ವಿಜಯ ಸಂಘರ್ಷ
ಸಾಗರ: ತಾಲ್ಲೂಕಿನ ಆನಂದಪುರ ಪಟ್ಟಣ ದಲ್ಲಿ ಅಪ್ಪುಸೇನೆಯ ವತಿಯಿಂದ ನಡೆದ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನವಾದದ್ದು ಮತ್ತು ಅಪ್ರಾಪ್ತ ಬಾಲಕನ್ನು ಬಳಸಿ ಓರ್ವ ಯುವತಿ ಅಶ್ಲೀಲ ನೃತ್ಯ ಮಾಡಿದ್ದು ಅಕ್ಷಮ್ಯ.ಆಯೋಜಕರು ಮತ್ತು ಪ್ರಾಯೋಜಕರ ಮೇಲೆ ಸುಮೋಟೋ ಕೇಸ್ ದಾಖಲಿಸಬೇಕು ಎಂದು ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಲ್ಯಾವಿಗೆರೆ ಸೋಮಶೇಖರ್ ಆಗ್ರಹಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ,ಕೆಲವರು ತಮ್ಮ ಕೀಳು ಅಭಿರುಚಿಯಿಂದ ಪ್ರಚಾರಕ್ಕೆ ಬರುವರು ಬಹಿರಂಗ ಕ್ಷಮೆ ಯಾಚಿಸಬೇಕು. ಉತ್ತಮ ಕಾರ್ಯಕ್ರಮದಲ್ಲಿ ಇಂತಹ ಕಳಪೆ, ಕೆಟ್ಟ ಸಂಸ್ಕೃತಿ ನಂಗಾನಾಚ್ ಸುಸಂಸ್ಕೃತಿ ಮಲೆನಾಡಿನಲ್ಲಿ ನಡೆದಿರುವುದು ಕೆಟ್ಟ ಹೆಸರು ತಂದoತಾಗಿದೆ. ಇಂತಹ ನಂಗಾನಾಚ್ ಕಾರ್ಯಕ್ರಮ ಅತ್ಯಂತ ಹೀನ ಸಂಸ್ಕೃತಿ ಯದ್ದಾಗಿದ್ದು ಅಲ್ಲದೇ ಬಹಳ ಬೇಸರ ವನ್ನುಂಟುಮಾಡಿದೆ. ಶಾಂತಿ, ಸಜ್ಜನರ ಪ್ರದೇಶವಾದ ಆನಂದಪುರದಲ್ಲಿ ಸಾರ್ವಜನಿಕವಾಗಿ ರಾಜ್ಯೋತ್ಸವದ ಹೆಸರಿನಲ್ಲಿ ಅಪ್ಪುಸೇನೆಯವರು ಇಂತಹ ಅಶ್ಲೀಲ ಕಾರ್ಯಕ್ರಮ ನಡೆಸಿರುವುದು ಮತ್ತು ಅದಕ್ಕೆ ಪ್ರಾಯೋಜನೆ ಮಾಡಿರುವವರು ಬಹಿರಂಗ ಕ್ಷಮೆ ಯಾಚಿಸಬೇಕು.
ಕೆಲವು ಪ್ರಚಾರ ಪ್ರಿಯರು ಇಂತಹ ಕೀಳು ಅಭಿರುಚಿಯನ್ನು ಹೊಂದಿರುವುದನ್ನು ಬಿಡಬೇಕು. ನಡೆದಿರುವ ಘಟನೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಕುರಿತಾಗಿ ಶಾಸಕ ಬೇಳೂರು ಗೋಪಾಲ ಕೃಷ್ಣ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಸೂಚಿಸಿದ್ದಾರೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಉಮೇಶ್ ಸಿದ್ದೇಶ್ವರ ಕಾಲೋನಿ, ಬಸವರಾಜ್, ಖಲೀಮುಲ್ಲ, ರಜಾಕ್, ಚೌಡಪ್ಪ ವರದಾಮೂಲ, ರಹಮತುಲ್ಲಾ, ಈಶ್ವರಪ್ಪ, ಸತೀಶ್ ಮಡ್ಡಿ ಇದ್ದರು.
(ವರದಿ ಎಸ್.ಡಿ.ಚಂದ್ರಶೇಖರ್ ಆನಂದಪುರ )
Tags
ಆನಂದಪುರ ರಾಜ್ಯೋತ್ಸವ