ಅನಗತ್ಯ ಆರೋಪ ಹೊರಿಸಿದವರು ದಾಖಲೆ ನೀಡಲಿ: ಹೊನಗೋಡು ರತ್ನಾಕರ ಸವಾಲು

ವಿಜಯ ಸಂಘರ್ಷ
ಸಾಗರ: ನಾನು ಯಾವುದೇ ಅಕ್ರಮ ದಂಧೆ ಮಾಡಿರುವುದಿಲ್ಲ ಈ ವಿಚಾರವಾಗಿ ಅನಗತ್ಯವಾಗಿ ಕೆಲವರು ನನ್ನ ಮೇಲೆ ಆರೋಪ ಮಾಡುತ್ತಾ ಬರುತ್ತಿದ್ದಾರೆ ಇದರ ಬಗ್ಗೆ ನಾನು ಯಾವುದೇ ದೇವಸ್ಥಾನಕ್ಕೆ ಪ್ರಮಾಣ ಮಾಡಲು ಬರಲು ಸಿದ್ಧ, ಈ ವಿಚಾರವಾಗಿ ಚೇತನ್ ರಾಜ್ ಕಣ್ಣೂರು ಮತ್ತು ಲ್ಯಾವಿಗೆರೆ ಸೋಮಶೇಖರ್ ತಾವೂ ಸಹ ಅಕ್ರಮ ಎಸೆಗಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಜಿ ಪಂ ಮಾಜಿ ಸದಸ್ಯ ಹೊನಗೋಡು ರತ್ನಾಕರ ಸವಾಲೆಸದರು.

ಅವರು ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಅಧಿಕಾರವು ಸಾರ್ವಜನಿಕರ ಸೇವೆ ಮಾಡಲು ದೊರೆತಿರುತ್ತದೆ. ಅಧಿಕಾರದ ಮದದಿಂದ ಸಾಗರ ಕ್ಷೇತ್ರದ ಶಾಸಕರ ಅನುಯಾಯಿಗಳು ಸಾರ್ವಜನಿಕರ ಹಾಗೂ ಬಿ ಜೆ ಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಕ್ಷೇತ್ರದ ಜನತೆ ಪಾಳೇಗಾರಿಕೆ ಮಾಡಲು ನಿಮ್ಮನ್ನು ಆಯ್ಕೆ ಮಾಡಿಲ್ಲ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮಾಡಲು ಕಳುಹಿಸಿದ್ದಾರೆ.

ಅಧಿಕಾರದ ದುರ್ಬಳಕೆಯಾದಾಗ ಅದನ್ನು ಸಾರ್ವಜನಿಕರು ನಮ್ಮ ಗಮನಕ್ಕೆ ತಂದಿದ್ದಾರೆ. ಅದನ್ನು ನಾವು ಸಾರ್ವಜನಿಕರ ಹಿತಕ್ಕಾಗಿ ತಪ್ಪುಗಳನ್ನು ಹೇಳಲೇ ಬೇಕಾಗುತ್ತದೆ. ಸಾರ್ವಜನಿಕ ವಾಗಿ ಕುಂದು ಕೊರತೆಗಳನ್ನು ನಾವು ಕೇಳುವುದು ಸಹಜವಾದುದು. ಜಿ.ಪಂ.ಮಾಜಿ ಸದಸ್ಯ ಸೋಮಶೇಖರ್ ಲ್ಯಾವಿಗೆರೆ ಇವರು ನನ್ನ ಮೇಲೆ ಅನಾವಶ್ಯಕ ಸುಳ್ಳು ಆರೋಪಗಳನ್ನು ಕಳೆದ 8 ವರ್ಷ ಗಳಿಂದ ಮಾಡುತ್ತಲೇ ಬಂದಿದ್ದಾರೆ ಅವರ ಬಳಿ ದಾಖಲೆಗಳಿದ್ದರೆ ಬಹಿರಂಗಪಡಿಸಲಿ, ಈ ವಿಚಾರವಾಗಿ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಸರ್ಕಾರದ ಕೆಲಸ ದುರುಪಯೋಗ ವಾಗುತ್ತಿದೆ ಎಂದಷ್ಟೇ ನಾನು ಆರೋಪಿಸಿದ್ದೇ ನೀವೇ ಮಾಡಿದ್ದೀರಿ ಎಂದು ನಿಮಗೆ ನೀವೇ ಏಕೆ ಅಂದು ಕೊಳ್ಳುತ್ತೀರಿ ಏಕೆ ಎಂದರು.

ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಆಚಾಪುರ ಶಾಂತಕುಮಾರ್, ರೇವಪ್ಪ ಹೊಸಕೊಪ್ಪ, ನಟರಾಜ್ ಗೇರ್‌ಬೀಸ್ ಇದ್ದರು.

 “ಶಾಸಕರ ಬಗ್ಗೆ ಯಾರೂ ಮಾತನಾಡಬಾರದು ಈ ಬಗ್ಗೆ ಹುಷಾರಗಿರಿ ಎಂಬ ಕೆಲವರ ಬೆದರಿಕೆ ಸರಿಯಲ್ಲ ತಪ್ಪನ್ನು ಅಕ್ರಮವನ್ನು ಹೇಳುವುದು ಬೇಡ ಎಂದರೆ ಹೇಗೆ ?”
-ರತ್ನಾಕರ ಹೊನಗೋಡು, ಜಿ.ಪಂ. ಮಾಜಿ ಸದಸ್ಯ,ಆನಂದಪುರ

(ವರದಿ ಎಸ್.ಡಿ.ಚಂದ್ರಶೇಖರ್ ಆನಂದಪುರ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು