ಪೆನ್ಸಿಲ್ ಲೆಡ್ ಮೇಲೆ ರಾಮಮಂದಿರ: ಹಲವು ಕಲಾಕೃತಿಗಳ ಕಲಾವಿದನ ಕೈಚಳಕ


ಆರ್.ವಿ. ಕೃಷ್ಣ-ಭದ್ರಾವತಿ:

ಗುರುಗಳ ಸಹಾಯವಿಲ್ಲದೆ ಸ್ವಪ್ರಯತ್ನದಿಂದ ಸತತ ಸಾಧನೆ ಮಾಡಿ ಯಶಸು ಗಳಿಸಬಹುದು ಎಂಬುದನ್ನು ಸಾಭೀತು ಪಡಿಸುವ ಮೂಲಕ ಗಮನ ಸೆಳೆದಿರುವ ಸಾಧಕ ಎಸ್. ವರುಣ್‌ ಕುಮಾರ್ ಈತ ಒಂದೇ ಒಂದು ಬೆಂಕಿ ಕಡ್ಡಿಯಲ್ಲಿ ಕೇವಲ ಒಂದೇ ದಿನದಲ್ಲಿ ಅತ್ಯಂತ ಸಣ್ಣ ಪ್ರಮಾಣದ ಲಂಡನ್ ಬ್ರಿಡ್ಜ್ ತಯಾರಿಸುವ ಈ ಸಾಧಕನಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಮೂಡಿರುವುದು ವಿಶೇಷ.

300ಕ್ಕೂ ಅಧಿಕ ಕಲಾಕೃತಿ ರಚನೆ: ಹಳೇನಗರದ ಎನ್‌ಎಸ್‌ಟಿ ರಸ್ತೆಯ ನಿವಾಸಿ ಸಿದ್ದರಾಜು ಹಾಗೂ ಗಾಯಿತ್ರಿ ದಂಪತಿಗಳ ಪುತ್ರ ಎಸ್.ವರುಣ್ ಕುಮಾರ್. ನ್ಯೂಟೌನ್ ಸರಕಾರಿ ಸರ್.ಎಂ.ವಿಶ್ವೇಶ್ವರಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪದವಿ ಪಡೆದು ಬಳಿಕ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿ ರಜಾ ದಿನಗಳಂದು ಕುಸುರಿ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ. ತನ್ನ ವಿದ್ಯಾಭ್ಯಾಸ ಹಾಗೂ ಕಲೆಗೆ ಗುರುವಿಲ್ಲದ ಸಾಧಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಗೆ ಭಾಜನರಾದ ಭದ್ರಾವತಿಯ
ಎಸ್. ವರುಣ್ ಕುಮಾರ್ ಪ್ರೋತ್ಸಾಹ ನೀಡಿದ ತಂದೆ-ತಾಯಿಯನ್ನು ಸ್ಮರಿಸುವ ಈ ಸಾಧಕ, ಮತ್ತಷ್ಟು ಸಾಧನೆಗೆ ಪ್ರಯತ್ನಗಳನ್ನು ಆರಂಭಿಸಿದ್ದಾರೆ.

ಆಸಕ್ತಿ ಮೂಡಿದ ಬಗೆ: ಒಂದು ಖಾಸಗಿ ವಾಹಿನಿಯಲ್ಲಿ ಪ್ರದರ್ಶನವಾಗುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಒಬ್ಬರು ಕುಸುರಿ ಕಲೆಯನ್ನು ಪ್ರದರ್ಶಿಸಿದ್ದನ್ನು ಕಂಡ ವರುಣ್, ತಾನೇಕೆ ಕುಸುರಿ ಕೆಲಸದಲ್ಲಿ ಸಾಧನೆ ಮಾಡಬಾರದೆಂದು ಚಿಂತಿಸಿದರು. ನಂತರ ಸತತ ಪ್ರಯತ್ನ ದಿಂದ 300 ಕ್ಕೂ ಅಧಿಕ ಬಗೆಯ, ವೈವಿಧ್ಯತೆ ತೋರುವ ಕಲಾಕೃತಿ ಗಳನ್ನು ರಚಿಸಿ ಒಂದೇ ಬೆಂಕಿಕಡ್ಡಿಯಲ್ಲಿ ತಯಾರಿಸಿದ ಸ್ಮಾಲೆಸ್ಟ್ ಲಂಡನ್ ಬ್ರಿಡ್ಜ್. ನಿರ್ಮಿಸಿದ್ದಾರೆ.

