ಪುನೀತ್ ರಾಜ್‍ಕುಮಾರ್ : ನುಡಿ ನಮನ ಕಾರ್ಯಕ್ರಮ

 

ವಿಜಯ ಸಂಘರ್ಷ



ಶಿವಮೊಗ್ಗ: ಸದ್ಭಾವನಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನುಡಿ ನಮನ ಕಾರ್ಯಕ್ರಮ ನ.7ರ ಸಂಜೆ 6ಗಂಟೆಗೆ ಕುವೆಂಪು ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಂ.ಶ್ರೀಕಾಂತ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುನೀತ್‍ರಾಜ್‍ ಕುಮಾರ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ ನಟ. ಮಾನವೀಯತೆಯ ಪ್ರತೀಕ. ಹೃದಯವಂತ ಜನರ ಪಾಲಿಗೆ ರಾಜಕುಮಾರನೇ ಹೌದು. ಅವರ ನಿಧನದಿಂದ ಇಡಿ ರಾಜ್ಯವೇ ಶೋಕತಪ್ತವಾಗಿದೆ. ಅವರು ಕುಟುಂಬ ವರ್ಗದವರಂತು ತುಂಬಾ ದುಕ್ಕಿತರಾಗಿ ದ್ದಾರೆ. ಇಂತಹ ನಟನ ಬಗ್ಗೆ ಶಿವಮೊಗ್ಗ ದಲ್ಲಿ ಕಾರ್ಯಕ್ರಮ ಮಾಡಬೇಕು. ಅವರ ಆತ್ಮಕ್ಕೆ ಶಾಂತಿ ಕೋರಬೇಕು ಎಂಬುದು ನಮ್ಮ ಅಭಿಲಾಷೆಯಾಗಿದೆ. ಆದ್ದರಿಂದ ಈ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಈ ಕಾರ್ಯಕ್ರಮದ ಸಾನಿಧ್ಯವನ್ನು ಕೋಡಿಹಳ್ಳಿ ಮಠದ ಶ್ರೀ ಸಿದ್ದಲಿಂಗೇ ಶ್ವರ ಸ್ವಾಮೀಜಿ, ಬಸವ ಕೇಂದ್ರದ ಶ್ರೀ ಮರುಳಾಸಿದ್ದ ಸ್ವಾಮೀಜಿ ವಹಿಸ ಲಿದ್ದು, ಹಿರಿಯ ಪತ್ರಕರ್ತ ದಿನೇಶ್ ಅಮಿನ್‍ಮಟ್ಟು ಹಾಗೂ ಕೆಲವು ನಟ ನಟಿಯರು ಕೂಡ ಈ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಮಾಜಿ ಸೂಡಾ ಅಧ್ಯಕ್ಷ ಎನ್.ರಮೇಶ್ ಮಾತನಾಡಿ, ಸದ್ಭಾವನಾ ಚಾರಿಟಬಲ್ ಟ್ರಸ್ಟ್ ಹಲವು ಉತ್ತಮ ಕೆಲಸಗಳನ್ನು ನಡೆಸುತ್ತಾ ಬಂದಿದೆ. ಸಾಂಸ್ಕøತಿಕ, ಶೈಕ್ಷಣಿಕ, ಸಾಮಾಜಿಕ ಕಳಕಳಿಯನ್ನು ಹೊಂದಿದೆ. ಇದೀಗ ಪುನೀತ್‍ರಾಜ್‍ ಕುಮಾರ್ ಅವರ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿ ರುವುದು ಅತ್ಯಂತ ಸೂಕ್ತವಾಗಿದೆ. ಪುನೀತ್ ಅತ್ಯುತ್ತಮ ನಟ ಮಾತ್ರ ವಲ್ಲ. ತಾಯಿ ಹೃದಯ ಹೊಂದಿದ ವರು. ಅವರಿಗೆ ಶ್ರದ್ಧಾಂಜಲಿಯ ರೂಪದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ನಿರ್ಮಲಾ ಕಾಶಿ, ಜಿ.ವಿಜಯ್‍ ಕುಮಾರ್, ಜನಾರ್ಧನ ಪೈ. ಇದ್ದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು