏರಿಕೆಯನ್ನ ಕೂಡಲೇ ಕೈಬಿಡದಿದ್ದರೆ  ರಣಧೀರರ ವೇದಿಕೆ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಸಿದರು.

ಉಪಾಧ್ಯಕ್ಷ ರವಿಕುಮಾರ್ ಮಾತನಾಡಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವ ಭೌಮ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಕನ್ನಡ ಭಾಷೆಯು ರಾಷ್ಟ್ರೀಯಭಾಷೆಯಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರು ಸಹ ಸರ್ಕಾರಗಳು ಗಮನ ಹರಿಸದೆ ಪರಭಾಷಿಗರ ಭಾಷೆಯನ್ನುಬಳಸುತ್ತಿದೆ. ರಾಜ್ಯದ ಎಲ್ಲ ಇಲಾಖೆಗಳಲ್ಲಿ, ಬ್ಯಾಂಕ್,ಅಂಚೆ ಕಚೇರಿ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಟೋಲ್  ಮತ್ತಿತರೆ ವ್ಯವಹಾರದಲ್ಲಿ  ಹೆಚ್ಚಿನ ಹಿಂದಿ ಭಾಷೆಯನ್ನು ಬಳಸುತ್ತಿದ್ದು ಇದರಿಂದ ರೈತರಿಗೆ,ಸಾರ್ವಜನಿಕರಿಗೆ, ವಿದ್ಯಾರ್ಥಿ, ನಿರುದ್ಯೋಗಿಗಳಿಗೆ  ನಿರಂತರವಾಗಿ ಸಮಸ್ಯೆಗಳು ಆಗುತ್ತಿರುವುದರಿಂದ ಸರ್ಕಾರವು ಹಿಂದಿ ಏರಿಕೆಯನ್ನು ಈ ಕೂಡಲೇ ಕೈಬಿಟ್ಟು ಕನ್ನಡ ಮತ್ತು ಕನ್ನಡಿಗರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಒತ್ತಾಯಿಸಿ ಗ್ರೇಡ್-ತಹಸೀಲ್ದಾರ್ ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ನರೇಂದ್ರ ಕುಮಾರ್,ತ್ಯಾಗರಾಜು, ಕುಮಾರ್, ಸತೀಶ್, ವಿಜಯಶಂಕರ್, ಶ್ರೀವಸ್ತ, ಹೇಮಂತ್, ಸಿಐಟಿಯು ಅಧ್ಯಕ್ಷೆ ವನಜಾಕ್ಷಿ, ಸಾಹಿಸ್ತ ಪರ್ವೀನ್, ಡಿ ಎಸ್ ಎಸ್ ತಾಲ್ಲೂಕು ಸಂಚಾಲಕ ನಾಗೇಶ್ ಸೇರಿದಂತೆ ನಾನಾ ಕನ್ನಡಪರ ಸಂಘಟನೆಗಳ ಹೋರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು