ವಿಜಯ ಸಂಘರ್ಷ
ತೀರ್ಥಹಳ್ಳಿ: ಅಕ್ರಮ ನಾಟಾ ಸಂಗ್ರಹ ಪ್ರಕರಣದಲ್ಲಿ ಇಬ್ಬರ ಬಂಧಿಸಿರುವ ಘಟನೆ ತಾಲೂಕಿನ ಹೊಸಬೀಡು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪೂರ್ಣೇಶ್ ಗೌಡ ಎಂಬಾತ ತಾನು ತೋಟದಲ್ಲಿ ನಿರ್ಮಿಸುತ್ತಿರುವ ಮನೆಗೆ ಬೇಕಾದ ನಾಟಾವನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಪೂರ್ಣೇಶ್ ಮನೆ ಮೇಲೆ ದಾಳಿ ನಡೆಸಿದಾಗ ಅಕ್ರಮವಾಗಿ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಬೀಟೆ ದಾಸ್ತಾನು ಇರುವುದು ಕಂಡು ಬಂದಿದೆ. ಈ ವೇಳೆ ಅರಣ್ಯ ಸಿಬ್ಬಂದಿಯನ್ನು ತಳ್ಳಿ ಪೂರ್ಣೇಶ್ ಪರಾರಿಯಾಗಿದ್ದಾನೆ.
ಮಾಹಿತಿ ಮೇರೆಗೆ ಮುನ್ನಾ ಅಲಿಯಾಸ್ ಮೊಹಮ್ಮದ್ ಸಲೀಂ ಹಾಗೂ ಕೆ.ಹೈದರ್ ರನ್ನು ಬಂಧಿಸಲಾಗಿದೆ. ಇವರು ಕಾಡಿನಿಂದ ಮರ ತಂದು ನಾಟಾ ಮಾಡಿ ಮನೆ ನಿರ್ಮಾಣಕ್ಕೆ ಬಳಸುತ್ತಿ ದ್ದರು. ಈ ಕುರಿತು ಪ್ರಕರಣ ದಾಖಲಿಸಿ ಕೊಂಡಿರುವ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ. ಸದ್ಯ ಒಂದು ಪಿಕಪ್ ವಾಹನನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಪರಾರಿಯಾದರೂ ಸಹ ಅರಣ್ಯ ಇಲಾಖೆಯು ಯಾವ ಸಿಬ್ಬಂದಿಯನ್ನು ಸಹ ವಜಾ ಮಾಡಿಲ್ಲ ಎಂಬುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ವಿಜಯ ಸಂಘರ್ಷಕ್ಕೆ ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795