ವಿಜಯ ಸಂಘರ್ಷ
ಭದ್ರಾವತಿ: ರಾಜ್ಯ ಸರ್ಕಾರ ಮಾಹಿತಿ ಹಕ್ಕು ಕಾಯ್ದೆಯನ್ನ ದುರ್ಬಲಗೊಳಿಸಲು ನಡೆಯುತ್ತಿರುವ ಹುನ್ನಾರ ಕೂಡಲೇ ಕೈ ಬಿಡಬೇಕೆಂದು ಸಾಮಾಜಿಕ ಹೋರಾಟ ಗಾರ ಶಶಿಕುಮಾರ್ ಎಸ್ ಗೌಡ ಒತ್ತಾಯಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ವಿರೋಧ ಪಕ್ಷಗಳು ಕೈ ಚಲ್ಲಿ ಕುಳಿತಿರುವ ಕಾರಣ ರಾಜ್ಯ ಸರ್ಕಾರ ಇಂತಹ ಹುನ್ನಾರಕ್ಕೆ ಮುಂದಾಗಿ ಮನಸ್ಸಿಗೆ ಬಂದ ರೀತಿಯಲ್ಲಿ ಅಧಿಕಾರಿಗಳಿಗೆ ಸೂಚಿಸುತ್ತಿರುವುದು ಯಾವ ನ್ಯಾಯ ಎಂದರು.
ಸಾಮಾಜಿಕ ಹೋರಾಟಗಾರರು ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರ ತಂಡವು ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರು ಮಾಡಿದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಲಾಗುವುದು.ಕಾರ್ಯಕರ್ತರಿಗೆ ತೊಂದರೆಯಾದಲ್ಲಿ ಸರ್ಕಾರದ ವಿರುದ್ದ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
Tags:
ಆರ್ ಟಿಐ ಕಾಯ್ದೆ