ವಿಜಯ ಸಂಘರ್ಷ
ಶಿಕಾರಿಪುರ: ಕನ್ನಡ ನಾಡಿನ ಜೀವನದಿ ಕಾವೇರಿ ನೀರಿಗಾಗಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಜಯ ಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಗುಣ ರಂಜನ್ ಶೆಟ್ಟಿ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಶಿಕಾರಿಪುರ ತಾಲೂಕು ಘಟಕದಿಂದ ನಾಳೆ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ ತಿಳಿಸಿದ್ದಾರೆ.
ನಾಡಿನ ಭಾಷೆ ನೆಲ ಜಲದ ಉಳಿವಿನ ಹೋರಾಟದಲ್ಲಿ ಗುಣರಂಜನ್ ಶೆಟ್ಟಿ ರವರ ಆಶಯದಂತೆ ಯಾವುದೇ ರಾಜಿ ಇಲ್ಲ, ಕಾವೇರಿನದಿ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ಸರ್ಕಾರಗಳು ಮಂಡಿಸಿರುವ ವಾದಗಳು ವಿಫಲವಾಗಿದ್ದು, 122.75 ಕೋಟಿ ರೂಗಳನ್ನು ಕಾವೇರಿ ನದಿ ಪರವಾಗಿ ವಾದ ಮಂಡಿಸುವ ವಕೀಲರಿಗೆ ಖರ್ಚಾಗಿದ್ದರೂ ಕೂಡ ಕೆ ಆರ್ ಎಸ್ ಡ್ಯಾಮ್ ನಲ್ಲಿ ನೀರು ಇರುವ ವಾಸ್ತವಂಶ ವನ್ನು ವಾದಮಂಡಿಸುವಲ್ಲಿ ಈ ಹಿಂದಿನ ಸರ್ಕಾರಗಳು ಸೇರಿದಂತೆ ಈಗಿನ ಸರ್ಕಾರ ಕೂಡ ವಿಫಲವಾಗಿದೆ.
ಈ ಹಿಂದೆ ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ತೆಗೆದುಕೊಂಡ ದಿಟ್ಟ ಕ್ರಮವನ್ನು ಇಂದಿನ ಮುಖ್ಯಮಂತ್ರಿ ಗಳು ಕೂಡ ಅನುಸರಿಸುವ ಮೂಲಕ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು ಹಾಗೂ ರಾಜ್ಯದ ಸಂಸದರು ಪಕ್ಷ ಬೇಧ ಮರೆತು ರಾಜೀನಾಮೆ ನೀಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಡ ತರುವ ಮೂಲಕ ನೀರಿನ ವಾಸ್ತುವಂಶ ಪರಿಶೀಲಿಸಲು ಕೇಂದ್ರ ಮಧ್ಯಪ್ರವೇಶಿಸು ವಂತೆ ಒತ್ತಾಯಿಸಿ ಕೇಂದ್ರ ರಾಜ್ಯ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ತಹಶೀಲ್ದಾರ್ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದರು.
ಸಾರ್ವಜನಿಕರಿಗೆ, ಕೂಲಿ ಕಾರ್ಮಿಕರಿಗೆ , ಬೀದಿ ಬದಿ ವ್ಯಾಪಾರಸ್ಥರಿಗೆ ಅನಾನುಕೂಲ ಆಗಬಾರದು ಎಂಬ ಉದ್ದೇಶದಿಂದ ಸಂಘಟನೆಯ ವತಿಯಿಂದ ಬಂದ್ ಮಾಡುವಂತೆ ಒತ್ತಾಯ ಮಾಡದೇ ಪ್ರತಿಭಟನೆ ಮಾಡುವ ಮೂಲಕ ರಾಜ್ಯದ ಸಂಸದರಿಗೆ ಹಾಗೂ ಸರ್ಕಾರದ ನಡೆ ಖಂಡಿಸಿ ಸ್ವಯಂ ಪ್ರೇರಿತ ಬಂದ್ ಗೆ ಬಾಹ್ಯ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ತಾಲೂಕಿನ ರೈತರು ಕನ್ನಡಪರ ಹೋರಾಟ ಗಾರರು ರೈತರ ಪರ ನಡೆಯುವ ಕಾವೇರಿ ನೀರಿನ ವಿಚಾರವಾಗಿ ಯಾವುದೇ ಗಲಭೆ ಮಾಡದೆ ಶಾಂತಿಯುತವಾಗಿ ಕರ್ನಾಟಕ ಬಂದ್ ನಲ್ಲಿ ಪ್ರತಿಭಟನೆ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಸಬೇಕು ಎಂದು ಮನವಿ ಮಾಡಿದರು.
Tags:
ಶಿಕಾರಿಪುರ ಬಂದ್ ಬೆಂಬಲ