ಬಿಸಾಡುವ ವಸ್ತುಗಳಿಗೂ ಜೀವ ನೀಡುವ ಸಾಧಕ:

ಸೀಮೆಸುಣ್ಣ, ಅಕ್ಕಿಕಾಳು, ಗೋಬಿಕಡ್ಡಿ, ಬೆಂಕಿಕಡ್ಡಿ, ಶೇಂಗಾಬೀಜ ಹಾಗೂ ವಿವಾಹ ಆಮಂತ್ರಣಗಳ ಮೇಲೆ ಕುಸುರಿ ಕಲೆಯನ್ನು ಮೂಡಿಸಿದ್ದಾರೆ. ಶೇಂಗಾಬೀಜದಲ್ಲಿ ಕನ್ನಡ ವರ್ಣಮಾಲೆ, ಸೀಮೆಸುಣ್ಣದಿಂದ ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ, ಚಿತ್ರನಟಿ ಶ್ರೀದೇವಿ ಅವರ ಚಿತ್ರವನ್ನು ಕೆತ್ತಿದ್ದಾರೆ. ಪೆನ್ಸಿಲ್ ಮದ್ದಿನಲ್ಲಿ ವರಮಹಾಲಕ್ಷ್ಮಿ ಹಾಗೂ ಆಂಗ್ಲ ಭಾಷೆಯ 'ಎ'ಯಿಂದ 'ಝಡ್'ವರೆಗೆ ಅಕ್ಷರ ಮಾಲೆ, ಗಣಪತಿ,

ಭದ್ರಾವತಿ ಹಳೇನಗರದ ನಿವಾಸಿ ಸಿದ್ದರಾಜು ಹಾಗೂ ತಾಯಿ ಗಾಯಿತ್ರಿ ದಂಪತಿಗಳ ಪುತ್ರ ಎಸ್. ವರುಣ್ ಕುಮಾರ್, ಗುರುಗಳ ಸಹಾಯವಿಲ್ಲದೆ ಸ್ವಪ್ರಯತ್ನದಿಂದ ಸತತ ಸಾಧನೆ ಮಾಡಿ ಯಶಸ್ಸುಗಳಿಸಬಹುದು ಎಂಬುದನ್ನು ಸಾಭೀತು ಪಡಿಸುವ ಮೂಲಕ ಗಮನ ಸೆಳೆದಿದ್ದಾನೆ. ಈತ ಒಂದೇ ಒಂದು ಬೆಂಕಿ ಕಡ್ಡಿಯಲ್ಲಿ ಕೇವಲ ಒಂದೇ ದಿನದಲ್ಲಿ ಅತ್ಯಂತ ಸಣ್ಣ ಪ್ರಮಾಣದ ಲಂಡನ್ ಬ್ರಿಡ್ಜ್ ತಯಾರಿಸಿದ್ದಾನೆ. ಈ ಸಾಧಕನಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಮೂಡಿರು ವುದು ವಿಶೇಷ. ಮೆಕ್ಕಾ ಮದೀನಾಗಳ ಕೆತ್ತನೆ ಹಾಗೂ ವಿವಾಹ ಆಮಂತ್ರಣ ಪತ್ರಗಳ ವಿಭಿನ್ನ ವಿನ್ಯಾಸಗಳ ರಚನೆಯಿಂದ ಗಮನಸೆಳೆ ದಿದ್ದಾರೆ. ಕಸದ ಬುಟ್ಟಿಗೆ ಸೇರಬೇಕಾದ ವಸ್ತುಗಳು ಈ ಸಾಧಕನ ಕೈ ಸೇರಿ ಶೋಕೇಸಿ ನಲ್ಲಿಡುವಂತಹ ಮಹತ್ವ ಪಡೆದು ಕೊಂಡಿರುವುದನ್ನು ಕಾಣಬಹುದಾಗಿದೆ.

ಇಂದು ದೇಶದ್ಯಾoತ ಎದುರು ನೋಡುತ್ತಿರುವ ರಾಮಮಂದಿರವನ್ನು ಪೆನ್ಸಿಲ್ ಲೆಡ್ ಮೇಲೆ ಕೆತ್ತನೆ ಮಾಡಿ ಮತ್ತೊಂದು ಸಾಧನೆಗೆ ಮುಂದಾಗಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಈ ಸಾಧಕನಿಗೊಂದು ಸೆಲ್ಯೂಟ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು