ವಿಜಯ ಸಂಘರ್ಷ
ಸಾಗರ (ಆನಂದಪುರ): ಆಧುನಿಕ ಬದುಕಿನ ಜಂಜಾಟದ ನಡುವೆ ಸಮಯ ಮಾಡಿಕೊಂಡು ಮಠ-ಮಂದಿರಗಳಲ್ಲಿ ನಡೆಯುವ ಧಾರ್ಮಿಕ ಕೈಂಕರ್ಯದಲ್ಲಿ ಭಕ್ತರು ಹೆಚ್ಚು-ಹೆಚ್ಚಾಗಿ ಪಾಲ್ಗೊಳ್ಳುವಂತಾಗಬೇಕು. ಮಕರ ಸಂಕ್ರಾoತಿಯ ಪ್ರಯುಕ್ತ ಜ.14ರಂದು ಕೋಣಂದೂರಿನ ಶಿವಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆಯ ಲಿರುವ ಧಾರ್ಮಿಕ ಸಭೆಯಲ್ಲಿ ಸದ್ಭಕ್ತರು ಆಗಮಿಸಬೇಕು ಎಂದು ಮಠದ ಪೀಠಾಧಿಪತಿ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರು ಆಹ್ವಾನಿಸಿದರು.
ಅವರು ಆನಂದಪುರದಲ್ಲಿ ಭಕ್ತರ ಮನೆಗಳಿಗೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸುವ ಸಂದರ್ಭದಲ್ಲಿ ಮಾತನಾಡಿ ಜ.14ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಕೋಣಂದೂರಿನಲ್ಲಿ ಮುರುಘಾಮಠದ ಜಗದ್ಗುರುಡಾ.ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿ ಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಧರ್ಮಸಭೆ ಯನ್ನು ಆಯೋಜಿಸಿದ್ದು ಷ.ಬ್ರ.ಡಾ.ಮರುಳ ಸಿದ್ಧಪಂದಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ವೀರಾಪುರ, ರಟ್ಟೇಹಳ್ಳಿಯ ಶ.ಬ್ರ.ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಮಳಲಿಮಠದ ಷ.ಬ್ರ.ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಮೂಲೆಗದ್ದೆಯ ಅಭಿನವ ಚನ್ನಬಸವ ಸ್ವಾಮಿಗಳು ಸೇರಿದಂತೆ ಅನೇಕ ಮಠಾಧಿಪತಿಗಳು ಉಪಸ್ಥಿತರಿರಲಿದ್ದು ಉದ್ಘಾಟನೆಯನ್ನು ಸಂಸದ ಬಿ.ವೈ. ರಾಘವೇಂದ್ರ ನೆರವೇರಿಸಲಿದ್ದಾರೆ.
ಶಾಸಕ ಆರಗ ಜ್ಞಾನೇಂದ್ರ ಶ್ರೀ ಶಿವಲಿಂಗೇಶ್ವರ ಪಂಚಾoಗ ವನ್ನು ಬಿಡುಗಡೆಗೊಳಿಸಲಿದ್ದು 2021ರಿಂದ 2024 ನೇ ಸಾಲಿನ ವರೆಗಿನ ಶ್ರೀ ಶಿವಲಿಂಗಶ್ರೀ ಪ್ರಶಸ್ತಿಯನ್ನು ಸಾಮಾಜಿಕ ಕಾಳಜಿ ಮೆರೆಯುತ್ತಿರುವ ಡಾ.ಗುರುರಾಜ್, ದಿನೇಶ್ ತಟ್ಟಿಕೊಪ್ಪ, ಸೋಮಶೇಖರ ಈರಪ್ಪ ಹಿರೇಬಿದರಿ, ಶಿವನಗೌಡ್ರು ಇವರುಗಳಿಗೆ ಪ್ರದಾನ ಮಾಡಲಾಗುತ್ತದೆ.ಕಾರ್ಯಕ್ರಮಕ್ಕೆ ಸದ್ಭಕ್ತರೆಲ್ಲಾ ಪಾಲ್ಗೊಳ್ಳಬೇಕೆಂದು ಶ್ರೀಗಳು ಕೋರಿದರು.
Tags
ಆನಂದಪುರ ಧರ್ಮಸಭೆ