ಪಾಲಿಕೆ ಮತ್ತಿತರೆ ಹೊರಗುತ್ತಿಗೆ ಕಾರ್ಮಿಕರ ಸೇವಾ ಭದ್ರತೆ ಕೋರಿ ಸದನದಲ್ಲಿ ಪ್ರಸ್ತಾವನೆಗೆ ಶಾಸಕರಿಗೆ ಮನವಿ

 

ವಿಜಯ ಸಂಘರ್ಷ



ಭದ್ರಾವತಿ: ವಿಧಾನಸಭಾ ಅಧಿವೇಶನ ದಲ್ಲಿ ಗುತ್ತಿಗೆ ಕಾರ್ಮಿಕರ ಕುಂದುಕೊರತೆ ಗಳನ್ನು ನೀಗಿಸುವ ಸಲುವಾಗಿ ಸದನ ದಲ್ಲಿ ವಿಷಯ ಮಂಡಿಸಿ ನ್ಯಾಯ ಒದಗಿ ಸಲು ಒತ್ತಾಯಿಸಿ ಇಂದು ನಗರಸಭಾ ಹೊರಗುತ್ತಿಗೆ ನೌಕರರ ಸಂಘದಿಂದ ಶಾಸಕ ಬಿ.ಕೆ.ಸಂಗಮೇಶ್ವರ್ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿ ರುವ ಜೂನಿಯರ್, ಸೀನಿಯರ್ ಪ್ರೋಗ್ರಾಮರ್, ಡಾಟಾ ಎಂಟ್ರಿ ಆಪರೇಟರ್, ನೀರು ಸರಬರಾಜು ಸಹಾಯಕರು, ಚಾಲಕರು, ಲೋಡರ್, ಕ್ಲೀನರ್, ಎಸ್‌ಟಿಪಿ ನೌಕರರು, ಯುಜಿಡಿ ಕಾರ್ಮಿಕರು ಮತ್ತು ಘನತ್ಯಾಜ್ಯ ವಿಲೇವಾರಿ ಘಟಕದ ಕಾರ್ಮಿಕರು ಹಲವಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇರೆಗೆ ಕೊರೋನಾದಂತಹ ಸಂಕಷ್ಟದ ಸ್ಥಿತಿಯಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.

ಕನಿಷ್ಠ ವೇತನ, ಭವಿಷ್ಯ ನಿಧಿ ಬಗ್ಗೆ ಗುತ್ತಿಗೆ ಏಜೆನ್ಸಿಗಳಿಗೆ ಪ್ರಶ್ನೆ ಮಾಡಿದರೆ ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಕೆ ಒಡ್ಡುತ್ತಾರೆ. ನೌಕರರು ಸೇವಾ ಭದ್ರತೆ ಇಲ್ಲದೇ ಜೀವನ ನಿರ್ವಹಣೆಯ ಕಷ್ಟಕಾಲದಲ್ಲಿ ಕಾರ್ಯನಿರ್ವಹಿಸು ತ್ತಿದ್ದು, ಇದನ್ನು ಮನಗೊಂಡು ಹೊರಗುತ್ತಿಗೆ ಪದ್ಧತಿಯನ್ನು ಕೈಬಿಟ್ಟು ಸರ್ವೋಚ್ಛ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ತೀರ್ಪು ಗಳನ್ವಯ ಸೇವಾ ಭದ್ರತೆ ಹಾಗೂ ನೌಕರಿ ಖಾಯಮಾತಿ ಮಾಡಲು ಅಧಿವೇಶನದಲ್ಲಿ ಧ್ವನಿ ಎತ್ತಬೇಕಾಗಿ ಶಾಸಕ ಸಂಗಮೇಶ್ವರ್ ಅವರಿಗೆ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಸಮಿತಿ  ಮುಖಂಡ ಮಹಮ್ಮದ್ ಗೌಸ್, ನೀರು ಸರಬರಾಜು ತಾಲ್ಲೂಕು ಅಧ್ಯಕ್ಷ ಪ್ರಸನ್ನ ಮುಖಂಡರಾದ ಮೂರ್ತಿ,ಅಭಿಷೇಕ್, ವಸಂತ ಮತ್ತಿತರರಿದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು