ಹೊರತು ಅಪಾಯಕಾರಿಯಲ್ಲ ಎಂದು ರೋಟರಿ ಸಂಸ್ಥೆ ಅಧ್ಯಕ್ಷೆ ಡಾ.ರಾಜನಂದಿನಿ ಕಾಗೋಡು ತಿಳಿಸಿದರು.
ಇಲ್ಲಿನ ವೀರಶೈವ ಕಲ್ಯಾಣ ಮಂಟಪ ದಲ್ಲಿ ವೀರಶೈವ ಯುವಕ ಸಂಘ, ವೀರಶೈವ ಸಮಾಜ, ಅಕ್ಕನ ಬಳಗ ಮತ್ತು ರೋಟರಿ ರಕ್ತನಿಧಿ ಕೇಂದ್ರದ ಆಶ್ರಯದಲ್ಲಿ 50 ನೇ ವರ್ಷದ ಗಣೇಶೋತ್ಸವ ಅಂಗವಾಗಿ
ದಿ. ಸತೀಶ್ ಕೋರಿ,ಪ್ರಕಾಶ್ ದುಗ್ಗಾವಿ, ಚಂದ್ರು ವರದಿ ಇವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ವನ್ನುಉದ್ಘಾಟಿಸಿ,ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡುತ್ತಿದ್ದರು.
ಶುಭ ಸಮಾರಂಭಗಳು, ಉತ್ಸವಗಳಲ್ಲಿ ರಕ್ತದಾನ ಶಿಬಿರ ಆಯೋಜಿಸುವುದು ಉತ್ತಮ ಬೆಳವಣಿಗೆ, ಧಾರ್ಮಿಕ ಕಾರ್ಯದ ಜೊತೆಗೆ ಸಾಮಾಜಿಕ ಕೆಲಸವನ್ನೂ ಮಾಡಿದ ಫಲ ಸಂಸ್ಥೆಗಳಿಗೆ ಸಿಗುತ್ತದೆ. ಪ್ರಸ್ತುತದಿನಮಾನಗಳಲ್ಲಿ
ರಕ್ತ ತೀರ ಅಗತ್ಯವಿದ್ದು, ಶಿಬಿರಗಳ ಮೂಲಕರಕ್ತ ಪೂರೈಕೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ವೀರಶೈವ ಸಮಾಜದ ಅಧ್ಯಕ್ಷ ಬಸವರಾಜ ಗುಂಡಾಲಿ ಮಾತನಾಡಿ, ರಕ್ತದಾನ ಅತ್ಯಂತ ಪುಣ್ಯದ ಕೆಲಸ. ನಮ್ಮ ಸಮಾಜದ ವತಿಯಿಂದ ನಿರಂತರವಾಗಿ ಗಣೇಶೋತ್ಸವ ಸೇರಿದಂತೆ ವಿವಿಧ ಸಂದರ್ಭದಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡಿ ಕೊಂಡುಬರಲಾಗುತ್ತಿದೆ. ಯುವಜನರು ರಕ್ತದಾನ ಮಾಡಲು ಸ್ವಯಂಪ್ರೇರಿತ ವಾಗಿ ಮುಂದೆ ಬರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವೀರಶೈವ ಯುವಕ ಸಂಘದ ಅಧ್ಯಕ್ಷ ಗುರುಪ್ರಸಾದ್, ನಮ್ಮ ಯುವಕ ಸಂಘವನ್ನು ಕಟ್ಟುವಲ್ಲಿ ನಿರಂತರವಾಗಿ ಶ್ರಮಿಸಿ ಈಗ ನಮ್ಮ ಜೊತೆ ಇಲ್ಲದ ಸತೀಶ್ ಕೋರಿ, ಪ್ರಕಾಶ್, ಚಂದ್ರು ಅವರ ಹೆಸರಿನಲ್ಲಿ ನಾವು ರಕ್ತದಾನ ಶಿಬಿರವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಐದು ವರ್ಷಗಳಿಂದ ನಡೆಸುತ್ತಿರುವ ರಕ್ತದಾನ ಶಿಬಿರಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದರು.
ರೋಟರಿ ರಕ್ತನಿಧಿ ಕೇಂದ್ರದ ಡಾ.ಎಚ್.ಎಂ.ಶಿವಕುಮಾರ್,ಪ್ರಮುಖ ರಾದ ಡಾ.ಬಿ.ಜಿ.ಸಂಗಮ್, ಡಾ.ಸುಬೋದ್, ನಿರಂಜನಕೋರಿ, ಗಿರೀಶ್ ಬೇಸೂರು, ಯೋಗೀಶ್ ಪಟೇಲ್, ಶಶಿಧರ್ ಎಂ.ಎಸ್.ಶಂಭು ದಳವಾಯಿ, ಅಕ್ಕನ ಬಳಗ ಹಾಗೂ ಯುವಕ ಸಂಘದ ಸದಸ್ಯರು ಹಾಜರಿದ್ದರು