ವಿಜಯ ಸಂಘರ್ಷ
ಶಿಕಾರಿಪುರ: ಪಟ್ಟಣದ ವಿವಿಧ ವೃತ್ತ ಗಳಲ್ಲಿ ಅಕ್ಕಮಹಾದೇವಿ, ಬಸವೇಶ್ವರ, ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಸಂಸದ ಬಿ.ವೈ. ರಾಘ ವೇಂದ್ರ ಹಾಗೂ ಬಿ.ವೈ.ವಿಜಯೇಂದ್ರ ಚುನಾವಣೆಯ ಹಿನ್ನೆಲೆಯಲ್ಲಿ ಜಾತಿ ಲೆಕ್ಕಾಚಾರದಲ್ಲಿ ತುರ್ತಾಗಿ ದಿನಾಂಕ ಗಳನ್ನು ನಿಗದಿ ಮಾಡಿ ಪ್ರತಿಮೆ ಅನಾ ವರಣಗೊಳಿಸಲು ಹೊರಟಿರುವುದು ಕೀಳು ರಾಜಕೀಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈಗಾಗಲೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆ ಯನ್ನು ಮುಸಲ್ಮಾನರು ಸೇರಿದಂತೆ ಜಾತಿ ಭೇದವಿಲ್ಲದೆ ಎಲ್ಲಾ ಜನಾಂಗದ ವರು ಅಭಿಮಾನಿಗಳು ಕೂಡ ದೇಣಿಗೆ ಸಂಗ್ರಹಿಸಿ ಸುಮಾರು ಮೂರು ಲಕ್ಷ ವೆಚ್ಚದಲ್ಲಿ ರಾಘವೇಂದ್ರ ಬಡಾವಣೆ ಯ ಹೆದ್ದಾರಿಯ ಸಮೀಪದಲ್ಲಿ ಶ್ರೀ ಜಗದ್ಗುರು ನಿರಂಜನಾನಂದ ಪುರಿ ಸ್ವಾಮೀಜಿಗಳ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಲ್ಲಾ ಪಕ್ಷದ ಮುಖಂಡರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ದೇಶಕ್ಕಾಗಿ ನಾಡಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಚೆನ್ನಮ್ಮನ ಬಂಟ ಸಂಗೊಳ್ಳಿ ರಾಯಣ್ಣನ ಪುತ್ತಳಿ ಅನಾವರಣಗೊಳ್ಳಬೇಕಿತ್ತು.ಆದರೆ ಸಂಸದ ಬಿ.ವೈ.ರಾಘವೇಂದ್ರ ತನ್ನ ರಾಜಕೀಯ ಲಾಭಕ್ಕಾಗಿ ದುರುದ್ದೇಶ ದಿಂದ ಸಮಾಜ ಒಡೆಯುವ ಕೆಲಸಕ್ಕೆ ಮುಂದಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡು ನಾಡಿಗಾಗಿ ಮಡಿದ ನಾಡಿನ ಕ್ರಾಂತಿ ವೀರನಿಗೆ ಸ್ಥಳಕ್ಕೆ ಅನುಮತಿ ಪಡೆದಿಲ್ಲ ಎಂಬ ಸಬೂಬಿ ನೊಂದಿಗೆ ಸಂಸದರ ಕುಮ್ಮಕ್ಕಿ ನಿಂದ ರಾಜಕೀಯ ದ್ವೇಷದಿಂದ ನನ್ನ ಮೇಲೆ ದೂರು ಕೂಡ ದಾಖಲಾಗು ವಂತೆ ನೋಡಿಕೊಳ್ಳಲಾಗಿತ್ತು , ಇಂತಹ ಗೊಡ್ಡು ರಾಜಕೀಯ ಬೆದರಿಕೆಗೆ ಹೆದರದೆ ಜಗ್ಗದೆ ಸಂಗೊಳ್ಳಿ ರಾಯಣ್ಣ ನ ಅಭಿಮಾನಿಗಳ ಒತ್ತಾಸೆಯಂತೆ ರಾಯಣ್ಣ ಹಾಗೂ ಡಾ: ಬಿ.ಆರ್. ಅಂಬೇಡ್ಕರ್, ಕ್ರಾಂತಿಯೋಗಿ ಬಸವಣ್ಣ, ಅಕ್ಕಮಹಾದೇವಿ ರವರ ಪುತ್ತಳಿಗಳನ್ನು ನಗರದ ಪ್ರಮುಖ ವೃತ್ತಗಳಲ್ಲಿ ಅನಾವರಣಗೊಳಿಸುವ ಮೂಲಕ ಯುವ ಪೀಳಿಗೆಗೆ ದೇಶ ಭಕ್ತರ ನಾಡಿನ ಶ್ರೇಷ್ಠರ ಸಂತರ ಪರಿ ಚಯ ಹಾಗೂ ಅವರ ಕೊಡುಗೆಯನ್ನು ಸ್ಮರಿಸಬೇಕೆಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿ ಅನುಮೋದನೆ ಪಡೆಯಲಾಗಿತ್ತು.
ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಸರ್ಕಾರ ಪುರಸಭೆ ಸುಮಾರು 8 ಲಕ್ಷ ವೆಚ್ಚದಲ್ಲಿ ಪುತ್ತಳಿ ನಿರ್ಮಾಣವಾಗಿದೆ ಎಂದು ಜಾಗ ಕೂಡ ನಿಗದಿಯಾಗಿತ್ತು, ಆದರೆ ಚುನಾವಣೆ ಸಮೀಪವಾಗು ತ್ತಿದ್ದಂತೆಯೇ ನೀಚ ರಾಜಕಾರಣ ನಡೆಸಿರುವ ಸಂಸದ ಬಿ.ವೈ.ರಾಘ ವೇಂದ್ರ ಹಾಗೂ ಬಿಜೆಪಿ ರಾಜ್ಯ ಉಪಾ ಧ್ಯಕ್ಷ ಬಿ.ವೈ.ವಿಜಯೇಂದ್ರ ಜಾತಿವಾರು ಲೆಕ್ಕಾಚಾರ ಮಾಡಿ ತರಾತುರಿಯಲ್ಲಿ ಮತ ಸೆಳೆಯಲು ಯಡಿಯೂರಪ್ಪ ನವರ ಪತ್ನಿ ಮೈತ್ರಾದೇವಿಯವರ ಹೆಸರಿನಲ್ಲಿ ಪುತ್ತಳಿಯನ್ನು ನಿರ್ಮಾಣ ಕೊಡುಗೆಯನ್ನು ಕೊಡುವುದಾಗಿ ಬಿ. ವೈ.ವಿಜಯೇಂದ್ರ ಘೋಷಿಸಿರುತ್ತಾರೆ. ಸಮಾಜದ ಕೆಲವು ಬಂಧುಗಳು ಕೂಡ ರಾಜಕೀಯ ಒತ್ತಾಸೆಗೆ ಮಣಿದು ಪುತ್ತಳಿ ಅನಾವರಣದಲ್ಲಿ ರಾಜಕೀಯ ಬೆರೆಸಿರುವುದು ಬೇಸರ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟಾಚಾರದಲ್ಲಿ ಲೂಟಿ ಹೊಡೆದ ಹಣದಿಂದ ಪುತ್ತಳಿಗಳಿಗೆ ಹಣ ಕೊಡಿಗೆ ಕೊಡುವ ಮೂಲಕ ರಾಯಣ್ಣನಿಗೆ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಧರ್ಮ ಕ್ರಾಂತಿಯನ್ನೆಬ್ಬಿಸಿದ ಕ್ರಾಂತಿಯೋಗಿ ಬಸವಣ್ಣ ಅಕ್ಕಮಹಾ ದೇವಿಯವರಿಗೆ ಅವಮಾನ ಮಾಡಿ ದ್ದಾರೆ. ಮುಂದಿನ ರಾಜಕೀಯ ಉದ್ದೇಶಕ್ಕಾಗಿ ಸ್ವಾರ್ಥಕ್ಕೆ ಪ್ರತಿಮೆ ಗಳನ್ನು ಅನಾವರಣಗೊಳಿಸಲು ಕನಕ ಗುರು ಪೀಠದ ಗುರುಗಳನ್ನು ಮುನ್ನೆಲೆ ಗೆ ತಂದಿರುವುದು ದುರಂತ.
ಮಹನೀಯರ ಪುತ್ತಳಿ ಅನಾವರಣ ರಾಜಕೀಯಕ್ಕಾಗಿ ಬಳಸಿರುವುದನ್ನು ಸಂಗೊಳ್ಳಿ ರಾಯಣ್ಣನ ಅಭಿಮಾನಿ ಗಳು ವಿರೋಧಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಜಾತ್ಯತೀತವಾಗಿ ಪಕ್ಷಾತೀತವಾಗಿ ಅದ್ದೂರಿಯಾಗಿ ಪ್ರತಿಮೆ ಅನಾವರಣ ಗೊಳ್ಳಬೇಕೆಂದು ನಮ್ಮ ಹೋರಾಟ ವನ್ನು ಮುಂದುವರಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗೋಣಿ ಸಂದೀಪ್ ಜಕ್ಕಿನ ಕೊಪ್ಪ ಶ್ರೀಕಾಂತ್, ಪ್ರಕಾಶ್, ಜಗದೀಶ್, ಸೈಫ್ ಉಲ್ಲಾ , ರೋಷನ್, ಹುಲ್ಮಾರ್ ಕಮಲಮ್ಮ, ಗೋಣಿ ರಾಮು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795