ವಿಜಯ ಸಂಘರ್ಷ
ಭದ್ರಾವತಿ: ಮಕ್ಕಳು ತೋರುವ ಪ್ರೀತಿಗಿಂತ ದೊಡ್ಡ ಪ್ರಶಸ್ತಿ ಬೇರೊಂದಿಲ್ಲ ಎಂದು ಯರೇಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
ಅವರು ಶುಕ್ರವಾರ ಯರೇಹಳ್ಳಿ ಶಾಲೆಯಲ್ಲಿ ಮಕ್ಕಳು ನಡೆಸಿಕೊಟ್ಟ ಶಿಕ್ಷಕರ ದಿನಾಚರ ಣೆಯ ಸಂದರ್ಭದಲ್ಲಿ ಮಾತನಾಡಿ, ಶಿಕ್ಷಕರ ಮೇಲಿನ ಅಪಾರ ಪ್ರೀತಿಯಿಂದ ಮಕ್ಕಳು ಏನೆಲ್ಲಾ ಮಾಡಬಲ್ಲರು ಎಂಬುದಕ್ಕೆ ಅವರೇ ಗುಟ್ಟಾಗಿ ಇಂತಹ ಕಾರ್ಯಕ್ರಮ ರೂಪಿಸಿ ಸಂಭ್ರಮ ಪಟ್ಟಿದ್ದೆ ಸಾಕ್ಷಿ. ಪುಸ್ತಕ ಪ್ರೇಮ ಬೆಳಿಸಿಕೊಳ್ಳಿ ಶಿಸ್ತಿನ ಸಿಪಾಯಿಗಳಾಗಿ ರಾಷ್ಟ್ರ ನಾಯಕರ ರೀತಿ ಬೆಳೆಯಿರಿ ಎಂದು ಶುಭ ಹಾರೈಸಿದರು.
ಗ್ರಂಥಾಲಯ ಮೇಲ್ವಿಚಾರಕಿ ಮಾಲಾ
ಹೆಚ್ಚು ಪುಸ್ತಕ ಓದಿ ತಿಂಗಳಿಗೆ ಒಮ್ಮೆ ಬಹುಮಾನ ಪಡೆಯಿರಿ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಿ ಓದಿ ಜಾಣರಾಗಿ ಎಂದು ಕರೆ ಕೊಟ್ಟರು.
ಕಾಳಿಂಗನಹಳ್ಳಿ ಮುಖ್ಯಶಿಕ್ಷಕ ಜಯಸ್ವಾಮಿ ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಶಿಕ್ಷಕರಾದ ವಾಣಿಶ್ರೀ ಪಾಟೀಲ್, ಶಂಕರ್, ಸುಮಾ ಹಾಗೂ ಜ್ಯೋತಿ ಶುಭ ಕೋರಿದರು.ರಂಜಿತಾ ಸ್ವಾಗತಿಸಿದರೆ, ಸ್ವಪ್ನ ನಿರೂಪಿಸಿ, ತೇಜು ವಂದಿಸಿದರು.
ಇದೆ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿ ಗಳಾದ ಅರುಣ್, ಪವನ್,ಹಾಗೂ ಭರತ ಉಪಸ್ಥಿತರಿದ್ದರು.