ಕನ್ನಡ ಪುಸ್ತಕ-ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನರ್ಜನೆ ಬೆಳೆಸಿಕೊಳ್ಳಿ: ಕೋಡ್ಲು ಯಜ್ಞಯ್ಯ

ವಿಜಯ ಸಂಘರ್ಷ
ಭದ್ರಾವತಿ: ಕನ್ನಡ ಪುಸ್ತಕ ಹಾಗೂ ಪತ್ರಿಕೆ ಗಳನ್ನು ಓದುವ ಮೂಲಕ ಜ್ಞಾನರ್ಜನೆ ಬೆಳೆಸಿಕೊಳ್ಳಿ, ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದೆ ಈ ಹಿನ್ನಲೆಯಲ್ಲಿ ಕನ್ನಡ ಭಾಷೆ ಅರಿತು ವಿದ್ಯಾವಂತ ರಾಗಿ, ಸಾಹಿತಿಗಳಾಗಿ ಮುಂದೆ ಬನ್ನಿ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಡ್ಲು ಯಜ್ಞಯ್ಯ ತಿಳಿಸಿದರು.

ನಗರದ ಹಾಲಪ್ಪ ವೃತ್ತದ ಭದ್ರಾ ಪ್ರೌಢಶಾಲೆ ಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಭದ್ರಾ ಪ್ರೌಢಶಾಲೆ ಇವರ ಸಹಯೋಗದಲ್ಲಿ ಜರುಗಿದ ದತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಭದ್ರಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಾಲರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜ ಸೇವೆಗೆ ಹಾಗೂ ಶಿಕ್ಷಣಕ್ಕೆ ಕನ್ನಡ ಸಾಹಿತ್ಯ ಪರಿಷತ್ ಉತ್ತಮ ಕಾರ್ಯಕ್ರಮ ಮಾಡುತ್ತಾ ಬಂದಿದೆ. ಇದರಲ್ಲಿ ದತ್ತಿ ಕಾರ್ಯಕ್ರಮ ಒಂದಾಗಿದ್ದು, ಇದರಲ್ಲಿ ಸಮಾಜ ಸೇವೆಗೆ ಹಾಗೂ ಶಿಕ್ಷಣಕ್ಕೆ ಹೆಚ್ಚು ದತ್ತಿ ಕಾರ್ಯಕ್ರಮಗಳು ಹೆಚ್ಚು ಸಹಕಾರಿ ಯಾಗಲಿವೆ ಎಂದರು.

ಶಿವಮೊಗ್ಗ ವಿಶ್ರಾಂತ ಬಿಇಓ ಆರ್.ರತ್ನಯ್ಯ ಮಾತನಾಡಿ, ದತ್ತಿ ಕಾರ್ಯಕ್ರಮ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದೆ. ಸಾಹಿತ್ಯದ ಸೊಬಗನ್ನು ಜನರು ತಿಳಿಯಲಿ ಎಂದು ವಸುದೇವ ಭೂಪಾಳಂ ರವರ ಸಾಹಿತ್ಯವನ್ನು ಪರಿಚಯಿಸಲು ದತ್ತಿ ಕಾರ್ಯಕ್ರಮವನ್ನು ಪ್ರಾರಂಭಿಸ ಲಾಯಿತು. ಪ್ರತಿಯೊಬ್ಬರೂ ಪುಸ್ತಕಗಳನ್ನು ಕೊಂಡು ಓದಿ ಎಂದು ತಿಳಿಸಿದರು.

ಭದ್ರಾ ಪ್ರೌಢಶಾಲೆ ಎಸ್ ಬಿ ರುದ್ರಯ್ಯ ಮಾತನಾಡುತ್ತಾ, ಕೆಬಿಡಿ ಬೀರಯ್ಯ ರವರ ದತ್ತಿ ಉಪನ್ಯಾಸದಲ್ಲಿ ಸಾಹಿತ್ಯ ಮತ್ತು ಧಾರ್ಮಿಕ ಶ್ರೇಷ್ಠತೆಯ ಕುರಿತು ಸಾಹಿತ್ಯ ಮತ್ತು ಧರ್ಮ ಒಂದೇ ನಾಣ್ಯದ ಎರಡು ಮುಖಗಳು, ಕನ್ನಡ ಸಾಹಿತ್ಯ ಬೆಳೆದದ್ದು ಜನಪದ ಸಾಹಿತ್ಯದಿಂದ ಹಾಗೂ ಜೀವನದ ಧರ್ಮವನ್ನು ಒಗಟು, ಜನಪದ ಕಾವ್ಯದಲ್ಲಿ ನಮ್ಮ ಹಿಂದಿನವರು ತಿಳಿಸಿರುವರು, ಧರ್ಮಕ್ಕೂ ಸಾಹಿತ್ಯಕ್ಕೂ ನಿಕಟವಾದ ಸಂಬಂಧವಿದೆ ಎಂದರು

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಮಾತನಾಡಿ ಶಾಲೆಗಳಲ್ಲಿ ದತ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರೆ ಒಳ್ಳೆಯ ಪ್ರಯೋಜನವಾಗುತ್ತದೆ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಓದುಬರಹದ ಸಂಸ್ಕೃತಿಯನ್ನು ಬೆಳೆಸಿಕೊಳ್ಳುವುದು ಇಲ್ಲಿ ಸಾಧ್ಯವಾಗುತ್ತದೆ ಆಲಿಸುವ ಮತ್ತು ಮಾತನಾಡುವ ಕೌಶಲ್ಯ ಅರ್ಥಮಾಡಿ ಕೊಳ್ಳಬೇಕು ಮುಂದಿನ ದಿನಗಳಲ್ಲಿ ತಾವು ಉತ್ತಮವಾದ ವಾಗ್ಮಿ ಹಾಗೂ ಕವಿಗಳಾಗಬಹುದು ಎಂದು ತಿಳಿಸಿದರು.

ವಿದ್ಯಾರ್ಥಿ ಜುನೇರಾ ಪ್ರಾರ್ಥಿಸಿ, ಜಗದೀಶ್ ಪರಿಷತ್ ಎಂಇ ಸ್ವಾಗತಿಸಿದರೆ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಂಎಸ್ ಸುಧಾಮಣಿ ವೆಂಕಟೇಶ್ ರವರು ಎಲ್ಲರಿಗೂ ವಂದಿಸಿ, ನಾಗೋಜಿರಾವ್ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು