ಗೋ ಹತ್ಯೆ ಖಂಡಿಸಿ ಶಿಕಾರಿಪುರದಲ್ಲಿ ಪ್ರತಿಭಟನಾ ಮೆರವಣಿಗೆ: ಸ್ವಯಂ ಪ್ರೇರಿತ ಬಂದ್

ವಿಜಯ ಸಂಘರ್ಷ
ಶಿಕಾರಿಪುರ: ತಾಲೂಕಿನಲ್ಲಿ ಗೋ ಹತ್ಯೆ ಹಾಗೂ ಗೋವು ಅಕ್ರಮ ಸಾಗಾಣಿಕೆ ವಿಚಾರವಾಗಿ ಬಕ್ರೀದ್ ಹಬ್ಬದ ಸಂದರ್ಭ ದಲ್ಲಿ ಜು 2ರ ದಿನ ತಾಲೂಕಿನ ಪುಣೆದಹಳ್ಳಿ ಗ್ರಾಮದ ಬಳಿ ಪತ್ತೆಯಾದ ಗೋಮಾಂಸ ಹಾಗೂ ಗೋ ಚರ್ಮದ ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೋಮು ಗಲಭೆಯ ಹಂತಕ್ಕೆ ತಲುಪಿ ಎರಡು ಗುಂಪುಗಳ ಮಧ್ಯೆ ಠಾಣೆಯ ಎದುರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ರಾಜಕೀಯ ಬಣ್ಣಕ್ಕೆ ತಿರುಗಿತ್ತು.
   ಹಿಂದೂ ಸಂಘ ಪರಿವಾರದ ಕಾರ್ಯಕರ್ತ ಹರೀಶ್ ಮೇಲೆ ಆ ಸಮಯದಲ್ಲಿ ಹಲ್ಲೆ ಆಗಿದೆ ಎಂದು ಆರೋಪಿಸಿ ಪರಸ್ಪರ ಎಫ್ಐಆರ್ ಕೂಡ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಆಗಿದೆ ಹಾಗೂ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದೆ ಗೋ ಹತ್ಯೆ ನಿಲ್ಲಬೇಕೆಂದು ಆಗ್ರಹಿಸಿ ಜಾಗೃತಿಕ ನಾಗರೀಕ ವೇದಿಕೆಯಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
  
   ಪ್ರತಿಭಟನಾ ಮೆರವಣಿಗೆಯ ಸಮಯ ದಲ್ಲಿ ಪಟ್ಟಣದ ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಿ ಬಂದ್ ಆಚರಿಸುವ ಮೂಲಕ ಜಾಗೃತಿಕ ನಾಗರೀಕ ವೇದಿಕೆ ಕರೆ ನೀಡಿದ್ದ ಸ್ವಯಂ ಪ್ರೇರಿತ ಬಂದ್ ಭಾಗಶಹ ಯಶಸ್ವಿಯಾಯಿತು.

   ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕೇಸರಿ ಶಾಲು ಧರಿಸಿದ ಯುವಕರು ಕೇಸರಿ ಬಾವುಟ ಹಿಡಿದು ಪಟ್ಟಣದ ಅಂಬೇಡ್ಕರ್ ಸರ್ಕಲ್ ನಿಂದ ಬಸ್ ನಿಲ್ದಾಣ ಹಾಗೂ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಬೃಹತ್ ಸಭೆಯ ಕಾರ್ಯ ಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಗೋ ಹತ್ಯಪ್ರಕರಣದಲ್ಲಿ ಭಾಗಿಯಾದ ಆರೋಪಿ ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು.
  
     ಹಿಂದೂ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆಯ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಾರೀ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
  
  ಈ ಸಂದರ್ಭದಲ್ಲಿ ಜಾಗೃತ ನಾಗರೀಕ ವೇದಿಕೆಯ ಪ್ರಮುಖರಾದ ಕಿರಣ್ ಶೆಟ್ಟಿ, ದಾವಣಗೆರೆ ಸತೀಶ್, ಸದ್ಗುಣ, ಶರತ್, ದೇವರಾಜ್ ಸೇರಿದಂತೆ ಹಿಂದೂಪರ ಸಂಘಟನೆಯ ಹಲವು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

ಸುದ್ದಿ ಹಾಗೂ ಜಾಹೀರಾರಿಗಾಗಿ ಸಂಪರ್ಕಿಸಿ:+919743225795

1 ಕಾಮೆಂಟ್‌ಗಳು

ನವೀನ ಹಳೆಯದು