ವಿಜಯ ಸಂಘರ್ಷ
ಶಿಕಾರಿಪುರ: ಪಟ್ಟಣದ ಕನಕ
ಕೋ ಆಪರೇಟಿವ್ ಸೊಸೈಟಿಯಲ್ಲಿ ನಿರ್ದೇಶಕರ ಚುನಾವಣೆ ಪ್ರತಿಷ್ಠಿತ ಕಣವಾಗಿತ್ತು. ಚುನಾವಣೆಯಲ್ಲಿ ಸಮಾಜದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಘಟಾನುಘಟಿಗಳು ಉಮೇದುವಾರಿಕೆ ಸಲ್ಲಿಸಿದ್ದರು.
ಚುನಾವಣೆಯಲ್ಲಿ ಪ್ರತಿಷ್ಠೆಗೆ ತೆಗೆದುಕೊಂಡ ಹಲವರು ಬಾರಿ ಪೈಪೋಟಿಗೆ ಕಣಕ್ಕೆ ಸಜ್ಜಾಗಿತ್ತು. ಪ್ರತಿಬಾರಿಯಂತೆ ಅವಿರೋಧವಾಗಿ ಆಯ್ಕೆ ಆಗುತ್ತಿದ್ದ ನಿರ್ದೇಶಕರ ಚುನಾವಣೆಯು ಈ ಬಾರಿ ಜಿದ್ದಾಜಿದ್ದಿ ನಿಂದ ಕೂಡಿದ್ದನ್ನು ಅರಿತ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕಬ್ಬಡಿ ರಾಜಣ್ಣ, ಬಿಸಿ ವೇಣುಗೋಪಾಲ್ ಹಾಗೂ ಮುಖಂಡರು ಉಮೇದು ವಾರಿಕೆ ಸಲ್ಲಿಸಿದ್ದ ಸರ್ವರನ್ನು ಕರೆಸಿ ಸಭೆ ನಡೆಸಿ ಸಮಾಜದಲ್ಲಿ ರಾಜಕೀಯ ಬೆರಸದೆ, ಒಡಕು ಉಂಟಾಗದಂತೆ ಅವಿರೋಧವಾಗಿ ಆಯ್ಕೆ ಮಾಡಲು ನಿರ್ಧರಿಸಿ ನಿರ್ದೇಶಕರಾಗಿ ಕಾಂಗ್ರೆಸ್ ಮುಖಂಡ ಕುಸ್ತಿಪಟು ನಗರದ ಮಾಲತೇಶ್ ರವರನ್ನು ಆಯ್ಕೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ನಗರದ ಮಾಲತೇಶ್, ಕನಕ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ನಿರ್ದೇಶಕ ರಾಗಿ ಆಯ್ಕೆಗೆ ಸಹಕಾರ ನೀಡಿದ ಸಮಾಜದ ನಗರದ ಮಹದೇವಪ್ಪ, ಗೋಣಿ ಮಾಲತೇಶ್, ತ್ಯಾಗರ್ತಿ ಮೋಹನ್, ಬದ್ರಾಪುರ ಹಾಲಪ್ಪ ರವರಿಗೆ ಹಾಗೂ ಸಮಾಜದ ಎಲ್ಲಾ ಮುಖಂಡರಿಗೂ ಅಭಿನಂದನೆ ಸಲ್ಲಿಸಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ಉಮೇದುವಾರಿಕೆ ಸಲ್ಲಿಸಿದ್ದ ಬಿ ಆರ್ ರಾಘು, ಭೋಗಿ ಲಕ್ಷ್ಮಿ, ಹೊನ್ನಪ್ಪ, ಹಳ್ಳೂರು ಮಾಲತೇಶಪ್ಪ, ಮತ್ತಿಕೋಟೆ ಕರಿಬಸಪ್ಪ, ಪುಟ್ಟಪ್ಪ ತಿಮ್ಲಾಪುರ, ಮುನಿಯಪ್ಪ ದಿಂಡದಹಳ್ಳಿ, ಗುಡ್ಡಳ್ಳಿ ರೇಣುಕಮ್ಮ ದೇವೇಂದ್ರಪ್ಪ, ರೇವಣಪ್ಪ ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
(ವರದಿ ಹುಲಿಗಿ ಕೃಷ್ಣ)