ವಿಜಯ ಸಂಘರ್ಷ
ಭದ್ರಾವತಿ: ಎಸ್ ಬಿಐ ಬ್ಯಾಂಕ್ ನ್ಯೂಟೌನ್ ಶಾಖೆಯಲ್ಲಿಂದು ಪಿಂಚಿಣಿ ದಾರರ ಸಭೆ ಆಯೋಜಿಸಲಾಗಿತ್ತು.
ಸಭೆಯಲ್ಲಿ ಪಿಂಚಿಣಿದಾರರಿಗೆ ನಿವೇಶನ, ಮನೆ ಕಟ್ಟಲು ಸಾಲ ಸೌಲಭ್ಯಗಳ ಬಗ್ಗೆ ಎಸ್ ಬಿಐ ಲೈಫ್ ಇನ್ಶುರೆನ್ಸ್ ಬಗ್ಗೆ ಮಾಹಿತಿ ನೀಡಲಾಯಿತು. ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಯು.ಎಸ್. ಪ್ರಶಾಂತ್, ಫೀಲ್ಡ್ ಆಫೀಸರ್ ಸುರೇಶ್ ನಾಯ್ಕ, ಲೈಫ್ ಇನ್ಶುರೆನ್ಸ್ ನ ಶಿವರಾಜ್ ಸಾಲ ವಿಭಾಗದ ರವಿಕುಮಾರ್, ವಿನೋದ್ ಪೂಜಾರಿ ಬ್ಯಾಂಕಿನ ಇತರೆ ಸಿಬ್ಬಂದಿಗಳು ಭಾಗವಹಿಸಿದ್ದರು.
ಇದೆ ಸಂದರ್ಭದಲ್ಲಿ ಪಿಂಚಿಣಿದಾರರಿಗೆ ಪ್ರತ್ಯೇಕ ಕೌಂಟರ್ ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು .