ಶಾಲೆಯ ಹಳೇ ವಿದ್ಯಾರ್ಥಿಯಿಂದ ಹೈಟೆಕ್ ಭೋಜನಾಲಯ ಲೋಕಾರ್ಪಣೆ

ವಿಜಯ ಸಂಘರ್ಷ
ಸಾಗರ(ಆನಂದಪುರ) : ನಮಗೆ ಜನ್ಮ ನೀಡಿದ ತಂದೆ ತಾಯಿ, ಅಕ್ಷರ ಕಲಿಸಿದ ಗುರುಗಳು ಹಾಗೂ ಮಣ್ಣಿಗೆ ಋಣಿಯಾಗಿರಬೇಕು, ನನ್ನ ಏಳಿಗೆಗೆ ಈ ಸರ್ಕಾರಿ ಶಾಲೆ ಏನೆಲ್ಲಾ ನೀಡಿದೆ ಎಂದು ಹೇಳಲು ಸಾಧ್ಯವಿಲ್ಲ, ಇಂತಹ ಶಾಲೆಯ ಋಣ ತೀರಿಸಲು ನಾನು ಮುಂದಾದೆ. ಹಾಗಾಗಿ ಈ ಶಾಲೆಗೆ ಬೇಕಾದ ಆಧುನಿಕ ಭೋಜನಾಲಯ, ಅಡುಗೆ ಕೋಣೆ, ಅಡುಗೆ ಯಂತ್ರೋಪಕರಣ ಗಳು ಹೀಗೆ ಶಾಲೆಯ ಅಭಿವೃದ್ಧಿಗೆ 1 ಕೋಟಿಗೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ನೀಡಲಾಗಿದೆ ಎಂದು ಹಳೆಯ ವಿದ್ಯಾರ್ಥಿ ಪ್ರಕಾಶ್ ರುಕ್ಮಯ್ಯ ತಿಳಿಸಿದರು.

ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಒಂದು ಕೋಟಿ ರೂ .ವೆಚ್ಚದ ಎಂಬ ಹೈಟೆಕ್ ಭೋಜನಾಲಯ ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳ ಬಗ್ಗೆ ಪೋಷಕರು ತೋರಿಸುವ ಆಸಕ್ತಿಯನ್ನು ಸರ್ಕಾರಿ ಶಾಲೆಗಳ ಬಗ್ಗೆ ತೋರಿಸಿದರೆ ಸರ್ಕಾರಿ ಶಾಲೆಗಳು ಉಳಿದುಕೊಳ್ಳುತ್ತವೆ. ಇದು ನನ್ನ ಅಲ್ಪ ಸೇವೆ ಅಷ್ಟೇ,ಈ ಶಾಲೆಯನ್ನು ಕೆಲವೇ ವರ್ಷಗಳಲ್ಲಿ ಸ್ಮಾರ್ಟ್ ಶಾಲೆಯನ್ನಾಗಿ ಮಾಡುವ ಬಗ್ಗೆ ನನ್ನ ಗಮನವಿದೆ. ಶಾಲೆಯ ಎಲ್ಲ ತರಗತಿಗಳಿಗೂ ಸ್ಮಾರ್ಟ್ ಟಿವಿಗಳನ್ನ ಅಳವಡಿಸ ಲಾಗುತ್ತದೆ ಹಾಗೂ ಮುಂದಿನ ದಿನ ಗಳಲ್ಲಿ ಕ್ರೀಡಾ ವಿಭಾಗದ ವಿದ್ಯಾರ್ಥಿ ಗಳಿಗೆ ಪೂರಕವಾಗಿ ಸಹಕಾರವನ್ನು ನೀಡಲಾಗುವುದು" ಸರ್ಕಾರಿ ಶಾಲೆ ಯಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ನಮ್ಮ ಕಣ್ಮುಂದೆ ಇದೆ. ಶಾಲೆಯಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳು ತಮ್ಮ ಕೈಲಾದ ಸೇವೆಯನ್ನು ಸರ್ಕಾರಿ ಶಾಲೆಗಳಿಗೆ ಮಾಡುತ್ತಾ, ಉನ್ನತಿ ಕರಣಕ್ಕೆ ಗಮನಹರಿಸಬೇಕು ಎಂದು ತಿಳಿಸಿದರು.      

ಸರ್ಕಾರಿ ಶಾಲೆಗಳ ಸುಧಾರಣೆಗೆ ದಾನಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಮುಂಚೂಣಿಯಲ್ಲಿ ಬಂದರೆ ನಮ್ಮ ಎಲ್ಲಾ ಶಾಲೆಗಳು ಆಕರ್ಷಕವಾಗಲು, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಾಧ್ಯ ಇಂದು ಆನಂದಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಅಭಿವೃದ್ಧಿಗೆ ಮುಂದಾಗಿರುವ ಪ್ರಕಾಶ್ ರುಕ್ಮಯ್ಯ ಅವರ ಕಾರ್ಯ ಶ್ಲಾಘನೀಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಶ್ಲಾಘಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು