ವಿಜಯ ಸಂಘರ್ಷ
ಶಿವಮೊಗ್ಗ :ಕಳೆದ ಬಾರಿ ಕೊರೋನಾ ದ ಹಿನ್ನಲೆಯಲ್ಲಿ ಹಬ್ಬದ ಸಡಗರ ಮರೆಮಾಚಿತ್ತು. ಆದರೆ ಈ ಭಾರಿ ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ದೀಪಾವಳಿ ಯ ಸಂಭ್ರಮ ಎಲ್ಲೆಡೆ ಕಂಡು ಬರುತ್ತಿದೆ.
ಸಾಲು ಹಬ್ಬಗಳ ನರಕ ಚತುರ್ದರ್ಶಿ, ಧನಲಕ್ಷ್ಮಿ ಬಲಿಪಾಡ್ಯಮಿ ಹಬ್ಬಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಜನ ಬಟ್ಟೆ ಮತ್ತಿತರೆ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.
ಗಾಂಧಿ ಬಜಾರ್ ಸೇರಿದಂತೆ ಸೇರಿದಂತೆ ಬಹುತೇಕ ಬಟ್ಟೆ ಅಂಗಡಿಗಳಲ್ಲಿ ಜನರು ಖರೀದಿಯಲ್ಲಿ ಮುಗಿಬಿದ್ದಿದ್ದಾರೆ. ಜಿಲ್ಲಾಡಳಿತ ಪಟಾಕಿಗಳ ಮಾರಾಟಕ್ಕೆ ಸೈನ್ಸ್ ಮೈದಾನ ಹಾಗೂ ನೆಹರೂ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಿದೆ. ರಾಜ್ಯ ಸರ್ಕಾರ ಹಸಿರು ಪಟಾಕಿಗೆ ಹೆಚ್ಚು ಒತ್ತು ನೀಡಿದ್ದು, ಪರಿಸರ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಸಾಮಾನ್ಯ ಪಟಾಕಿಗಿಂತ ಹಸಿರು ಪಟಾಕಿ ದರ ದುಬಾರಿಯಾಗಿದ್ದು, ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ನುಂಗಲಾರದ ತುತ್ತಾಗಿದೆ.
ಅಗತ್ಯ ವಸ್ತುಗಳ ಬೆಲೆ ಏರಿದೆ. ತರಕಾರಿ, ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿರುವುದರಿಂದ ಹಬ್ಬ ಮಾಡುವುದು ಕಷ್ಟವಾಗುತ್ತಿದೆ. ಈ ನಡುವೆ ಅಡುಗೆ ಅನಿಲ, ಪೆಟ್ರೋಲ್, ಡೀಸಲ್ ಬೆಲೆ ಕೂಡ ಏರಿಕೆಯಾಗಿ ರುವುದು ಜನರಿಗೆ ಹೊರೆಯಾಗಿ ಪರಿಣಮಿಸಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795