ವಿಜಯ ಸಂಘರ್ಷ
ಭದ್ರಾವತಿ: ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ಭದ್ರಾವತಿ ಉಪವಿಭಾಗದ ಪೊಲೀಸರು ನಗರದಲ್ಲಿ ವಾಹನ ಸವಾರರಿಗೆ ಅರಿವು ಮೂಡಿಸಿದರು.
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಸಮೀಪದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ವಾಹನ ಸವಾರರಿಗೆ ತಿಳುವಳಿಕೆ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ವಾಹನ ಸವಾರರಿಗೆ ಅರ್ಧ ಹೆಲ್ಮೇಟ್ ಧರಿಸದಂತೆ ಸೂಚನೆ ನೀಡಿದ್ದರೂ ಸಹ ಬಳಸುವುದು ಸರಿಯಲ್ಲ. ನಿಯಮ ಪಾಲನೆ ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಹೆಲ್ಮೇಟ್ ವಿಚಾರ ಕಾನೂನು ಕ್ರಮ ಮಾತ್ರವಲ್ಲ. ವಾಹನ ಸವಾರರ ಜವಾಬ್ದಾರಿ. ದಂಡ ಪಾವತಿಯಿಂದ ಸಮಸ್ಯೆ ಸಂಪೂರ್ಣ ನಿವಾರಣೆ ಅಸಾಧ್ಯ. ಜನರು ಸುರಕ್ಷತೆಯನ್ನು ತಮ್ಮ ಜವಾಬ್ದಾರಿ ಎಂದು ಭಾವಿಸಿದಾಗ ಮಾತ್ರ ಸುರಕ್ಷತೆ ಸಾಧ್ಯ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ ಕೆ.ಆರ್.ನಾಗರಾಜ್, ಸಿಪಿಐ ಶ್ರೀಶೈಲ ಕುಮಾರ್, ಪಿಎಸ್ಐಗಳಾದ ಶಾಂತಲಾ, ರಮೇಶ್, ಶರಣಪ್ಪ ಹಂಡ್ರಾಗಲ್, ಎಎಸ್ಐ ಎಂ.ರಾಜಪ್ಪ ಸೇರಿದಂತೆ ಹಲವು ಸಿಬ್ಬಂದಿ ಹಾಜರಿದ್ದರು.