ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಿಗೆ ಅಭಿನಂದಿಸಿದ ಜಿಲ್ಲಾ ಸಂಘ

ವಿಜಯ ಸಂಘರ್ಷ
ಶಿಕಾರಿಪುರ: ತಮಿಳುನಾಡಿನ ಈ ರೋಡ್ ನಲ್ಲಿ ನಡೆಯುತ್ತಿರುವ ದಕ್ಷಿಣ ಭಾರತದ ಪುರುಷರ ವಿಭಾಗದ ನ್ಯಾಷನಲ್ ಚಾಂಪಿಯನ್ ಶಿಫ್ ಸ್ಪರ್ಧೆಗಳಲ್ಲಿ ಕರ್ನಾಟಕದ ಪ್ರತಿಭಾ ಕುಸ್ತಿಪಟ್ಟುಗಳನ್ನು ಗುರುತಿಸಿ ಕುಸ್ತಿಪಟುಗಳಿಗೆ ವಿಜಯಮಾಲೆ ಹಾಗೂ ಸಮಗ್ರ ಕುಸ್ತಿ ಚಾಂಪಿಯನ್ ಲಭಿಸಲು ಪ್ರೋತ್ಸಾಹಕ ಕಾರಣಕರ್ತರಾದ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ
ಬಿ.ಗುಣರಂಜನ್ ಶೆಟ್ಟಿ ರವರಿಗೆ ಶಿವಮೊಗ್ಗ ಜಿಲ್ಲಾ ಕುಸ್ತಿ ಸಂಘದ ಜಿಲ್ಲಾ ಅಧ್ಯಕ್ಷ ರಘುವೀರ್ ಸಿಂಗ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ ಅಭಿನಂದನೆ ಸಲ್ಲಿಸಿದರು.

ಅಭಿನಂದನೆ ಸಲ್ಲಿಸಿ ಮಾತನಾಡಿದ ಹುಲಿಗಿ ಕೃಷ್ಣ, ಕರ್ನಾಟಕದ ಕುಸ್ತಿಪಟುಗಳು ರಾಜ್ಯಕ್ಕೆ 23 ಚಿನ್ನ, ನಾಲ್ಕು ಬೆಳ್ಳಿ, ಮೂರು ಕಂಚಿನ ಪದಕ ಸೇರಿದಂತೆ ಪ್ರಿ ಸೈಲ್ ನಲ್ಲಿ ಎಂಟು ಚಿನ್ನ, ಎರಡು ಬೆಳ್ಳಿ, ಗ್ರೀಕೋ ರೋಮನ್ ವಿಭಾಗದಲ್ಲಿ ಒಂಬತ್ತು ಚಿನ್ನ, ಒಂದು ಬೆಳ್ಳಿ ಪದಕ ಪಡೆದಿದ್ದು , ಮಹಿಳಾ ಪ್ರೀಸೇಲ್ ನಲ್ಲಿ ಆರು ಚಿನ್ನ ಒಂದು ಬೆಳ್ಳಿ ಮೂರು ಕಂಚಿನ ಪದಕವನ್ನು ಪಡೆಯುವ ಮೂಲಕ ಕರ್ನಾಟಕದ ಕುಸ್ತಿಪಟುಗಳು ಕೀರ್ತಿ ಮೆರೆದಿದ್ದಾರೆ.

ಸಮಗ್ರ ಕುಸ್ತಿಪಟ್ಟುಗಳ ಪ್ರೋತ್ಸಾಹಕ್ಕೆ ಬೆನ್ನೆಲುಬಾಗಿ ನಿಂತಿರುವ ಬಿ.ಗುಣರಂಜನ್ ಶೆಟ್ಟಿ ರವರ ಕಾರ್ಯ ಕ್ಷಮತೆಗೆ ನಾಡಿನ ಕುಸ್ತಿಪಟುಗಳು ಹೆಮ್ಮೆ ಪಡುವಂತಾಗಿದೆ. ಬಡವರ ದೀನ ದಲಿತರ ಪ್ರತಿಭೆಗಳು ಸೇರಿದಂತೆ ಎಲ್ಲಾ ವರ್ಗದ ನಿಷ್ಠಾವಂತ ಪ್ರತಿಭೆಗಳಿಗೆ ಸೂಕ್ತ ಸ್ಥಾನಮಾನ ಗೌರವ ಹಾಗೂ ತಮ್ಮ ಪ್ರತಿಭೆಗೆ ಅವಕಾಶ ವೇದಿಕೆ ನಿರ್ಮಿಸುವುದೇ ನನ್ನ ಗುರಿ ಎಂದಿರುವ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಿಗೆ ಜಿಲ್ಲೆಯ ಸಮಗ್ರ ಕುಸ್ತಿಪಟುಗಳ ಪರವಾಗಿ ಅಭಿನಂದನೆ ಸಲ್ಲಿಸಿದ್ದೇವೆ ಎಂದರು.

ಸಮಗ್ರ ಕುಸ್ತಿ ಕೂಟದ ಪ್ರಶಸ್ತಿ ಪಡೆದ ಎಲ್ಲಾ ಕುಸ್ತಿಪಟುಗಳಿಗೆ ಅಭಿನಂದಿಸಿದ ಭಾರತ ಕುಸ್ತಿ ಸಂಘದ ಕಾರ್ಯದರ್ಶಿ ಪಿ.ಎನ್.ಪ್ರಸಾದ್, ಕುಸ್ತಿ ಸಂಘದ ಕಾರ್ಯದರ್ಶಿ ಜಿ.ಶ್ರೀನಿವಾಸ್, ಲೋಗನಾದನ್, ಪ್ರಸಾದ್ ಶೆಟ್ಟಿ, ಕೆ.ಕುಮಾರ್ ಹಾಗೂ ತಾಂತ್ರಿಕ ಸಮಿತಿಯ ಮುಖ್ಯಸ್ಥ ವಿನೋದ್ ಕುಮಾರ್ ರವರಿಗೂ ಕೂಡ ಸಂಘದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು