ಕಾಂಗ್ರೆಸ್ ಪಕ್ಷದ ಮಹತ್ವಾ ಕಾಂಕ್ಷೆ “ಗ್ಯಾರಂಟಿ ಕಾರ್ಡ್” ಗೆ ಶಾಸಕ ಬಿ.ಕೆ.ಸಂಗಮೇಶ್ ಚಾಲನೆ

ವಿಜಯ ಸಂಘರ್ಷ



ಭದ್ರಾವತಿ: ರಾಜ್ಯದಲ್ಲಿ ಕಾಂಗ್ರೆಸ್ ಶೋಷಿತರ ಪರ. ಮಹಿಳೆಯರು, ಬಡವರು, ಕೂಲಿ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಲು ಮನೆಯ ಗೃಹಿಣಿಗೆ 2000 ರೂ ಹಾಗೂ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಮತ್ತು ಬಡವರಿಗೆ 10 ಕೆ.ಜಿ. ಅಕ್ಕಿಯನ್ನು ನೀಡಲು ಈ ಗ್ಯಾರಂಟಿ ಕಾರ್ಡ್ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಬಿ.ಕೆ.ಸಂಗಮೇಶ್ ಹೇಳಿದರು.


ಇಲ್ಲಿನ ಶಾಸಕರ ಗೃಹ ಕಚೇರಿಯಲ್ಲಿ ಮಂಗಳವಾರ ವಾರ್ಡ್ ನಂ.14 ರ ಮನೆಗಳಿಗೆ ಗ್ಯಾರಂಟಿ ಕಾರ್ಡ್ ವಿತರಿಸುವ ಮೂಲಕ ಚಾಲನೆ ನೀಡಿ, ಈ ಯೋಜನೆಯ ಪ್ರತಿಫಲ ಎಲ್ಲರೂ ಪಡೆದುಕೊಂಡು, ಮುಂದಿನ ದಿನದಲ್ಲಿ ಉತ್ತಮ ಬದುಕು ರೂಪಿಸಿ ಕೊಳ್ಳಬೇಕು ಎಂದು ಕರೆಕೊಟ್ಟರು.


ಕಾಂಗ್ರೆಸ್ ಪಕ್ಷದ ಈ ಮಹತ್ವಾಕಾಂಕ್ಷೆ ಯೋಜನೆಯನ್ನು ಪಕ್ಷದ ಕಾರ್ಯಕರ್ತ ರು ಪ್ರಾಮಾಣಿಕವಾಗಿ ಜನರಿಗೆ ತಲುಪಿಸಿ, ಕಾರ್ಡಿನಿಂದ ಆಗುವ ಪ್ರಯೋಜನದ ಬಗ್ಗೆ ಮಾಹಿತಿಯನ್ನು ಮನೆ ಮನೆಗೂ ತಲುಪಿಸುವ ಕಾಯಕ ಆಗಬೇಕು. ಭದ್ರಾವತಿಯ ಎರಡು ಕಣ್ಣುಗಳು ವಿಐಎಸ್ಎಲ್ ಮತ್ತು ಎಂಪಿಎಂ ಮುಚ್ಚದಂತೆ ಪುನರು ಜ್ಜೀವನಗೊಳಿಸಲು ಶಾಸಕ ಬಿ.ಕೆ ಸಂಗಮೇಶ್ ಅವರು ಮತ್ತೊಮ್ಮೆ ಗೆದ್ದು ಬರಬೇಕು. ನಾವೆಲ್ಲರು ಒಟ್ಟಾಗಿ ಅವರನ್ನು ಗೆಲ್ಲಿಸುವ ಸಂಕಲ್ಪ ಮಾಡ ಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ರಮೇಶ್ ಅವರು ಹೇಳಿದರು.


ಕಾಂಗ್ರೆಸ್ ಬಿಡುಗಡೆ ಮಾಡಿರುವ ಗೃಹಲಕ್ಷ್ಮಿ, ಗೃಹಜ್ಯೋತಿ, ಹಾಗೂ ಅನ್ನಭಾಗ್ಯ ಕಾರ್ಡ್ ಅನ್ನು ಎಲ್ಲಾ ಮನೆಗೆ ತಲುಪಿಸುವ ಕೆಲಸ ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯ ಕರ್ತರುಗಳು ಅತ್ಯಂತ ಪ್ರಾಮಾಣಿ ಕವಾಗಿ ಮಾಡಬೇಕಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಚಂದ್ರೇಗೌಡ ಹೇಳಿದರು. ನಗರ ಸಭೆ ಅಧ್ಯಕ್ಷ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ನಗರಸಭೆ ಸದಸ್ಯ ಬಿ.ಕೆ.ಮೋಹನ್, ಬಿ.ಟಿ. ನಾಗರಾಜ್, ಪಕ್ಷದ ಮುಖಂಡರಾದ ಗಂಗಾಧರಪ್ಪ, ಮಣಿಶೇಖರ್, ಶಿವಪ್ಪ, ಬಿ.ಎಸ್. ಗಣೇಶ್ ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು