ವಿಜಯ ಸಂಘರ್ಷ
ಭದ್ರಾವತಿ: ತಾಲ್ಲೂಕಿನ ಹೊಳೆ ಹೊನ್ನೂರು ಸಮೀಪದ ಹನುಮಂತಾಪುರ ರಸ್ತೆಯಲ್ಲಿನ ವಿದ್ಯುತ್ ಕಂಬದಲ್ಲಿ ತಂತಿ ದುರಸ್ತಿ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಸೋಮವಾರ ಬೆಳಗ್ಗೆ ತೋಟಗಳ ಐಪಿ ಸೆಟ್ ಲೈನ್ ದುರಸ್ತಿ ಮಾಡುವಾಗ ವಿದ್ಯುತ್ ಪ್ರವಹಿಸಿದೆ. ವಿದ್ಯುತ್ ತಗುಲಿ ಕಂಬದ ಮೇಲಿಂದ ಬಿದ್ದ ಲೈನ್ ಮ್ಯಾನ್ ಚಂದ್ರಶೇಖರ್ ಲಮಾಣಿ (28) ಸ್ಥಳದಲ್ಲೆ ಸಾವನಪ್ಪಿದ್ದಾನೆ. ಹೊಳೆಹೊನ್ನೂರಿನ ವಿದ್ಯುತ್ ವಿತರಣ ಕೇಂದ್ರದಲ್ಲಿ ಲೈನ್ ಚಾರ್ಜ್ ಮಾಡಲು ಜ್ಯೂನಿಯರ್ಗಳನ್ನು ನೇಮಿಸಿದ ಕಾರಣ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಹೊಳೆಹೊನ್ನೂರು ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿಲಾಯಿತ್ತು. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂದ್ರಶೇಖರ್ ಲಮಾಣಿ ಹಾವೇರಿ ಜಿಲ್ಲೆ ಬ್ಯಾಡಗೀ ತಾಲ್ಲೂಕು ಸಿಡೆನೂರು ಗ್ರಾಮದರಾಗಿದ್ದು, ಕಳೆದ 9 ವರ್ಷ ದಿಂದ ಅರಹತೊಳಲು ಕೈಮರ ಶಾಖೆಯಲ್ಲಿ ಲೈನ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಎರಡು ವರ್ಷದ ಹಿಂದೆ ಮದುವೆಯಾದ ಇವರು ಪತ್ನಿ, ತಂದೆ ಹಾಗೂ ತಾಯಿಯನ್ನು ಅಗಲಿದ್ದಾರೆ.