ವಿಜಯ ಸಂಘರ್ಷ
ಭದ್ರಾವತಿ: ತಾಲೂಕಿನ ದೇವರ ನರಸೀಪುರದ ನಿವಾಸಿಗಳಾದ ಉಮೇಶ್ ಮತ್ತು ಗೌರಮ್ಮ ದಂಪತಿ ಪುತ್ರ ಜಯಚಂದ್ರ ಸುಮಾರು 9 ತಿಂಗಳ ಹಿಂದೆ ಮರಣ ಹೊಂದಿದ್ದು, ಅವರ ಜನ್ಮ ದಿನಾಚರಣೆಯ ಅಂಗವಾಗಿ ಇಂದು ಹೊಸ ಸಿದ್ದಾಪುರದ ಸುರಕ್ಷಾ ಜೀವನ ಸೇವಾ ಟ್ರಸ್ಟ್, ಸುರಕ್ಷಾ ಜೀವನ ವೃದ್ದಾಶ್ರಮ ಮತ್ತು ಅನಾಥಾಶ್ರಮದಲ್ಲಿ ವಿಶೇಷವಾಗಿ ಆಚರಿಸುವ ಮೂಲಕ ಗಮನ ಸೆಳೆಯಲಾಯಿತು.
ದಿವಂಗತರ ಅಣ್ಣ ಅಭಿಯವರು ತಮ್ಮನ ನೆನಪಿನಲ್ಲಿ ಆಶ್ರಮಕ್ಕೆ ದಿನಸಿ ಸಾಮಗ್ರಿ ವಿತರಿಸಿ ಹಿರಿಯರಿಗೆ ಸಿಹಿ ಹಂಚಿ ತಮ್ಮಲ್ಲಿರುವ ನೋವಿನಲ್ಲೂ ಹಿರಿಯ ಜೀವಿಗಳ ನಡುವೆ ಸಂಭ್ರಮ ಹಂಚಿಕೊಂಡರು.
ವೃದ್ದಾಶ್ರಮದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್, ಟ್ರಸ್ಟಿಗಳು ಹಾಗೂ ದಿವಂಗತ ಜಯಚಂದ್ರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.