ವಿಜಯ ಸಂಘರ್ಷ
ಶಿಕಾರಿಪುರ: ತಾಲೂಕು ಕಚೇರಿಯ ಶೌಚಾ ಲಯಗಳು ದುರ್ನಾಥದಿಂದ ಕೂಡಿರುವ ಹಿನ್ನಲೆಯಲ್ಲಿ ಸಿಬ್ಬಂದಿಗಳು ಮೂತ್ರ ವಿಸರ್ಜಿಸಲು ಬಯಲು ಹುಡುಕುತ್ತಿ ರುವುದು, ಮತ್ತೆ ಕೆಲವು ಸಿಬ್ಬಂದಿಗಳು ಮೂತ್ರ ವಿಸರ್ಜಿಸಲು ತಾಲೂಕು ಕಚೇರಿಯ ಹಿಂಭಾಗದ ಕಾಂಪೌಂಡ್ ಅವಲಂಬಿಸಿ ರುವುದು ವಿಪರ್ಯಾಸ ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಭಂಡಾರಿ ಮಾಲತೇಶ್ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತಾಲೂಕು ಕಚೇರಿ, ಬಸ್ ನಿಲ್ದಾಣ ಹಾಗೂ ಪಟ್ಟಣದಲ್ಲಿರುವ ಸಾರ್ವಜನಿಕ ಶೌಚಾಲಯಗಳಿಗೆ ಸ್ಥಳೀಯ ಶಾಸಕ ಬಿ.ವೈ ವಿಜಯೇಂದ್ರ ಒಮ್ಮೆ ಭೇಟಿ ನೀಡಿ ಸಾರ್ವಜನಿಕರು ಮತ್ತು ತಾಲೂಕು ಕಚೇರಿಯ ಸಿಬ್ಬಂದಿಗಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಆಡಳಿತ ನಡೆಸುವ ಶಕ್ತಿ ಕೇಂದ್ರ ದಲ್ಲಿಯೇ ಸಿಬ್ಬಂದಿ ಹಾಗೂ ಅಧಿಕಾರಿ ಗಳ ಪರಿಸ್ಥಿತಿ ಈಗಿರುವಾಗ ತಾಲೂಕಿನ ಮತದಾರರು ಸಾರ್ವಜನಿಕರ ಶೌಚಾಲಯಗಳ ಪರಿಸ್ಥಿತಿಯು ಇನ್ನು ಚಿಂತಾಜನಕವಾಗಿದೆ. ತಾಲೂಕು ಕಚೇರಿಯ ಆಹಾರ ಇಲಾಖೆಯ ಪಕ್ಕದಲ್ಲಿಯೇ ಇರುವ ಶೌಚಾಲಯ ವನ್ನು ಬೀದಿ ನಾಯಿಗಳು, ಹಂದಿಗಳು ಕೂಡ ಪ್ರವೇಶಿಸಲು ಹಿಂಜರಿಯು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಲಸು ದುರ್ನಾಥ ದಿಂದ ಕೂಡಿದ್ದು ಶಾಸಕರು ಹಾಗೂ ಸಂಸದರ ಆಡಳಿತದ ಸ್ವಚ್ಛತೆಗೆ ಹಿಡಿದ ಕನ್ನಡಿ ಆಗಿದೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ರವರು ಸ್ವಚ್ಛ ಭಾರತ್ ಹಾಗೂ ಮನೆ ಮನೆಗೆ ಶೌಚಾಲಯ ಎಂದು ಘೋಷಣೆ ಕೂಗುತ್ತಿದ್ದರೆ. ಇತ್ತ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರವರ ಕ್ಷೇತ್ರದ ಸ್ವಚ್ಛ ಭಾರತ್ ಆಂದೋಲ ನದ ಸಾರ್ವಜನಿಕ ಶೌಚಾಲಯಗಳು ಗಬ್ಬು ನಾರುತ್ತಿದೆ.
ಯಡಿಯೂರಪ್ಪ ಇವರ ಅವಧಿಯಲ್ಲಿ ಖಾಸಗಿ ಬಸ್ ನಿಲ್ದಾಣದ ಮೂತ್ರ ವಿಸರ್ಜಿಸುವ ಶೌಚಾಲಯದಲ್ಲಿ ಅಳವಡಿಸಿದ್ದ ಯೂರಿನ್ ಪ್ಯಾನೆಲ್ ಗಳೇ ಕಾಣೆಯಾಗಿವೆ. ದೂರ ದೂರದಿಂದ ಬರುವ ಪ್ರಯಾಣಿಕರು ರೈತರು ಸಾರ್ವಜನಿಕರು ಶೌಚಾಲಯದ ಅವ್ಯವಸ್ಥೆಯ ಕುರಿತು ನೂತನ ಶಾಸಕರ ಜವಾಬ್ದಾರಿಯ ಬಗ್ಗೆ ಅಪಹಾಸ್ಯ ಮಾಡುವಂಥ ಆಗಿದೆ.
ಪದೇ ಪದೇ ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿ ಯೂರಪ್ಪ ಇವರು ಶಿಕಾರಿಪುರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿ ದ್ದೇನೆ ಎಂದು ಬೊಬ್ಬೆ ಹೊಡೆಯುತ್ತಿರುವ, ಇವರಿಗೆ ಸಾರ್ವಜನಿಕರು ಉಪಯೋಗಿ ಸುವ ಶೌಚಾಲಯಗಳನ್ನು ಒಮ್ಮೆಯಾದರೂ ಉಪಯೋಗಿಸಿ ಶೌಚಾಲಯಗಳ ಅವ್ಯವಸ್ತೆ ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಮಳೆಗಾಲದಲ್ಲಿ ಹರಡಲಿರುವ ಸಾಂಕ್ರಾಮಿಕ ರೋಗ ತಾಲೂಕಿನ ಶಕ್ತಿ ಕೇಂದ್ರ ವಾದ ತಾಲೂಕು ಕಚೇರಿಯಿಂದಲೇ ಆರಂಭ ವಾಗುವ ಲಕ್ಷಣಗಳು ಗೋಚರಿಸುತ್ತಿವೆ. ತಾಲೂಕು ಆಡಳಿತ ಖಾಸಗಿ ಬಸ್ ನಿಲ್ದಾಣದ ಮೇಲ್ಭಾಗದ ಶೌಚಾಲಯವನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದು, ಹಳೆ ಸಂತೆ ಮಾರುಕಟ್ಟೆಯ ಶೌಚಾಲಯವನ್ನು ಖಾಸಗಿಯವರಿಗೆ ಅಂಗಡಿ ಮುಗ್ಗಟ್ಟು ಹಾಗೂ ತರಕಾರಿ ಇಟ್ಟುಕೊಳ್ಳಲು ಬಾಡಿಗೆ ಇಟ್ಟಂತಿದೆ. ಸಾರ್ವಜನಿಕರಿಗೆ ಮೀಸಲಿರುವ ಶೌಚಾಲಯವನ್ನು ಖಾಸಗಿಯವರಿಗೆ ನೀಡಿದ್ದು ಇದರಿಂದ ಬರುವ ಆದಾಯದಲ್ಲಿ ಯಾರು ಯಾರಿಗೆ ಪಾಲು ಇದೆ ಎಂಬ ಬಗ್ಗೆ ತನಿಖೆ ಆಗಬೇಕಿದೆ. ಸಾರ್ವಜನಿಕರ ಶೌಚಾಲಯಗಳು ಸರಿಪಡಿಸದಿದ್ದರೆ ಮುಂದೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಬಡಗಿ ಪಾಲಾಕ್ಷಪ್ಪ , ಗೋಣಿ ಸಂದೀಪ್ಬ, ಗೋಣಿ ರಾಮು, ಬನ್ನೂರ್ ಚರಣ್, ಗಜೇಂದ್ರ ಕಾಗಿನಲ್ಲಿ, ನನ್ನುಸಾಬ್ ಉಪಸ್ಥಿತರಿದ್ದರು.
(ವರದಿ ಹುಲಿಗಿ ಕೃಷ್ಣ )
Tags:
ಶಿಕಾರಿಪುರ ವರದಿ