ಶತಮಾನೋತ್ಸವ ಪ್ರಯುಕ್ತ ಇನ್ನರ್‌ವ್ಹೀಲ್‌ನಿಂದ ಸೇವೆ

ವಿಜಯ ಸಂಘರ್ಷ
ಶಿವಮೊಗ್ಗ: ವಿಶ್ವದ ಎಲ್ಲೆಡೆಯು ಇನ್ನರ್‌ವ್ಹೀಲ್ ವತಿಯಿಂದ ಸೇವಾ ಕಾರ್ಯಗಳು ನಡೆಯುತ್ತಿದ್ದು, ಮನುಕುಲದ ಸೇವೆಯು ಶ್ರೇಷ್ಠ ಕಾರ್ಯ ಎಂದು ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷೆ ಶ್ವೇತಾ ಆಶಿತ್ ಹೇಳಿದರು.

ನಗರದ ನಾಗೇಂದ್ರ ಬಡಾವಣೆಯ ರಾಜುವೇಲು ಅವರಿಗೆ ಇನ್ನರ್‌ವ್ಹೀಲ್ ಸಂಸ್ಥೆ ವತಿಯಿಂದ ವೀಲ್‌ಚೇರ್ ಅನ್ನು ಕೊಡುಗೆಯಾಗಿ ನೀಡಿ ಮಾತನಾಡಿ, ಇನ್ನರ್‌ವ್ಹೀಲ್ ಸಂಸ್ಥೆಯು 100 ವರ್ಷ ಪೂರೈಸಿದ್ದು, ಇಂತಹ ವಿಶೇಷ ಸಂದರ್ಭದಲ್ಲಿ ವಿಶ್ವಾದ್ಯಂತ ಇರುವ ಕ್ಲಬ್‌ಗಳು ವಿಶೇಷ ಯೋಜನೆಗಳನ್ನು ರೂಪಿಸಿಕೊಂಡು ಸೇವಾ ಕಾರ್ಯ ನಡೆಸುತ್ತಿವೆ ಎಂದು ತಿಳಿಸಿದರು.

ಇನ್ನರವ್ಹೀಲ್ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯ ನಡೆಸುತ್ತಿದ್ದು, ಆರ್ಥಿಕ ನೆರವು ಅಗತ್ಯ ಇರುವವರಿಗೆ ನೆರವು ಒದಗಿಸುವ ಸಾರ್ಥಕ ಕೆಲಸ ಮಾಡುತ್ತಿದೆ. ಶಿವಮೊಗ್ಗ ಕ್ಲಬ್ ವತಿಯಿಂದ ಶತಮಾನೋತ್ಸವ ಪ್ರಯುಕ್ತ ಈಗಾಗಲೇ ಅನೇಕ ಸೇವಾಕಾರ್ಯಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ರೋಟರಿ ಸಹಾಯಕ ಮಾಜಿ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ನಾವು ಮಾಡುವ ಸೇವೆಯು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಇನ್ನರ್‌ವ್ಹೀಲ್ ಸಂಸ್ಥೆಯು ಉತ್ತಮ ಕಾರ್ಯಗಳನ್ನು ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವಾ ಕಾರ್ಯಗಳನ್ನು ನಡೆಸುವಂತಾಗಲಿ ಎಂದು ಆಶಿಸಿದರು.

ಇನ್ನರ್‌ವ್ಹೀಲ್ ಜಿಲ್ಲಾ ಕಾರ್ಯದರ್ಶಿ ಶಬರಿ ಕಡಿದಾಳ್ ಮಾತನಾಡಿ, ಮಹಿಳಾ ಸಬಲೀಕರಣ ಹಾಗೂ ಆರ್ಥಿಕ ಅಶಕ್ತರಿಗೆ ನೆರವು ಒದಗಿಸುವ ಆಶಯದಿಂದ ಸಂಸ್ಥೆಯು ಕೆಲಸ ಮಾಡುತ್ತಿದ್ದು, ಸಾವಿರಾರು ಜನರಿಗೆ ಸೇವೆ ಸಲ್ಲಿಸಿದೆ ಎಂದು ತಿಳಿಸಿದರು.

ಇನ್ನರ್‌ವ್ಹೀಲ್ ಮಾಜಿ ಚೇರ‍್ಮನ್ ಬಿಂದು ವಿಜಯಕುಮಾರ್, ವಿಜಯ ರಾಯ್ಕರ್, ಮಧು, ವಿನೋದ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು