ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಾಣಕ್ಕೆ ರಾಜಕೀಯ ಕಲ್ಪಿಸುವುದು ಬೇಡ: ಪಾಲಾಕ್ಷಪ್ಪ

 ವಿಜಯ ಸಂಘರ್ಷ



ಶಿಕಾರಿಪುರ: ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಾಣದ ಮೂಲಕ ತಾಲೂಕಿನ ಜನರ ಬಹುದಿನಗಳ ಕನಸು ನನಸಾಗುತ್ತಿರುವುದು ಹರ್ಷದ ಸಂಗತಿ ಅದರಲ್ಲೆ ತಪ್ಪು ಹುಡುಕುವ ಪ್ರಯತ್ನ ಬಿಟ್ಟು ಪುತ್ಥಳಿ ಅನಾವರಣ ದಲ್ಲಿ ನಾವೆಲ್ಲರೂ ಸಂಭ್ರಮದಿಂದ ಪಾಲ್ಗೊಳ್ಳಬೇಕಿದೆ ಎಂದು ಪುರಸಭೆ ಸದಸ್ಯ ಪಾಲಾಕ್ಷಪ್ಪ ಭದ್ರಾಪುರ ಹೇಳಿದರು.


ಪಟ್ಟಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಸಂಗೊಳ್ಳಿ ರಾಯಣ್ಣ ಪುತ್ಥಳಿ ಹೆದ್ದಾರಿ ಪಕ್ಕ, ನಿರ್ಮಿಸಲಾಗುತ್ತಿತ್ತು ಅದನ್ನು ಕೈಬಿಟ್ಟಾಗ ಪಟ್ಟಣದ ಪ್ರಮುಖ ಸ್ಥಳದಲ್ಲಿ ನಿರ್ಮಿಸಬೇಕು ಎನ್ನುವುದು ಕುರುಬ ಸಮಾಜದ ಬೇಡಿಕೆಯಾಗಿತ್ತು. ಅದರಂತೆ ಇದೀಗ ನೂತನ ಸರ್ಕಾರಿ ಬಸ್‌ನಿಲ್ದಾಣದ ಎದುರು, ಮಾರಿ ಕಾಂಬ ದೇವಸ್ಥಾನದ ಮುಂಭಾಗದಲ್ಲಿ ಸಂಗೊಳ್ಳಿ ರಾಯಣ್ಣನ ಸುಂದರ ಕಂಚಿನ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಪ್ರತಿಮೆ ನಿರ್ಮಿಸುವ ಸ್ಥಳವನ್ನು ಕುರುಬ ಸಮಾಜದ ಕಾಗಿನೆಲೆ, ಹೊಸದುರ್ಗ ಶ್ರೀಗಳು ಸ್ವತಃ ಆಗಮಿಸಿ ಪರಿಶೀಲನೆ ನಡೆಸಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.


ಪ್ರತಿಮೆ ಸ್ಥಾಪನೆ ಮಾಡುವುದಕ್ಕೆ ಪಡೆಯಲಾಗಿದೆ. ಸರ್ಕಾರದಿಂದ ಒಪ್ಪಿಗೆ ಪತ್ರ ಪಡೆದು ಎಲ್ಲ ಅನುಮತಿ ಯೊಂದಿಗೆ ಅಕ್ಕಮಹಾದೇವಿ. ಸಂಗೊಳ್ಳಿರಾಯಣ್ಣ, ಡಾ.ಬಿ ಆರ್ ಅಂಬೇಡ್ಕರ್. ಹಾಗೂ ಜಗಜ್ಯೋತಿ ಬಸವೇಶ್ವರ ಪ್ರತಿಮೆ ಸ್ಥಾಪನೆ ಮಾಡಲಾಗುತಿರುವುದು ಅದಕ್ಕಾಗಿ ಈಗಾಗಲೆ ತಾಲ್ಲೂಕಿನ ಪ್ರತಿಯೊಂದು ಹಳ್ಳಿ ಹಳ್ಳಿಗೂ ತೆರಳಿ ಅದ್ಧೂರಿ ಆಚರಣೆಗೆ ಸಿದ್ಧತೆ ಮಾಡಲಾಗಿದೆ ಇದೀಗ ಪ್ರತಿಮೆ ಅನಾವರ ಣಕ್ಕೆ ಕಾರಣರಾದ ನುಡಿದಂತೆ ನಡೆದು ಕೊಂಡ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಉದ್ಘಾಟನೆಗೆ ಆಗಮಿಸುತ್ತಿದ್ದು, ಪ್ರತಿಮೆ ಅನಾವರಣ ಕುರಿತು ರಾಜಕೀಯ ದ್ವೇಷಕ್ಕೆ ಕೆಲವರು ಹೇಳಿಕೆ ನೀಡುತ್ತಿದ್ದಾರೆ ಅದನ್ನು ಕೈಬಿಟ್ಟು ಎಲ್ಲರೂ ಪ್ರತಿಮೆ ನಿರ್ಮಾಣ ಕಾರ್ಯಕ್ರಮ ದಲ್ಲಿ ಸಂಭ್ರಮದಿಂದ ಸಮಾಜದ ಎಲ್ಲಾ ಬಂದು ಮಿತ್ರರು ಪಾಲ್ಗೊಳ್ಳೊಣ ಎಂದು ಅವರು ಹೇಳಿದ್ದಾರೆ.



ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು