ವಿಜಯ ಸಂಘರ್ಷ
ಸಾಗರ (ಆನಂದಪುರ): ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ, ರಮಲಲ್ಲಾಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಹಿನ್ನೆಲೆ ಯಲ್ಲಿ ಆನಂದಪುರದಲ್ಲಿ ಕೇಸರಿ ಧ್ವಜಗಳ ಬಂಟಿoಗ್ಸ್, ಬಾಳೆಕಂಬ ಗಳಿoದ , ಲೈಟಿಂಗ್ಸ್ ರಸ್ತೆಯ ಎರಡೂ ಬದಿಗಳನ್ನು ಸಿಂಗರಿಸಲಾಗಿತ್ತು.
ಪ್ರತಿ ಮನೆ ಮನೆಗಳ ಮೇಲೆ ಶ್ರೀರಾಮ್ ಧ್ವಜ ರಾರಾಜಿಸುತ್ತಿತ್ತು.ಬಸ್ ನಿಲ್ದಾಣದ ಆವರಣದಲ್ಲಿ ಶ್ರೀರಾಮನ ರಥ ಗಮನ ಸೆಳೆಯಿತು. ಮಹಿಳಾ ಭಜನಾ ತಂಡದವರಿoದ ಸೋಮವಾರ ಸಾಮೂಹಿಕ ಭಜನೆ ನಡೆಯಿತು. ನಂತರ ಮಂಗಳವಾದ್ಯ, ಶ್ರೀರಾಮ್ ಜೈಕಾರದೊಂದಿಗೆ ಶ್ರೀಲಕ್ಷ್ಮಿ ರಂಗನಾಥ ದೇವಾಲಯದಿಂದ ಮುಖ್ಯರಸ್ತೆ ಯಲ್ಲಿ ಮೆರವಣಿಗೆ ನಡೆಯಿತು.
ಪುಟ್ಟಮಕ್ಕಳು ರಾಮ, ಸೀತೆ, ಶಬರಿ ವೇಷ ಧರಿಸಿ ಪಾಲ್ಗೊಂಡಿದ್ದರು. ಮೆರವಣಿಗೆಯ ನಂತರ ಲಕ್ಷ್ಮಿರಂಗನಾಥ ದೇವಾಲಯದ ಆವರಣದಲ್ಲಿ ಅಳವಡಿಸಲಾಗಿದ್ದ ಬೃಹತ್ ಎಲ್ ಇ ಡಿ ಪರದೆಯ ಮೂಲಕ ಶ್ರೀರಾಮ ಮಂದಿರದ ನೇರಪ್ರಸಾರವನ್ನು ಎಲ್ಲರೂ ಒಂದೆಡೆ ಕುಳಿತು ನೋಡಿ ಧನ್ಯತಾ ಭಾವ ಮೆರೆದರು. ತದನಂತರ ದೇವಾಲಯದಲ್ಲಿ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಸಲಾಯಿತು.
ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಆನಂದಪುರದ ಎಲ್ಲಾ ದೇವಾಲಯಗಳ ಸಮಿತಿ, ಸದ್ಭಕ್ತರು, ಸಾರ್ವಜನಿಕರು, ಧರ್ಮರಕ್ಷಾ ಸಮಿತಿ ಕಾರ್ಯಕರ್ತರು, ಹಿಂದೂ ಸಮಾಜದ ಕಾರ್ಯಕರ್ತರು ಸೇರಿಕೊಂಡ ಕಾರ್ಯಕ್ರಮ ಯಶಸ್ವಿಯಾಯಿತು.
“ ಶ್ರೀರಾಮಮಂದಿರದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸರ್ಕಾರ ಶಾಲೆಗೆ ರಜೆ ನೀಡದಿರುವುದು ತುಂಬಾ ನೋವು ತಂದಿತ್ತು ಆದರೆ ನಾನು ನನ್ನ ಸಹೋದರ ಶ್ರೇಯಸ್ ಮತ್ತು ನನ್ನ ಗೆಳೆಯರೆಲ್ಲಾ ಸೇರಿ ನಾವು ನಮ್ಮ ಪೋಷಕರ ಸಹಮತದೊಂದಿಗೆ ಇಂದು ಶಾಲೆಗೆ ಹೋಗದೇ ನಮ್ಮೂರಿನಲ್ಲಿ ನಡೆಯುವ ಮೆರವಣಿಗೆಯಲ್ಲಿ ಪಾಲ್ಗೊಂಡು, ರಾಮ ನಾಮಜಪಿಸಿ, ನೇರಪ್ರಸಾರ ವೀಕ್ಷಿಸಿರುವುದು ನನ್ನ ಜೀವನದ ಸುವರ್ಣಮಯ ಕ್ಷಣವಾಗಿದೆ. ಒಮ್ಮೆಯಾದರೂ ಅಯೋಧ್ಯೆಗೆ ಭೇಟಿ ನೀಡಲೇಬೇಕೆಂಬ ಹಂಬಲ ಮೂಡಿದೆ. ”
-ನಿಶ್ಚಲ್ ಸಿ. ಶಾಲಾ ವಿದ್ಯಾರ್ಥಿ, ಆನಂದಪುರ