ಹೋಳಿ..ಬನ್ನಿ

 ವಿಜಯ ಸಂಘರ್ಷ



ಬನ್ನಿ ಬಂಧುವೆ ಹೋಳಿ ಹಬ್ಬವಿದೆ

ಇಕೋ ಬಣ್ಣದ ಜೊತೆಗೆ.. 

ಇಲ್ಲಿ ಎಲ್ಲಿದೆ ಜಾತಿ ಸಂಕೋಲೆ

ಕಟ್ಟಳೆ ಇಲ್ಲ ನಮಗೆ.. ||


ಏಳು ಬಣ್ಣದ ಬಿಳಿಯ ಬೆಳಕಿಗೆ

ಭಿನ್ನ ಮನಗಳ ಸಾಗಿಸಿ... 

ಮೇಲು ಕೀಳಿನ ಬೇಧ ಅಳಿಸಲು

ಕಾಮ ದಹನವ ಮಾಡಿಸಿ..||ಬನ್ನಿ||


ರಾಮ ರಹೀಮ ಯೇಸು ಬುದ್ಧನು

ಸಾರಿ ಹೇಳಿದ ಮಾತಲಿ.. 

ಮುಕ್ತಿ ಪಥದಲಿ ದುರ್ಗುಣ ತೊರೆದು

ಭಕ್ತಿ ಮಾರ್ಗದಿ ನಡೆಯಲಿ||ಬನ್ನಿ||


ವಿಶ್ವ ತೋಟದ ಬಣ್ಣ ಬಣ್ಣದ

ಹೊಂದಿಕೆ ನೋಡಿ ಕಲಿಯಿರಿ||

ಹೆಚ್ಚುಗಾರಿಕೆ ಎಲ್ಲಿದೆ ನೋಡಿ

ಅರಿತು ಬೆರೆತಿಹ ಹೋಕುಳಿ.. ||


ಒಳಗೆ ಅಗ್ನಿಯು ಮೇಲೆ ಶಾಂತವು

ಕಿರಣ ಮಳೆಯ ಆಟವು

ಕೊಳೆಯ ತೊಳೆಯಲು ಹೊಮ್ಮ ಬೇಕಿದೆ

ಇಳೆಗೆ ಕಾಮನ ಬಿಲ್ಲಿದು... ||ಬನ್ನಿ||


ಪಟ್ಟ ಕಷ್ಟವ ಮರೆತು ಬನ್ನಿರಿ

ಸುಟ್ಟು ಹಾಕುವ ಕಾಮನ||

ಮೆಟ್ಟಿ ನಿಲ್ಲುವ ಮೋಸ ವಂಚನೆ

ದಿಟ್ಟ ಗುರಿಯಡೆ ತಾನನ.. ||ಬನ್ನಿ||


ಹಿರಿಯ ಹೆಜ್ಜೆಯ ಮರೆಯಬಾರದು

ಕರಿಯ ತೊರೆಯುತ ಸಾಗುವ..||

ಬೆರೆಸಿ ಏಕತೆ ಬಣ್ಣದಾಚೆಗೆ

ಸುರಿಸಿ ಬಿನ್ನಾಣ ನಾಳೆಗೆ..||ಬನ್ನಿ||


ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು ವಿಶ್ವನಗರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು