ಸಾರ್ವಜನಿಕ ಕುಂದುಕೊರತೆ ಸಭೆ ಮಾಹಿತಿ ವಾಹನದಲ್ಲಿ ಪ್ರಚುರ ಪಡಿಸಲು ಮನವಿ

ವಿಜಯ ಸಂಘರ್ಷ
ಭದ್ರಾವತಿ: ನಗರಸಭೆ, ತಾಲೂಕು ಆಡಳಿತ, ಪೊಲೀಸ್ ಇಲಾಖೆಗಳ ಸಾರ್ವಜನಿಕ ಸಂಪರ್ಕಸಭೆ ಹಾಗೂ ಕುಂದುಕೊರತೆಗಳ ಸಭೆ ನಡೆಸುವ ಮುನ್ನ ನಗರಸಭೆಯ ಕಸ ಸಂಗ್ರಹಣ ವಾಹನಗಳಲ್ಲಿ ಪ್ರಚುರ ಪಡಿಸುವಂತೆ ಆಗ್ರಹಿಸಿ ಮಂಗಳವಾರ ನಗರಸಭೆ ಮುಂಭಾಗ ಪೌರಾಯುಕ್ತರಿಗೆ ಕೆ ಆರ್ ಎಸ್ ಪಕ್ಷದ ವತಿಯಿಂದ ಮನವಿ ಸಲ್ಲಿಸಲಾಯಿತು.

ಕೇವಲ ಪತ್ರಿಕೆಗಳಲ್ಲಿ ಪ್ರಚಾರಪಡಿಸುವುದ ರಿಂದ ಸಾರ್ವಜನಿಕರಿಗೆ ಮಾಹಿತಿ ಕೊರತೆ ಯಾಗಿದೆ. ಈ ಹಿನ್ನೆಲೆಯಲ್ಲಿ ಕಸ ಸಂಗ್ರಹಣ ವಾಹನಗಳಲ್ಲಿ ಪ್ರಚುರಪಡಿ ಸುವುದರಿಂದ ಹೆಚ್ಚಿನ ದೂರಗಳು ಸಲ್ಲಿಸಬಹುದಾಗಿದೆ ಎಂದರು.

 ಇಂದು ನಗರಸಭೆ ಸಭಾಂಗಣದಲ್ಲಿ ನಡೆದ ಲೋಕಾಯುಕ್ತರ ಕುಂದು ಕೊರತೆ ಸಭೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ವ್ಯವಸ್ಥಾಪಕರಿಗೆ ಸೂಚಿಸಿರುತ್ತಾರೆ.ಈ ಹಿನ್ನೆಲೆಯಲ್ಲಿ ಸಭೆಗಳು ನಡೆಯುವ ಎರಡು ದಿನ ಮುಂಚೆ ಪ್ರಚರಪಡಿಸಲು ಮುಂದಾಗಬೇಕೆಂದುಕೆ ಕೆ ಆರ್ ಎಸ್ ಪಕ್ಷದ ಸಿ.ತೀರ್ಥಶ್ ಹಾಗೂ ಬಿ.ಎಸ್. ದಯಾನಂದ್ ಪೌರಾಯುಕ್ತರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು