ಸಂಘ ಸಂಸ್ಥೆಗಳಿಂದ ಕಲೆ - ಕಲಾವಿದರ ಪ್ರೋತ್ಸಾಹ : ಸುಷ್ಮಾರಾವ್

ವಿಜಯ ಸಂಘರ್ಷ
ಶಿಕಾರಿಪುರ: ಪಟ್ಟಣದ ಉಳ್ಳಿ ಫೌಂಡೇಶನ್ ಹಾಗೂ ಕದಂಬ ಫ್ರೆಂಡ್ಸ್ ಕ್ಲಬ್ ಸಂಸ್ಥೆಗಳ ನೇತೃತ್ವದಲ್ಲಿ ಕಲಾವಿದರನ್ನು ಪ್ರೋತ್ಸಾಹಿಸುವ ಸಲುವಾಗಿ ವಿನೂತನ ರೀತಿಯಲ್ಲಿ ಹೊಸ ವರ್ಷಾಚರಣೆಗೆ ಸ್ವಾಗತಿಸುತ್ತಿ ರುವುದು ಸಂತಸ ತಂದಿದೆ ಎಂದು ಕಿರುತೆರೆಯ ನಟಿ ಸುಷ್ಮಾರಾವ್ ಹೇಳಿದರು.

ಪಟ್ಟಣದ ನರಸಪ್ಪ ಸ್ಮಾರಕ ಬಯಲು ರಂಗ ಮಂದಿರದಲ್ಲಿ ಕಾಂಗ್ರೆಸ್ ಮುಖಂಡ ಪುರಸಭಾ ಸದಸ್ಯ ಉಳ್ಳಿ ದರ್ಶನ್ ರವರ ಉಳ್ಳಿ ಫೌಂಡೇಶನ್ ಹಾಗೂ ಕದಂಬ ಫ್ರೆಂಡ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಉಳ್ಳಿ ಫೌಂಡೇಶನ್ ಸಂಸ್ಥೆಯ ಉಳ್ಳಿ ದರ್ಶನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುವ ಪೀಳಿಗೆ ಹೊಸ ವರ್ಷಾಚರಣೆಯ ನೆಪದಲ್ಲಿ ವಿದೇಶಿ ವ್ಯಾಮೋಹಕ್ಕೆ ಬಲಿಯಾಗಿ ಮೋಜು ಮಸ್ತಿ ಮಾಡುವ ಮೂಲಕ ಆಚರಣೆ ಮಾಡುವುದೇ ಹೊಸ ವರ್ಷ ಎಂದುಕೊಂಡಿದ್ದಾರೆ. ದುಷ್ಟತ್ವಕ್ಕೆ ಗಳಿಗೆ ಬಲಿಯಾಗದೆ ಹೊಸ ವರ್ಷಾಚರಣೆಯನ್ನು ಸಂತೋಷದಿಂದ ಕಲಾವಿದರಿಗೆ ಪ್ರೋತ್ಸಾಹ ಮಾಡುವ ಮೂಲಕ, ನೊಂದ ವರಿಗೆ ಸಹಾಯ ಹಸ್ತ ನೀಡುವ ಮೂಲಕ ಸಂಭ್ರಮಾ ಚರಣೆ ಮಾಡೋಣ ಎಂದು ಕರೆ ನೀಡಿದರು.  

ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಭಂಡಾರಿ ಮಾಲತೇಶ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಮತ್ತಿತರರು ವಿನೂತನ ಕಾರ್ಯಕ್ರಮ ಆಯೋಜಿಸಿದ್ದ ಉಳ್ಳಿ ಫೌಂಡೇಶನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ತಾಲೂಕಿನ ಜನತೆಗೆ ಹೊಸ ವರ್ಷದ ಶುಭಾಶಯ ತಿಳಿಸಿದರು.
   
ಹೊಸ ವರ್ಷ ಸಂಭ್ರಮ ಸವಿಯಲು ತಾಲೂಕಿನ ಸುತ್ತ ಮುತ್ತಲಿನ ಗ್ರಾಮ ಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನತೆಗೆ ಮಡೆನೂರು ಮನು ತಂಡದ ವತಿಯಿಂದ ಹಾಸ್ಯ, ನೃತ್ಯ, ಅರ್ಥಪೂರ್ಣ ಕನ್ನಡದ ಚಿತ್ರಗೀತೆಗಳು ಜನರ ಸಂಭ್ರಮ ಹೆಚ್ಚು ಮಾಡಿತ್ತು.

ಜೂನಿಯರ್ ಉಪೇಂದ್ರ ಜೂನಿಯರ್ ಯಶ್ ಮತ್ತು ಕಾಮಿಡಿ ಕಿಲಾಡಿಗಳ ಹಾಸ್ಯ ನಟರೊಡನೆ ಸೆಲ್ಫಿ ತೆಗೆಸಲು ಯುವಕರು ಯುವತಿಯರು ಮಹಿಳೆಯರು ಮುಗಿಬಿದ್ದಿದ್ದರು.
 
ವೇದಿಕೆಯಲ್ಲಿ ಮುಖಂಡರಾದ ಬಡಗಿ ಪಾಲಾಕ್ಷಪ್ಪ, ಗೋಣಿ ಸಂದೀಪ್, ಕಾಂಗ್ರೆಸ್ ಮುಖಂಡ ಜಕ್ಕಿನಕೊಪ್ಪ ಶ್ರೀಕಾಂತ್, ಬಡಗಿ ಪ್ರದೀಪ್, ಗೋಣಿ ರಾಮು, ಜಯ ಕರ್ನಾಟಕ ಜನಪರ ವೇದಿಕೆಯ ಹುಲಿಗಿಕೃಷ್ಣ, ಜಯಪ್ಪ, ಸಾನ ಮಂಜಪ್ಪ ಉಪಸ್ಥಿತರಿದ್ದರು.

(ವರದಿ ಹುಲಿಗಿ ಕೃಷ್ಣ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು