ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ: ಕೋಗಲೂರು ತಿಪ್ಪೇಸ್ವಾಮಿ

ವಿಜಯ ಸಂಘರ್ಷ
ಭದ್ರಾವತಿ: ಸ್ವಾಮಿ ವಿವೇಕಾನಂದರು ಭಾರತದ ಕೀರ್ತಿ ಪತಾಕೆಯನ್ನು ವಿಶ್ವಾದ್ಯಂತ ಬೆಳಗಿ ಏಳಿ ಎದ್ದೇಳಿ ಗುರಿ ಮುಟ್ಟುವ ವರೆಗೂ ನಿಲ್ಲದಿರಿ ಎಂದು ಯುವ ಜನತೆಗೆ ಸಂದೇಶ ಕೊಟ್ಟು ಯುವ ಶಕ್ತಿ ಹಾಳಾಗದಂತೆ ಎಚ್ಚರ ವಹಿಸಲು ಕರೆ ಕೊಟ್ಟಿದ್ದರು. ಇಂದು ಯುವ ಜನಾಂಗ ದುಶ್ಚಟ ಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಎಂದು ಯರೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.

ಅವರು ಶುಕ್ರವಾರ ತಾಲ್ಲೂಕಿನ ಯರೇಹಳ್ಳಿ ಶಾಲಾ ಆವರಣದಲ್ಲಿ ನಡೆದ ವಿಶ್ವ ಯುವ ದಿನಾಚರಣೆಯ ಸಂದರ್ಭ ದಲ್ಲಿ ಮಾತಾಡುತ್ತ, ಮಹಾನ್ ವ್ಯಕ್ತಿ ಗಳ ಆದರ್ಶ ಪಾಲಿಸಿ ಯುವ ಜನಾಂಗ ಸರಿ ದಾರಿಯಲ್ಲಿ ಸಾಗಿದರೆ ದೇಶದ ಭವಿಷ್ಯ ಉಜ್ವಲ ವಾದೀತು ಎಂದು ಅಭಿಪ್ರಾಯ ಪಟ್ಟರು.

ಮಕ್ಕಳು ಗ್ರಂಥಾಲಯದಲ್ಲಿ ಮಹಾನ್ ವ್ಯಕ್ತಿ ಗಳ ಪುಸ್ತಕ ಓದಿ ಆದರ್ಶ ಅಳವಡಿಸಿ ಕೊಳ್ಳಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಯುವಕರು, ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಾಣಿಶ್ರೀ, ಸುಮಾ, ಶಂಕರ್, ವಸಂತಮ್ಮ, ಜ್ಯೋತಿ ವೀಣಾ ಶಿಕ್ಷಕಿಯರು, ಅಂಗನವಾಡಿ ಪುಟ್ಟಕ್ಕ, ಜಯಲಕ್ಷ್ಮಿ, ಮಂಜುಳಮ್ಮ ಮೊದಲಾದವರು ಭಾಗವಹಿಸಿದ್ದರು.

ತೇಜು ಸಂಗಡಿಗರು ಪ್ರಾರ್ಥಿಸಿ, ದೀಪಿಕಾ ಸ್ವಾಗತಿಸಿದರೆ, ಸ್ವಪ್ನ ನಿರೂಪಿಸಿ, ತೇಜು ವಂದಿಸಿದರು.

(ವರದಿ ಅರುಣ್ ಪವನ್ ಯರೇಹಳ್ಳಿ.)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು