ಸರ್ಕಾರಿ ಜಮೀನು ತಹಸೀಲ್ದಾರ್ ವಶಕ್ಕೆ ಪಡೆಯಲು ಅಗ್ರಹ

 


ವಿಜಯ ಸಂಘರ್ಷ /ಭದ್ರಾವತಿ

ತಾಲ್ಲೂಕಿನ ದೊಣಭಗಟ್ಟ ಗಾಮ ಸರ್ವೆ ನಂ : 45/2 ರಲ್ಲಿ 1 ಎಕರೆ 22 ಗುಂಟೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಕೆಲವರು ಬಳಸಿಕೊಳ್ಳುತ್ತಿದ್ದು, ತಕ್ಷಣ ತಹಶೀಲ್ದಾರ್ ರವರು ಆ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಬೇಕೆಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ಒತ್ತಾಯಿಸಿ ಮನವಿ ಸಲ್ಲಿಸಿದರು.

ದೊಣಘಟ್ಟ ಗ್ರಾಮದಲ್ಲಿನ ಜಾಗ ಉಳ್ಳವರ ಪಾಲಾಗುತ್ತಿದ್ದು ಕೂಡಲೇ ಆ ಜಾಗವನ್ನು ಸರ್ಕಾರದ ವಶಕ್ಕೆ ಪಡೆದು ಸೂಕ್ತ ಬಂದೋಬಸ್ತ್ ನಿಯೋಜಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.

45/2 ರಲ್ಲಿ ಸೈದಾನ್ ಸಾಬ್ ಬಿನ್ ಯಾಕೂಬ್ ಸಾಬ್ ರವರಿಗೆ 19 ಗುಂಟೆ ಸೈದಾನ್ ಸಾಬ್‌ ಬಿನ್ ಪೀರ್ ಸಾಬ್ ರವರಿಗೆ 19 ಗುಂಟೆ ಬುಡೇನ್‌ ಬೇಗ್ ಬನ್ ಮಿಯಾ ಬೇಗ್ ರವರಿಗೆ 14 ಗುಂಟೆ ಶಾಜಾದ್ ಬೇ ಕೋಂ ಮೊಹಮ್ಮದ್‌ ನಿಜಾಂ ಸಾಬ್ ರವರಿಗೆ 19 ಗುಂಟೆ, ಸೈಯದ್‌ ಮೆಹಬೂಬ್‌ ಬಿನ್ ಉಮರ್ ಸಾಬ್ ರವರಿಗೆ 22 ಗುಂಟೆ ಜಮೀನು ಇದ್ದು ಇದೇ 45/2 ರ ಸರ್ವೆ ನಂಬರಿನಲ್ಲಿ 22 ಗುಂಟೆ ಸರ್ಕಾರದ ಜಮೀನು ಇದ್ದು, ಹಲವು ವರ್ಷಗಳಿಂದ ಹಲವರು ಜಮೀನನ್ನು ಕಬಳಿಸುತ್ತಿದ್ದರು.

ಅಧಿಕಾರಿಗಳು ತಾಲ್ಲೂಕು ಕಛೇರಿಯ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವು ದನ್ನು ಖಂಡಿಸುತ್ತೇವೆ. ಈ ಕೂಡಲೇ ಸರ್ಕಾರದ 1 ಎಕರೆ 22 ಗುಂಟೆ ಜಮೀನನ್ನು ಈಗಲು ಪಹಣಿಯಲ್ಲಿ ಇರುವಂತೆ ಜಾಗವನ್ನು ವರ್ಷಕ್ಕೆ ಪಡೆದು ಸರ್ಕಾರದ ಉದ್ದೇಶಕ್ಕಾಗಿ ಮೀಸಲಿಡಬೇಕೆಂದು ಒತ್ತಾಯಿಸಿದ್ದಾರೆ ಈ ಸಂಬಂಧ ತಹಶೀಲ್ದಾರ್, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ನಿರ್ಲಕ್ಷ್ಯ ವಹಿಸಿದ್ದಲ್ಲಿ ಅವರ ವಿರುದ್ಧ ಎ.ಸಿ.ಬಿ ಕಛೇರಿಯಲ್ಲಿ ದೂರು ದಾಖಲಿಸಲಾಗುವುದೆಂದು ಎಚ್ಚರಿಸಿದ್ದಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 

+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು