ವಿಜಯ ಸಂಘರ್ಷ
ಶಿವಮೊಗ್ಗ.: ಸ್ವಾಮಿ ವಿವೇಕಾನಂದರು ವಿಶ್ವಚೇತನ. ಅವರ ತತ್ವಾದರ್ಶಗಳು ನಮಗೆ ಮಾದರಿ ಇಂದಿನ ಯುವ ಸಮುದಾಯವನ್ನು ಸಶಕ್ತವಾಗಿಸು ವುದು ಮತ್ತು ನಮ್ಮ ಸಂಸ್ಕೃತಿ, ಪರಂಪರೆ ಗಳನ್ನು ಅರಿಯುವಂತೆ ಮಾಡುವುದು ಅವರ ಉದ್ದೇಶವಾಗಿತ್ತು ಎಂದು ಚೇಂಬರ್ ಆಪ್ ಕಾಮರ್ಸ್ ಅಡ್ವಾನ್ಸ್ ಸ್ಕಿಲ್ ಅಕಾಡೆಮಿಯ ಸಿ.ಇ.ಓ ಸವಿತಾ ಮಾಧವ ಹೇಳಿದರು.
ಅವರು ಶುಕ್ರವಾರ ಸ್ವಾಮಿ ವಿವೇಕಾನಂದರ 161 ನೇ ಜನ್ಮ ದಿನಾಚರಣೆ ಮತ್ತು ರಾಷ್ಟಿಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದರ ಹೆಸರು ಕೇಳಿದೊಡನೆ ನಮ್ಮೊಳಗೆ ಶಕ್ತಿ, ಆತ್ಮ ವಿಶ್ವಾಸ ತುಂಬುತ್ತದೆ. ತ್ಯಾಗ, ಸೇವೆ, ಆಧ್ಯಾತ್ಮ ದೃಷ್ಟಿ ಅವರ ಜೀವನದ ಮೂಲತತ್ವವಾಗಿತ್ತು. ಭಾರತದ ಕೀರ್ತಿಯನ್ನು ವಿಶ್ವದೆತ್ತರಕ್ಕೆ ಏರಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಆದರ್ಶ ವನ್ನು ನಮ್ಮ ವ್ಯಕ್ತಿತ್ವವನ್ನು ಮೈಗೂಡಿಸಿ ಕೊಂಡಾಗಲೇ ಇಂತಹ ಕಾರ್ಯಕ್ರಮಗಳನ್ನು ಸಾರ್ಥಕತೆ ಪಡಯುತ್ತವೆ ಎಂದರು.
ಜಿಲ್ಲಾ ಮುಖ್ಯ ಆಯುಕ್ತ ಹೆಚ್.ಡಿ.ರಮೇಶ ಶಾಸ್ತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುವಕರು ಆದರ್ಶಗಳನ್ನು ರೂಡಿಸಿಕೊಳ್ಳುವ ಅವಶ್ಯಕತೆಯಿದೆ. ತಮ್ಮ ಮುಂದಿರುವ ಭ್ರಮೆಯ ಜಗತ್ತಿನಿಂದ ವಾಸ್ತವ ಪ್ರಜ್ಞೆಗೆ ಮರಳಬೇಕಾಗಿದೆ. ನಮ್ಮ ದೇಶದ ನಾಡಿನ ಮಹಾ ಪುರುಷರ ಜೀವನ ಸಿದ್ಧಾಂತಗಳನ್ನು ಅರ್ಥೈಸಿಕೊಂಡು ಬಾಳಬೇಕಾಗಿದೆ. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಬದುಕು ಯುವ ಜನತೆ ಮಾರ್ಗದರ್ಶಕವಾಗಲಿ ಎಂದರು.
ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ ಸ್ವಾಗತಿಸಿ. ಜಿಲ್ಲಾ ಸ್ಥಾನಿಕ ಆಯುಕ್ತ ವಂದಿಸಿದರು. ಜಿ.ವಿಜಯಕುಮಾರ ನಿರೂಪಿಸಿ ಎ.ಎಸ್.ಒ.ಸಿ ಭಾರತಿ ಡಾಯಸ ರವರು ಕಾರ್ಯಕ್ರಮ ವಂದಿಸಿದರು.
ಸಹ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಡಿಟಿಸಿ ಶಿವಶಂಕರ್, ಹೆಚ್.ಕ್ಯೂ.ಸಿ ಕೆ.ರವಿ, ಎಲ್.ಎ.ಕಾರ್ಯದರ್ಶಿ ಎ.ವಿ. ರಾಜೇಶ, ಸಿ.ಎಂ.ಪರಮೇಶ್ವರ್, ಮಲ್ಲಿಕಾರ್ಜುನ ಕಾನೂರು, ಚಂದ್ರಶೇಖರಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Tags:
ವಿವೇಕಾನಂದರ ಜನ್ಮ ದಿನ