ವಿಜಯ ಸಂಘರ್ಷ
ಭದ್ರಾವತಿ:ಏಷ್ಯಾ ಖಂಡದ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾದ ವಿಐಎಸ್ಎಲ್ ಕಾರ್ಖಾನೆ ಉಳಿವಿಗೆ ತಮ್ಮ ಪ್ರಾಣ ನೀಡಲು ಸಿದ್ಧನಿದ್ದೇನೆ. ನಿರ್ಲಕ್ಷ್ಯ ಮಾಡಿದ್ದಲ್ಲಿ ಇದೇ ಸ್ಥಳದಲ್ಲಿ ಜೀವ ಬಿಡಲು ಸಿದ್ದನಿದ್ದೇನೆ ಎಂದು ಅಮ್ ಆದ್ಮಿ ಪಕ್ಷದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿ ಡಾ.ಟಿ.ನೇತ್ರಾವತಿ ಹೇಳಿದರು.
ಅವರು ಶನಿವಾರ ಶಿವಮೊಗ್ಗದಿಂದ ಬರಿಗಾಲಿನಲ್ಲಿ ಪಾದಯಾತ್ರೆ ಮೂಲಕ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ಹಮ್ಮಿಕೊಂಡಿರುವ ಸ್ಥಳಕ್ಕೆ ಆಗಮಿಸಿ ಮಾತನಾಡಿದರು.
ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ ರವರ ಕನಸಿನ ಕೂಸು ಕಾರ್ಖಾನೆಯನ್ನು ಉಳಿಸಲು ತಾವು ಹಮ್ಮಿಕೊಂಡಿರುವ ಹೋರಾಟವನ್ನು ಕೇಂದ್ರಕ್ಕೆ ತಿಳಿಸು ವಂತೆ ಆಗ್ರಹಿಸಿ ಸ್ಥಳದಲ್ಲಿದ್ದ ಗ್ರೇಡ್ -2 ತಹಸೀಲ್ದಾರ್ ರಂಗಮ್ಮ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಆಮ್ ಆದ್ಮಿ ಪಕ್ಷದ ಎಚ್.ರವಿಕುಮಾರ್, ಸುರೇಶ್ ಕೌಠೇಕರ್, ಮಕ್ಬಲ್ ಅಹಮದ್, ದಿಲ್ಷದ್ ಭಾನು, ಮಂಜುಳಾ, ಶ್ರೀನಿವಾಸ್, ಪ್ರದೀಪ್, ಹಾಲಸ್ವಾಮಿ, ಪ್ರವೀಣ್, ರಾಮಕೃಷ್ಣ ಗಾಂಧಿ, ಶಿವಕುಮಾರ್, ಶಿವಾನಂದ ಸೇರಿದಂತೆ ಅನೇಕರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನಾ ಸ್ಥಳಕ್ಕಾಗಮಿಸುವ ಮುನ್ನ ನಗರದ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಗೆ ಹಾಗೂ ರೈಲು ನಿಲ್ದಾಣ ಸಮೀಪದ ಸರ್. ಎಂ. ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ನಂತರ ಕಾರ್ಮಿಕರು ಹಮ್ಮಿಕೊಳ್ಳಲಾಗಿದ್ದ ಸ್ಥಳಕ್ಕಾಗಿಮಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795