ವಿಜಯ ಸಂಘರ್ಷ
ಭದ್ರಾವತಿ : ನಗರದ ಸೈಲ್ ಆಡಳಿತದ ವಿಐಎಸ್ಎಲ್ ಕಾರ್ಖಾನೆ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲಿಸಿ ನಗರದ ಅಕ್ಕನ ಬಳಗದ ವತಿಯಿಂದ ಮಹಿಳೆಯರು ಬುಧವಾರ ಬೆಂಬಲ ವ್ಯಕ್ತಪಡಿಸಿದರು.
ಮಹಿಳಾ ದಿನಾಚರಣೆ ಅಂಗವಾಗಿ
ನೇತೃತ್ವದಲ್ಲಿ ಮಧ್ಯಾಹ್ನ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲಿಸಿದ
ಅಕ್ಕನ ಬಳಗದ ಅಧ್ಯಕ್ಷೆ ಎಚ್ ಬಿ ಮಂಗಳ ನೇತೃತ್ವದಲ್ಲಿ ಮಹಿಳೆಯರು ಆಗಮಿಸಿ ಕೇಂದ್ರದ ಧೋರಣೆ ಖಂಡಿಸಿ, ಯಾವುದೇ ಕಾರಣಕ್ಕೂ ಕಾರ್ಖಾನೆ ಮುಚ್ಚಬಾರದು, ವಿಐಎಸ್ ಎಲ್ ಉಳಿಸಿ ಭದ್ರಾವತಿ ಬೆಳೆಸಿ ಎಂಬ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಬಳಗದ ಕಾರ್ಯ ದರ್ಶಿ ಸುಧಾಮಣಿ ಎನ್ ಖಜಾಂಚಿ ಪ್ರೇಮಾವತಿ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ನಾಗರತ್ನ, ಸೌಭಾಗ್ಯ, ಪದ್ದುಬಾಯಿ ಸ್ವರ್ಣ ಲತಾಸೇರಿದಂತೆ ಅನೇಕರು ಭಾಗವಹಿಸಿ ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.