ವಿಜಯ ಸಂಘರ್ಷ
ಕೆ ಆರ್ ಪೇಟೆ: ಪೌರಾಣಿಕ ನಾಟಕ ಗಳು ಮೌಲ್ಯ ಸಂಸ್ಕೃತಿಯ ಪ್ರತಿ ಬಿಂಬವಾಗಿವೆ.ಜನಸಾಮಾನ್ಯರು ನಾಟಕದಲ್ಲಿ ಬರುವ ಉತ್ತಮ ಪಾತ್ರ ಗಳ ಆದರ್ಶಗಳನ್ನು ಮೈಗೂಡಿಸಿ ಕೊಂಡರೆ ಜೀವನದಲ್ಲಿ ಉತ್ತಮ ಎಂದು ಮನ್ಮುಲ್ ನಿರ್ದೇಶಕರು, ಜಿ.ಪಂ.ಮಾಜಿ ಸದಸ್ಯರು ಹಾಗೂ ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ಹೆಚ್ ಟಿ ಮಂಜು ಅಭಿಪ್ರಾಯ ಪಟ್ಟರು.
ಅವರು ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿ ರಂಗನಾಥಪುರ- ಹರಪನ ಹಳ್ಳಿ ಕ್ರಾಸ್ ಬಳಿ ಶ್ರೀ ಗವಿರಂಗನಾಥ ಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಅಸ್ತಿನಾವತಿಯ ರತ್ನ ಸಿಂಹಾಸನ ಅಥವಾ ಕುರುಕ್ಷೇತ್ರ ಪೌರಾಣಿಕ ನಾಟಕದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಟಕವು ಸಮಗ್ರ ಕಲೆಯಾಗಿದ್ದು ಇದನ್ನು ಪ್ರತಿಯೊಬ್ಬರೂ ಸ್ವೀಕರಿಸು ವಂತಾಗಬೇಕು.ಸಮಾಜದ ಹುಳುಕು ಗಳನ್ನು ಎತ್ತಿ ತೋರಿಸುವ,ಸಮಾಜದ ಸಂಬಂಧಗಳನ್ನು ಗಟ್ಟಿಗೊಳಿಸುವ ಸಾಮರ್ಥ್ಯ ನಾಟಕಗಳಿಗಿದೆ. ನಾಟಕಗಳಿಗೆ ಎಲ್ಲಾ ಕಾಲದಲ್ಲೂ ಗೌರವ ಬೆಲೆ ಇದೆ ಎಂದು ಹೆಚ್ ಟಿ ಮಂಜು ತಿಳಿಸಿದರು.
ಆರ್ ಟಿ ಓ ಅಧಿಕಾರಿ ಮಲ್ಲಿಕಾರ್ಜುನ್ ಮಾತನಾಡಿ, ಜಾಗತೀಕರಣ ಹಾಗೂ ಆಧುನೀಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾಗಿರುವ ನಾಟಕಗಳು ಇಂದು ಹೆಚ್ಚು ಜನರನ್ನು ತಲುಪುತ್ತಿಲ್ಲ .ಜನತೆ ಸಿನಿಮಾ, ಧಾರಾ ವಾಹಿ,ಟಿವಿ ಕಡೆಗೆ ಆಕರ್ಷಿತರಾಗಿ ನಾಟಕಗಳನ್ನು ನೋಡುವುದೇ ಕಡಿಮೆ ಮಾಡಿದ್ದಾರೆ ಎಂದು ವಿಷಾಧಿಸಿದ ಅವರು ಸಿನಿಮಾ ಧಾರಾವಾಹಿಗಳ ಪ್ರಭಾವ ಎಷ್ಟೇ ಬೀರಿದರೂ ನಾಟಕಗಳು ಎಂದಿಗೂ ಜೀವಂತವಾ ಗಿರುತ್ತವೆ.ನಾಟಕಗಳನ್ನು ಜನರು ಹೆಚ್ಚು ಹೆಚ್ಚು ನೋಡಿದಾಗ ಮತ್ತು ಹೆಚ್ಚು ಹೆಚ್ಚು ಪ್ರದರ್ಶನ ನೀಡಿದಾಗ ಮಾತ್ರ ನಾಟಕಗಳ ಸಾರ್ಥಕತೆ ಪಡೆಯುತ್ತವೆ. ಸಮಾಜದಲ್ಲಿ ಕಲಾವಿದರಿಗೆ ಉತ್ತಮ ಸ್ಥಾನಮಾನ ಗಳು ಸಿಗಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಮಿತ್ರ ಫೌಂಡೇ ಶನ್ ಅಧ್ಯಕ್ಷ ವಿಜಯ್ ರಾಮೇಗೌಡ ಮಾತನಾಡಿ ಕಲೆ ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವ ಮೂಲಕ ನಮ್ಮ ಸಂಸ್ಕೃತಿ ಬೆಳಸಬೇಕು.ಕಲೆಗೆ ಜಾತಿ ಧರ್ಮಗಳ ಹಂಗಿಲ್ಲ.ಉತ್ತಮ ಕಲಾವಿದರನ್ನು ಸಮಾಜ ಜಾತಿಯ ಚೌಕಟ್ಟು ಮೀರಿ ಗೌರವಿಸುತ್ತದೆ. ಧಾರಾವಾಹಿ ಹಾಗೂ ಸಿನಿಮಾ ನಡುವೆಯೂ ಗ್ರಾಮೀಣ ಪ್ರದೇಶ ಗಳಲ್ಲಿ ಪೌರಾಣಿಕ ನಾಟಕಗಳು ಇಂದಿಗೂ ಜನಾಕರ್ಷಣೆ ಉಳಿಸಿ ಕೊಂಡಿವೆ.ಕಲಾ ಪ್ರದರ್ಶನಕ್ಕೆ ಸರ್ಕಾರವು ಹೆಚ್ಚಿನ ನೆರವು ನೀಡಬೇಕು. ಸರ್ಕಾರವು ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು ಹೆಚ್ಚಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.ಸಿನಿಮಾ ಧಾರಾವಾಹಿ ಗಳು ಕ್ರೌರ್ಯ ಮತ್ತು ಮನೆ ಮುರುಕುತನ ವಿಜೃಂಭಿಸುತ್ತಿವೆ. ಪೌರಾಣಿಕ ನಾಟಕಗಳು ಸತ್ಯ ಧರ್ಮಕ್ಕೆ ಗೆಲುವು ಎನ್ನುವ ಬದುಕಿನ ಮೌಲ್ಯಗಳನ್ನು ಸಾರುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎ.ಎನ್. ಜಾನಕೀರಾಂ, ಟಿಎಪಿಸಿಎಂಎಸ್ ನಿರ್ದೇಶಕರಾದ ಸುಕನ್ಯಾ ಲಕ್ಷ್ಮಣ್, ಪುರಸಭಾ ಸದಸ್ಯ ಡಿ ಪ್ರೇಂಕುಮಾರ್, ತಾ.ಪಂ.ಮಾಜಿ ಸದಸ್ಯ ಮಾಧವ ಪ್ರಸಾದ್, ಕಾಂಗ್ರೆಸ್ ಮುಖಂಡರಾದ ಹೆತ್ತುಗೋನಹಳ್ಳಿ ನಾರಾಯಣಗೌಡ, ಆದಿಹಳ್ಳಿಮೀನಾಕ್ಷಿ ರಮೇಶ್,ಶಿಕ್ಷಕರಾದ ಪಿ.ಜೆ ಕುಮಾರ್, ಬಂಡಿಹೊಳೆ ಕೃಷ್ಣಮೂರ್ತಿ, ಯೋಗೇಶ್, ಗ್ರಾ.ಪಂ. ಮಾಜಿ ಸದಸ್ಯ ಅಗ್ರಹಾರ ಬಾಚಹಳ್ಳಿ ಕುಮಾರ್, ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ *ಕಾಮನಹಳ್ಳಿ ಮಂಜುನಾಥ್*
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795