ವಿಜಯ ಸಂಘರ್ಷ
ಭದ್ರಾವತಿ: ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ನ್ಯೂಟೌನ್ ಶಾಖೆಯ ವತಿಯಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾಗೆಕೊಡು ಮಗ್ಗೆ ಜಯನಗರ ಗ್ರಾಮದಲ್ಲಿ ನಡೆಯಿತು.
ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಯು.ಎಸ್. ಪ್ರಶಾಂತ್ ಕುಮಾರ್, ಸಹಾಯಕ ವ್ಯವಸ್ಥಾಪಕ ಸುರೇಶ್ ನಾಯಕ್, ರಿಜಿನಲ್ ಕಚೇರಿಯ ಅನಂತ್ ಕುಮಾರ್ ಹಾಗೂ ಬಾಲಾಜಿ ಕೇಂದ್ರ ಸರ್ಕಾರದ ಯೋಜನೆ ವಿವರಿಸಿದರು. ಇದೆ ಸಂದರ್ಭದಲ್ಲಿ ಹೆಡ್ ಆರಂ ಗಾರ್ಡ್ ವಿನೋದ್ ಪೂಜಾರಿ ಇವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳ ಹಾಗೂ ಉಜ್ವಲ ಎಲ್ಪಿಜಿ ಗ್ಯಾಸ್ ಕುರಿತು ಸ್ವಾತಿ ಗ್ಯಾಸ್ ಏಜೆನ್ಸಿಯ ಮಾಲೀಕ ನರೇಂದ್ರ ಕಾಮತ್ ಉಜ್ವಲ ಗ್ಯಾಸ್ ಬಗ್ಗೆ ಮಾಹಿತಿ ನೀಡಿದರು.