ಕಿಡ್ನಿ ಬದಲಾವಣೆಗೆ ಆರ್ಥಿಕ ಸಹಾಯಕ್ಕೆ ಮನವಿ

ವಿಜಯ ಸಂಘರ್ಷ 
ಕೊಡ್ಲಿಪೇಟೆ: ಇಲ್ಲಿನ ಹೋಬಳಿಯ
ಬೆಸೂರು ಪಂಚಾಯಿತಿ ವ್ಯಾಪ್ತಿಯ ನಿಲುವಾಗಿಲು ಗ್ರಾಮದ ನಿವಾಸಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ 38 ವರ್ಷ ಎನ್‌.ಜಿ.ಯೋಗೇಶ್ ಜೀವ ಉಳಿಸಲು ಕಿಡ್ನಿ ಬದಲಾವಣೆ ಆನಿವಾರ್ಯವಿದ್ದು, ಆರ್ಥಿಕ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ದುಡಿಯುತ್ತಿದ್ದಂತಹ ಯೋಗೇಶ್‌ಗೆ ಕೆಲವು ವರ್ಷದ ಹಿಂದೆ ಬಿಪಿಯಲ್ಲಿ ಏರುಪೇರಾಗಿ ಆರೋಗ್ಯ ಹದಗೆಟ್ಟಿತ್ತು. ನಂತರ ಎರಡು ಕಿಡ್ನಿ ಸಮಸ್ಯೆ ಊಂಟಾಗಿ ಆನಾರೊಗ್ಯದಿಂದ ಬಳಲುತ್ತಿದ್ದಾರೆ.

ಪತ್ನಿ ಹಾಗೂ ಚಿಕ್ಕ ಹೆಣ್ಣುಮಗು, ತಾಯಿ ಇರುವ ಕುಟುಂಬಕ್ಕೆ ಇವರೆ ಆದಾರವಾಗಿದ್ದಾರೆ. ಚಿಕಿತ್ಸೆ ಕೊಡಿಸಲು ದಿಕ್ಕು ತೋಚದೆ ಸಂಕಷ್ಟದಲ್ಲಿರುವ ಇವರಿಗೆ, ಸ್ವತಃ ಹೆತ್ತ ತಾಯಿಯೆ ಒಂದು ಕಿಡ್ನಿ ನೀಡಲೂ ಮುಂದೆ ಬಂದಿದ್ದಾರೆ. ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ಕಿಡ್ನಿ ಬದಲಾವಣೆ ಚಿಕಿತ್ಸೆ ನಡೆಯಲಿದೆ. ಇದಕ್ಕೆ ದೊಡ್ಡ ಮೊತ್ತದ ಹಣದ ಅವಶ್ಯಕತೆ ಇದೆ. ದಾನಿಗಳ ನೆರವಿಗಾಗಿ ಬಡ ಕುಟುಂಬ ಕೈ ಚಾಚಿದೆ.

ಸಂಪರ್ಕ ಸಂಖ್ಯೆ: 8147059224, ಬ್ಯಾಂಕ್ ಖಾತೆಯ 2: Name : Yogesh N.g, Niluvagilu (v) Bessur (p), A/c No: 1757101012821, IFSC CODE :CNRB0001757, CANARA BANK, KODLIPE.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು