ಪ್ರಧಾನಿ ಮೋದಿ ಹುಟ್ಟುಹಬ್ಬ: ಯುವ ಕಾಂಗ್ರೆಸ್ ನಿಂದ ರಾಷ್ಟ್ರೀಯ ನಿರುದ್ಯೋಗ ದಿವಸ್ ಆಚರಣೆ

 

ವಿಜಯ ಸಂಘರ್ಷ



ಭದ್ರಾವತಿ : ಯುವಕರಿಗೆ ಉದ್ಯೋಗ ನೀಡಿ ನಿರುದ್ಯೋಗ ನಿರ್ಮೂಲನೆ ಮಾಡುತ್ತೇನೆ ಎಂದು ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏಳು ವರ್ಷಗಳ ಅಧಿಕಾರ ನಡೆಸಿ ಯುವಕರಿಗೆ ಯಾವುದೇ ಉದ್ಯೋಗ ಗಳನ್ನು ಭರ್ತಿ ಮಾಡದೆ  ಅನ್ಯಾಯ ಮಾಡಿದೆ ಎಂದು ನಗರ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿ  ಆರೋಪಿಸಿತು.

ಶುಕ್ರವಾರ ನಗರದ ಡಾ.ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಪ್ರಧಾನಿ ನರೇಂದ್ರ ಮೋದಿಗೆ ನಿರುದ್ಯೋಗದ ದಿನಾಚರಣೆಯ ಶುಭಾಶಯಗಳು ಕೋರುತ್ತಾ ಈಗಾಗಲೇ ಯುವಕರಿಗೆ ಚುನಾವಣೆ ಸಂದರ್ಭದಲ್ಲಿ ಮಂಕುಬೂದಿ ಹಚ್ಚಿ ಅಧಿಕಾರಕ್ಕೆ ಬಂದ ನೀವು ಯುವಕರಿಗೆ ಉದ್ಯೋಗ ನೀಡುವುದನ್ನು ಬಿಟ್ಟು ಕೋಮುಭಾವನೆಗಳ ತುಂಬಿ ಯುವಕರನ್ನು ದಾರಿ ತಪ್ಪಿಸಿ, ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಶೇಕಡ ಹತ್ತರಷ್ಟು ಏರಿಕೆ ಮಾಡುತ್ತಾ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಹೊರಟ ಯುವಕರಿಗೆ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ಸರ್ಕಾರ ವನ್ನು ಪ್ರಶ್ನೆ ಮಾಡುವ ಯುವಕರ ಮೇಲೆ ಕೇಸುಗಳನ್ನು ದಾಖಲಿಸುತ್ತಾ ಸರ್ವಾಧಿಕಾರಿ ಧೋರಣೆ ತಾಳಿ,ಯುವಕ ವಿರೋಧಿ ಸರ್ಕಾರ ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ದಿನದಿಂದ ದಿನಕ್ಕೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಮುಚ್ಚುತ್ತಾ ಉದ್ಯೋಗಿಗಳನ್ನೂ ನಿರುದ್ಯೋಗಿಗಳನ್ನಾಗಿ ಮಾಡಲಾ ಗುತ್ತಿದೆ. ಕೊಟ್ಯಾಂತರ ಪದವೀಧರರು, ಸ್ನಾತಕೋತ್ತರ, ತಾಂತ್ರಿಕ ಪದವಿಪಡೆ ದವರು ಉದ್ಯೋಗವಿಲ್ಲದೇ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.

ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಜಿ. ವಿನೋದ್ ಕುಮಾರ್  ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ಚಂದ್ರೇಗೌಡ ಮುಖಂಡರಾದ ರಾಘವೇಂದ್ರ, ತೇಜಸ್ ಗೌಡ, ಭರತ್, ನವೀನ್, ಮಧು ಸೂದನ್, ನಂದನ್, ಚೇತನ್, ಕ್ರಿಸ್ಟಿ, ಸಂಜು,ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು