ಕರವೇ ವತಿಯಿಂದ ಅಂಚೆ ಪತ್ರಗಳ ಮೂಲಕ ರಕ್ತ ಚಳುವಳಿ

ವಿಜಯ ಸಂಘರ್ಷ
ಭದ್ರಾವತಿ: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷ ಟಿ.ಎ.ನಾರಾಯಣಗೌಡರ ಆದೇಶದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ರಾದ ಜ್ಯೋತಿ ಸೋಮಶೇಖರ್ ರವರ ನೇತೃತ್ವದಲ್ಲಿ ಅಂಚೆ ಪತ್ರಗಳ ಮೂಲಕ ರಕ್ತ ಚಳುವಳಿ ಅಭಿಯಾನ ನಡೆಸಿ ಪ್ರಧಾನಿ ಮೋದಿರವರಿಗೆ ಕಳುಹಿಸಲಾಯಿತು.

ಕಾವೇರಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ರಕ್ತದಿಂದ ಪತ್ರ ಬರೆದು, ಪ್ರಧಾನ ಮಂತ್ರಿ ಅವರು ಮಧ್ಯ ಪ್ರವೇಶಿಸ ಬೇಕೆಂದು ಒತ್ತಾಯಿಸಿ, ಕಾವೇರಿ ನಮ್ಮದು ರಕ್ತ ಕೊಟ್ಟೆವು ಕಾವೇರಿ ಬಿಡೇವು ಎಂಬ ಘೋಷಣೆಗಳನ್ನು ಕೂಗುತ್ತಾ ಅಂಚೆ ಕಾರ್ಡ್ ನಲ್ಲಿ ಕಾವೇರಿ ನಮ್ಮದು ಎಂದು ಬರೆದು ಅಂಚೆ ಬಾಕ್ಸ್ ನಲ್ಲಿ ಪ್ರಧಾನ ಮಂತ್ರಿಯವರಿಗೆ ಕಳುಹಿಸಲಾಯಿತು.

ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಜಾಹ್ನವಿ, ಜಿಲ್ಲಾ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾದ ಚೇತನ ಶೆಟ್ಟಿ, ನಗರ ಅಧ್ಯಕ್ಷರಾದ ಗೀತಾ ಭುವನ, ನಾಗರತ್ನ, ರೂಪ, ನಯನ, ಉಷಾ ಸೇರಿದಂತೆ ಮಹಿಳಾ ಕರವೇ ಪದಾಧಿಕಾರಿಗಳು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು