ಮಲ್ನಾಡ್ ಸ್ಪೋರ್ಟ್ಸ್ ಕ್ಲಬ್ ಅಂತಾರಾಜ್ಯ ಮಟ್ಟಕ್ಕೆ ಕಳಿಸಿಕೊಡುವ ಉದ್ದೇಶ ಹೊಂದಿದೆ: ಭಂಡಾರಿ ಮಾಲತೇಶ್

ವಿಜಯ ಸಂಘರ್ಷ
ಶಿಕಾರಿಪುರ: ಹೊಳೆಹೊನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸ ಲಾಗಿದ್ದ ಕುವೆಂಪು ವಿವಿ ಮಟ್ಟದ ಪುರುಷರ ಜೋಡೋ ಪಂದ್ಯಾವಳಿಯಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡ ಶಿಕಾರಿಪುರದ ಕುಸ್ತಿಪಟು ಗಳಿಗೆ ಶಿಕಾರಿಪುರ ಮಲ್ನಾಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಕ್ರೀಡಾಪಟುಗಳನ್ನು ಸನ್ಮಾನಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಭಂಡಾರಿ ಮಾಲತೇಶ್, ಶಿಕಾರಿಪುರದ ಯುವ ಪ್ರತಿಭೆಗಳಿಗೆ ಮಲ್ನಾಡ್ ಸ್ಪೋರ್ಟ್ಸ್ ಕ್ಲಬ್ ಪ್ರೋತ್ಸಾಹ ನೀಡುತ್ತಾ ಬಂದಿದೆ. ಯುವ ಆಟಗಾರರನ್ನು ಹಾಗೂ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ರಾಜ್ಯಮಟ್ಟಕ್ಕೆ ಹಾಗೂ ಅಂತಾರಾಜ್ಯ ಮಟ್ಟಕ್ಕೆ ಕಳಿಸಿಕೊಡುವ ಉದ್ದೇಶವೊಂದಿದ್ದು ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಕೊಡಲಿದ್ದೇವೆ ಎಂದರು.

ಚಿನ್ನದ ಪದಕ ವಿಜೇತ ಜೋಡೋ ಕುಸ್ತಿ ಪಂದ್ಯಾವಳಿಯ ಯುವ ಆಟಗಾರರಾದ ಸತೀಶ್, ಮನೋಜ್, ಪವನ್ ಈ ಮೂರು ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಲ್ನಾಡ್ ಸ್ಪೋರ್ಟ್ಸ್ ಕ್ಲಬ್ ಪದಾಧಿಕಾರಿಗಳಾದ ಪ್ರಶಾಂತ್ ಸಿಂಗ್, ಅಮೃತ್ ಸಿಂಗ್, ಪಚ್ಚಿ ಸಂದೀಪ್, ಕಿರಣ್ ಆಚಾರ್, ಜಗನ್ನಾಥ್, ಕಂಚುಗಾರ್ ಪ್ರಶಾಂತ್, ಅಶೋಕ್, ವಿನೀತ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು