ವಿಜಯ ಸಂಘರ್ಷ
ಭದ್ರಾವತಿ: ಸಂಘಟನೆ ಬಲಪಡಿಸುವ ವಿನೂತನ ಪ್ರಯತ್ನಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ)ಮುಂದಾಗಿದ್ದು, ಈ ನಿಟ್ಟಿನಲ್ಲಿ ವೇದಿಕೆಯ ಜಿಲ್ಲಾ ಘಟಕದ ಇಬ್ಬರು ಜಿಲ್ಲಾಧ್ಯಕ್ಷರು ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ಪ್ರತಿ ವರ್ಷ ವೇದಿಕೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಅಂಧರ ಕೇಂದ್ರದ ವಿಕಲಚೇತನರು ಹಾಗು ಅನಾಥರು, ವಯೋವೃದ್ಧರು ಮತ್ತು ಅಶಕ್ತರೊಂದಿಗೆ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ.
ಈ ಬಾರಿ ಸಹ ಹಿರಿಯ ನಾಗರೀಕರ ಆರೈಕೆ ಕೇಂದ್ರದಲ್ಲಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು. ಅಲ್ಲದೆ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ವೇದಿಕೆ ಜಿಲ್ಲಾಧ್ಯಕ್ಷ ಪಿ. ಪ್ರಶಾಂತ್ರವರು ಜನ್ಮ ದಿನ ಹಂಚಿಕೊಂಡರು.
ಇದು ವೇದಿಕೆಯ ಪದಾಧಿಕಾರಿಗಳು ಹಾಗು ಕಾರ್ಯಕರ್ತರನ್ನು ಮತ್ತಷ್ಟು ಸಂಘಟಿಸಲು ಕಾರಣವಾಗಿದೆ. ಎಲ್ಲರ ಹುಟ್ಟುಹಬ್ಬ ಸಹ ಈ ನಿಟ್ಟಿನಲ್ಲಿಯೇ ಸಾಗಬೇಕೆಂಬ ಆಶಯ ವೇದಿಕೆ ಹೊಂದಿದೆ ಎಂಬ ಸಂದೇಶ ಪ್ರಶಾಂತ್ ಹಾಗೂ ಜ್ಯೋತಿ ಸೋಮಶೇಖರ್ ತೋರಿಸಿ ಕೊಟ್ಟಿದ್ದಾರೆ.
ವೇದಿಕೆ ಗೌರವಾಧ್ಯಕ್ಷ ನಾಗೇಂದ್ರ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥಗೌಡ, ಜಿಲ್ಲಾ ಯುವಘಟಕ ಅದ್ಯಕ್ಷ ಶಾಜಿದ್ ಅಹಮದ್, ಕಾರ್ಯದರ್ಶಿ ಶಶಾಂಕ್, ಮಹಿಳಾ ಉಪಾಧ್ಯಕ್ಷೆ ಜಯಂತಿ. ಪ್ರಧಾನ ಕಾರ್ಯದರ್ಶಿ ಶಾರದಾ, ಪ್ರೀತಿ ಪ್ರಶಾಂತ್, ಐಶ್ವರ್ಯ, ಪ್ರಶಾಂತ್, ಶಿವಮೊಗ್ಗ ತಾಲೂಕು ಮಹಿಳಾ ಅಧ್ಯಕ್ಷೆ ಗಂಗಾವತಿ, ಭದ್ರಾವತಿ ತಾಲೂಕು ಮಹಿಳಾ ಅಧ್ಯಕ್ಷೆ ಮಹೇಶ್ವರಿ. ನಾಗರತ್ನ, ಕಾಂತಾ, ಮಂಜುಳಾ, ಸುಮಿತ್ರಾ, ಗೀತಾ, ವಾಣಿ, ಯಾಸ್ಮಿನ್, ಪ್ರೇಮ ಮತ್ತು ಶ್ರಾವ್ಯ ಮತ್ತಿತರರು ಪಾಲ್ಗೊಂಡಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795