ದೇವರು ನೀಡಿದ ಜೀವ ಉಳಿಸಿ ಕೊಳ್ಳುವುದು ನಮ್ಮ ಕೈಯಲಿದೆ: ಸಂತೋಷ ಕುಮಾರ್

ವಿಜಯ ಸಂಘರ್ಷ
ಶಿವಮೊಗ್ಗ: ಜೀವನದಲ್ಲಿ ಶಿಸ್ತು ಅತಿ ಮುಖ್ಯ ಆ ಶಿಸ್ತನ್ನೆ ಬಂಡವಾಳ ಮಾಡಿಕೊಂಡು ನಮ್ಮ ಜೀವನವನ್ನು ನಾವು ಸಾಗಿಸಬೇಕು. ರಸ್ತೆಯಲ್ಲಿ ಓಡಾಡುವಾಗ ಸಂಚಾರ ನಿಯಮ ವನ್ನು ಪಾಲಿಸಿ ಅದಕ್ಕೆ ತಕ್ಕಂತೆ ನಾವು ಸ್ಪಂದಿಸಿದರೆ ದೇವರು ನೀಡಿದಂತಹ ಈ ಜೀವವು ಉಳಿಸಿಕೊಳ್ಳುವುದು ನಮ್ಮ ಕೈಯಲಿದೆ ಎಂದು ಶಿವಮೊಗ್ಗ ಸಂಚಾರ ವೃತ್ತದ ಸರ್ಕಲ್ ಪೋಲಿಸ್ ಇನ್ಸ್ ಪೆಕ್ಟರ್ ಸಂತೋಷ ಕುಮಾರ ಹೇಳಿದರು.
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಪೂರ್ವ ಸಂಚಾರ ಪೋಲಿಸ್ ಠಾಣೆ, ಶಿವಮೊಗ್ಗ ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆಯ ಸoಯುಕ್ತಾಶ್ರ ಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಜಿಲ್ಲಾ ಸ್ಕೌಟ್ ಭವನ ದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. 

ಸಂಚಾರಿ ನಿಯಮ ಪಾಲನೆಯಲ್ಲಿ ಅಲಕ್ಷ ತೋರಿದಲ್ಲಿ ಅನಾಹುತಗಳು ತಪ್ಪಿದ್ದಲ್ಲ. ಅನಾಹುತಗಳನ್ನು ತಪ್ಪಿಸಬೇಕಾದರೆ ಸಂಚಾರ ನಿಯಮ ಪಾಲನೆ ಅತ್ಯಗತ್ಯ ಎಂದರು.

ಠಾಣೆಯ ಪೋಲಿಸ್ ಮೌನೇಶ ಸಂಚಾರಿ ನಿಯಮಗಳನ್ನು ವೇದಿಕೆ ಯಲ್ಲಿ ಪ್ರದರ್ಶನದ ಮೂಲಕ ವಿವರಿಸಿದರು. ಶ್ರೀನಿವಾಸ ಪಿ.ಪಿ.ಟಿ ಮೂಲಕ ಅಪಘಾತದ ಬಗ್ಗೆ ಭಾವಚಿತ್ರಗಳ ತುಣುಕುಗಳನ್ನು ವಿವರಿಸಿ, ಪಾಲನೆ ಬಗ್ಗೆ ಹಾಗೂ ಅನಾಹುತಗಳ ಬಗ್ಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಪೂರ್ವ ಸಂಚಾರಿ ಠಾಣೆಯ ಪೋಲಿಸ್ ಸಬ್ ಇನ್ಸಪೆಕ್ಟರ್ ಗಳಾದ ನವೀನಕುಮಾರ, ಶಿವಣ್ಣನವರ, ತಿರುಮಲೇಶ, ಭಾರತಿ, ಕೃಷ್ಣಸ್ವಾಮಿ, ದಾಕ್ಷಾಯಿಣಿ , ಅಣ್ಣಪ್ಪ ಒಂಟಿಮಾಳಗಿ, ಚಂದ್ರಶೇಖರಯ್ಯ, ಉಪನ್ಯಾಸಕಿಯರಾದ ಭಾರತಿ, ಅನ್ನಪೂರ್ಣ ನಗರ ಶಾಲೆಯ ಸ್ಕೌಟ್ಸ್, ಗೈಡ್ಸ್, ರೋರ‍್ಸ್, ರೇಂಜರ‍್ಸ್ ಗಳು ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ ಸ್ವಾಗತಿಸಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭಾರತಿ ಡಾಯಸ್ ನಿರ್ವಹಿಸಿ, ಕಾರ್ಯದರ್ಶಿ ರಾಜೇಶ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು