ವಿಜಯ ಸಂಘರ್ಷ
ಸಾಗರ: ತಾಲ್ಲೂಕಿನ ಆನಂದಪುರದ ರೈಲ್ವೇ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀಗಣೇಶ ಮೂರ್ತಿ ಯನ್ನು ಅದ್ದೂರಿ ಮೆರವಣಿಗೆಯೊಂದಿಗೆ ವಿಸರ್ಜಿಸಲಾಯಿತು.
ಗಣೇಶ ಮೂರ್ತಿಯನ್ನು ಹೊತ್ತೊಯ್ಯುತ್ತಿದ್ದ ಅಲಂಕೃತ ರಥದಲ್ಲಿ ಸ್ವಯಂಚಾಲಿತ 2 ಸಿಂಹಗಳ ಘರ್ಜನೆ , ಶಿವಪಾರ್ವತಿ ಆಶೀರ್ವದಿಸುತ್ತಿರುವ ಮೂರ್ತಿಗಳು ಮಕ್ಕಳ, ಭಕ್ತರ ಹಾಗೂ ಸಾರ್ವಜನಿಕರ ಆಕರ್ಷಣೆಯ ಕೇಂದ್ರ ವಾಗಿತ್ತು. ಕೇಸರಿ ಧ್ವಜ ಹಾಗೂ ಮಂಗಳ ವಾದ್ಯದೊಂದಿಗೆ ಸಾಗಿದ ಮೆರವಣಿಗೆ ಉತ್ಸವದಲ್ಲಿ ವೀರಗಾಸೆ, ಡ್ರಮ್ಸ್, ಗೊಂಬೆ ಕುಣಿತ ಜನರ ಕಣ್ಮನ ಸೆಳೆಯಿತು. ಡ್ರಮ್ಸ್ ಡಿಜೆ ಸಾಂಗ್ಗೆ ಯುವಜನತೆ ಕುಣಿದು ಕುಪ್ಪಳಿಸಿತು.
ಆನಂದಪುರ ಸುತ್ತಲಿನ ಹಳ್ಳಿಗಳಿಂದ 5 ಸಾವಿರಕ್ಕೂ ಹೆಚ್ಚು ಜನ ಆಗಮಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.