ನಗರಸಭಾಧ್ಯಕ್ಷರಾಗಿ ಲತಾ ಚಂದ್ರಶೇಖರ್ ಅವಿರೋಧ ಆಯ್ಕೆ

ವಿಜಯ ಸಂಘರ್ಷ
ಭದ್ರಾವತಿ: ನಗರಸಭೆ ನೂತನ‌ ಅಧ್ಯಕ್ಷೆಯಾಗಿ ಲತಾ ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಗೊಂಡರು.

ಈ ಹಿಂದೆ ನಡೆದಿದ್ದ ಅಧಿಕಾರ ಒಪ್ಪಂದದಂತೆ ಈವರೆಗೆ ಮೂವರು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದು, ನಾಲ್ಕನೆಯವರಾಗಿ ಲತಾ ಚಂದ್ರಶೇಖರ್ ಸದಸ್ಯರ ಒಮ್ಮತದ ಮೇರೆಗೆ ಅವಿರೋಧವಾಗಿ ಆಯ್ಕೆಗೊಂಡರು.

ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ಸತ್ಯನಾರಾಯಣ್, ಪೌರಾಯುಕ್ತ ಪ್ರಕಾಶ್ ಎಂ ಚೆನ್ನಪ್ಪನವರ್ ಪಾಲ್ಗೊಂಡಿದ್ದರು.

ನಂತರ ನಡೆದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್, ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಹಿರಿಯ ಸದಸ್ಯರಾದ ಬಿ.ಕೆ.ಮೋಹನ್, ವಿ.ಕದಿರೇಶ್, ಬಿ.ಟಿ.ನಾಗರಾಜ್, ಮಾಜಿ ಅಧ್ಯಕ್ಷರುಗಳಾದ ಗೀತಾರಾಜ್ ಕುಮಾರ್, ಅನುಸುಧ ಮೋಹನ್ ಪಳನಿ, ಶೃತಿ ವಸಂತಕುಮಾರ್, ಸದಸ್ಯರಾದ ಮಣಿ, ಜಾರ್ಜ್, ಚೆನ್ನಪ್ಪ, ಸುದೀಪ್ ಕುಮಾರ್, ಯಶಸ್, ಮಂಜುನಾಥ್, ಪ್ರೇಮ ಬದರಿನಾರಾಯಣ್, ಮಾಜಿ ಸದಸ್ಯೆ ಲಕ್ಷ್ಮೀದೇವಿ ಸೇರಿದಂತೆ ಹಲವರು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು