ವಿಜಯ ಸಂಘರ್ಷ
ಭದ್ರಾವತಿ: ಕಾವೇರಿ ನದಿ ನೀರಿನ ಸಂಬಂಧ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜನ ಜೀವನ ಎಂದಿನಂತೆ ಮಾಮೂಲಿ ಯಾಗಿತ್ತು. ಆಟೋಗಳು ಸೇರಿದಂತೆ ಶಿವಮೊಗ್ಗ ಭದ್ರಾವತಿ ಮಧ್ಯೆ ಓಡಾಡುವ ಟ್ಯಾಕ್ಸಿಗಳು, ಸರ್ಕಾರಿ ಹಾಗು ಖಾಸಗಿ ಬಸ್‌ಗಳ ಸಂಚಾರ ಎಂದಿನಂತೆ ಇತ್ತು.
ನ್ಯಾಯವಾದಿಗಳ ಸಂಘವು ನ್ಯಾಯಾಲ ಯದ ಕಲಾಪದಿಂದ ಹೊರಗುಳಿದು ಪ್ರತಿಭಟನಾ ಮೆರವಣಿಗೆ ನಡೆಸಿ ಮಾಧವಾ ಚಾರ್ ವೃತ್ತ ಹಾಗು ರಂಗಪ್ಪ ವೃತ್ತದಲ್ಲಿ ಮಾನವ ಸರಪಳಿ ನಡೆಸಿದರು.
ಬಿಜೆಪಿ ಪಕ್ಷವು ಬಂದ್‌ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ ಕಾರಣ ನೇರವಾಗಿ ಪಾಲ್ಗೊಳ್ಳಲಿಲ್ಲ. ಬಂದ್ ಕಾರಣ ಯಾವುದೆ ಸಂಘ ಸಂಸ್ಥೆಗಳು ಬಂದ್ ಕರೆ ನೀಡುವ ಜವಾಬ್ದಾ ರಿಯನ್ನು ಹೊತ್ತುಕೊಂಡಿರಲಿಲ್ಲ.
ಕೆಲ ಅಂಗಡಿ ಮುಂಗಟ್ಟುಗಳು ತೆರೆದಿದ್ದರೆ ಮತ್ತೆ ಕೆಲವು ಮುಚ್ಚಿದ್ದವು. ಸರ್ಕಾರಿ ಕಚೇರಿಗಳು, ವಾಣಜ್ಯ ಸಂಸ್ಥೆಗಳು, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದರೆ ಮತ್ತೆ ಕೆಲವು ಬಂದ್ ಕಾರಣ ರಜಾ ಘೋಷಿಸಿದ್ದರು.